Please enable javascript.ಭವ್ಯತೆಯ ದೃಷ್ಟಿಯಿದ್ದಾಗ ದಿವ್ಯತೆಯ ಸೃಷ್ಟಿ - ಭವ್ಯತೆಯ ದೃಷ್ಟಿಯಿದ್ದಾಗ ದಿವ್ಯತೆಯ ಸೃಷ್ಟಿ - Vijay Karnataka

ಭವ್ಯತೆಯ ದೃಷ್ಟಿಯಿದ್ದಾಗ ದಿವ್ಯತೆಯ ಸೃಷ್ಟಿ

ವಿಕ ಸುದ್ದಿಲೋಕ 29 Dec 2014, 4:03 am
Subscribe

ಭವ್ಯತೆಯ ದಷ್ಟಿಯಿದ್ದಾಗ ದಿವ್ಯತೆಯ ಸಷ್ಟಿಯಾಗುವುದು. ಪ್ರತಿ ಯೊಬ್ಬರಲ್ಲಿಯೂ ಧರ್ಮಶ್ರದ್ಧೆಯಿದ್ದಾಗ ಮಾತ್ರ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪುನರುತ್ಥಾನದ ಭಾಗ್ಯ ಪಡೆಯುತ್ತವೆ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ನುಡಿದರು.

ಭವ್ಯತೆಯ ದೃಷ್ಟಿಯಿದ್ದಾಗ ದಿವ್ಯತೆಯ ಸೃಷ್ಟಿ
ವಿಟ್ಲ: ಭವ್ಯತೆಯ ದಷ್ಟಿಯಿದ್ದಾಗ ದಿವ್ಯತೆಯ ಸಷ್ಟಿಯಾಗುವುದು. ಪ್ರತಿ ಯೊಬ್ಬರಲ್ಲಿಯೂ ಧರ್ಮಶ್ರದ್ಧೆಯಿದ್ದಾಗ ಮಾತ್ರ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪುನರುತ್ಥಾನದ ಭಾಗ್ಯ ಪಡೆಯುತ್ತವೆ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ನುಡಿದರು.

ಅವರು ಭಾನುವಾರ ಕಬಕ ಗ್ರಾಮದ ಅಡ್ಯಾರಗೋಳಿ ಶ್ರೀ ಅಡ್ಯಲಾಯ ಮತ್ತು ಪರಿವಾರ ದೆವಗಳ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಮ್ಮ ಬದುಕು ನೆರಳು ನೀಡುವ ಮರದಂತಿರಬೇಕು. ಎಲ್ಲಕ್ಕಿಂತಲೂ ಮಿಗಿ ಲಾದ ಮನುಷ್ಯ ಸಂಕಲ್ಪ ಶಕ್ತಿಯಿಂದ ಮಾತ್ರ ಮೂರು ವರ್ಷಗಳೊಳಗೆ ದೆವಭಕ್ತರಿಂದ ಇಲ್ಲಿ ಇಂತಹ ಇತಿಹಾಸ ಪುಟ ಸೇರುವ ಕಾರ್ಯ ಕೆಗೂಡಿದೆ ಎಂದು ಹೇಳಿದರು.

ನಿಸ್ವಾರ್ಥಯುಕ್ತ ದಾನಧರ್ಮಗಳಿಗೆ ಮಾತ್ರ ಸತ್ಫಲವಿದೆ. ಸರಳತೆಯ ಬದುಕಿ ನಲ್ಲಿ ಹದಯ ಸಿರಿವಂತಿಕೆ ತುಂಬಿ ರಬೇಕು ಎಂದು ಧಾರ್ಮಿಕ ಉಪನ್ಯಾಸ ನೀಡಿದ ಮಂಗಳೂರು ಅಳಪೆ, ಕರ್ಮಾರು ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ ತಿಳಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಉದ್ಯಮಿ ಅಶೋಕ್ ಕುಮಾರ್ ರೆ, ಪುತ್ತೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನಾಧಿಕಾರಿ ವಸಂತ ಬಿ. ಭಾಗವಹಿಸಿದ್ದರು.

ಶ್ರೀಅಡ್ಯಲಾಯ ಪರಿವಾರ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಿಂಬ್ರಿ ಗುತ್ತು ಸತೀಶ್ ರೆ ಡಿ.ಕೆ.ಡಿಂಬ್ರಿಗುತ್ತು, ಗೌರವಾಧ್ಯಕ್ಷ ಅಜಿತ್ ಕುಮಾರ್ ಜೆನ್ ಕಲ್ಲೇಗ, ಕೋಶಾಧಿಕಾರಿ ರಮೇಶ್ ಆಚಾ ರ್ಯ ಕೆದಿಮಾರು ಉಪಸ್ಥಿತರಿದ್ದರು.

ದೆವಗಳ ಧರ್ಮ ಚಾವಡಿ ಪುನರ್ ನಿರ್ಮಾಣಕ್ಕೆ ಸಹಕರಿಸಿದ ಮಹನೀ ಯರುಗಳನ್ನು ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯ ದರ್ಶಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ ಸ್ವಾಗತಿಸಿದರು. ಸ್ವಾಗತ ಸಮಿತಿ ಸಹ ಸಂಚಾಲಕ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಪ್ರಸ್ತಾವಿಸಿದರು.

ಜತೆ ಕಾರ್ಯದರ್ಶಿ ರವೀಂದ್ರ ಮೇಲಾಂಟ ವಂದಿಸಿದರು. ವೇದಿಕೆ ಹಾಗೂ ಸಾಂಸ್ಕೃತಿಕ ಸಮಿತಿ ಸಂಚಾಲಕ ರವೀಂದ್ರ ಗೌಡ ಪೋಳ್ಯ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ