Please enable javascript.ಗಣಿಗಾರಿಕೆ,ಗಣಿಗಾರಿಕೆ ತೊಗಲಿಸಿ ಕೆ.ಆರ್‌.ಎಸ್‌ ಉಳಿಸಿ - leave mining and save krs - Vijay Karnataka

ಗಣಿಗಾರಿಕೆ ತೊಗಲಿಸಿ ಕೆ.ಆರ್‌.ಎಸ್‌ ಉಳಿಸಿ

Vijaya Karnataka 12 Nov 2018, 5:00 am
Subscribe

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ‍್ಯಕರ್ತರು ನಡೆಸುತ್ತಿರುವ ಮೈಸೂರು-ಬೆಂಗಳೂರು ಪಾದಯಾತ್ರೆಗೆ ಭಾನುವಾರ ನಗದಲ್ಲಿ ಚಾಲನೆ ನೀಡಲಾಯಿತು.

leave mining and save krs
ಗಣಿಗಾರಿಕೆ ತೊಗಲಿಸಿ ಕೆ.ಆರ್‌.ಎಸ್‌ ಉಳಿಸಿ
ಮಂಡ್ಯ : ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ‍್ಯಕರ್ತರು ನಡೆಸುತ್ತಿರುವ ಮೈಸೂರು-ಬೆಂಗಳೂರು ಪಾದಯಾತ್ರೆಗೆ ಭಾನುವಾರ ನಗದಲ್ಲಿ ಚಾಲನೆ ನೀಡಲಾಯಿತು.

ನಗರದ ಮಹಾವೀರ ವೃತ್ತಕ್ಕೆ ಮೈಸೂರಿನಿಂದ ಪಾದಯಾತ್ರೆ ಮೂಲಕ ಆಗಮಿಸಿದ ಕಾರ‍್ಯಕರ್ತರು 'ಗಣಿಗಾರಿಕೆ ತೊಗಲಿಸಿ ಕೆ.ಆರ್‌.ಎಸ್‌ ಉಳಿಸಿ' ಎಂಬ ಘೋಷಣೆಯೊಂದಿಗೆ ಅಕ್ರಮ ಗಣಿಗಾರಿಕೆಯಿಂದಾಗಿ ಕೆ.ಆರ್‌.ಎಸ್‌ಗೆ ಭಾರಿ ಗಂಡಾಂತರ ಒದಗುವುದು ನಿಶ್ಚಿತ. ಸರಕಾರ ತಕ್ಷಣ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕಾವೇರಿ ಹೋರಾಟಗಾರ ಜಿ.ಮಾದೇಗೌಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆಗೆ ಶಾಶ್ವತ ನಿಷೇಧ ವಿಧಿಸಿ, ಕೆ.ಆರ್‌.ಎಸ್‌ ಜಲಾಶಯ ರಕ್ಷಿಸಬೇಕು. ಗಣಿಗಾರಿಕೆ ನಡೆಸಲು ಸರಕಾರದಿಂದ ಲೈಸೆನ್ಸ್‌ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಗಣಿಗಾರಿಕೆಯಿಂದ ಉಂಟಾಗುವ ತೊಂದರೆಗಳ ಕುರಿತು ಪರಿಶೀಲನೆ ನಡೆಸಬೇಕಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸುವುದು ಉತ್ತಮ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ‍್ಯಕರ್ತರ ಪಾದಯಾತ್ರೆ ಸರಕಾರವನ್ನು ಬಡಿದೊಬ್ಬಿಸುವ ಕೆಲಸ ಮಾಡಲಿ ಎಂದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶಗೌಡ ಮಾತನಾಡಿ, ಗಣಿಗಾರಿಕೆಗೆ ಶಾಶ್ವತ ನಿಷೇಧ ವಿಧಿಸಿ ಕೆ.ಆರ್‌.ಎಸ್‌ ಉಳಿಸಿ ಎಂಬುವ ನಿಟ್ಟಿನಲ್ಲಿ ನ.9ರಂದು ಮೈಸೂರಿನಿಂದ ಪಾದಯಾತ್ರೆ ಪ್ರಾರಂಭಿಸಿ ಭಾನುವಾರ ಮಂಡ್ಯ ನಗರಕ್ಕೆ ಆಗಮಿಸಿದ್ದೇವೆ. ಪಾದಯಾತ್ರೆಯು ಮದ್ದೂರು, ಚನ್ನಪಟ್ಟಣ, ಕೆಂಗೇರಿ ಮೂಲಕ ನ.15ರಂದು ಬೆಂಗಳೂರಿನ ಪ್ರೀಡ್‌ಂ ಪಾರ್ಕ್‌ನಲ್ಲಿ ಧರಣಿ ನಡೆಸಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಕೆ ನಂತರ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲಾ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಪ್ರಗತಿಪರ ಸಂಘಟನೆಗಳ ಸದಸ್ಯರು ಪಾದಯಾತ್ರೆ ಮೂಲಕ ನಗರಕ್ಕೆ ಆಗಮಿಸಿ ಕಾರ‍್ಯಕರ್ತರನ್ನು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿದರು. ಪಾದಯಾತ್ರೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮಳವಳ್ಳಿ ಶ್ರೀನಿವಾಸ್‌, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಹರೀಶ್‌, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಹೇಮಾ ಜೈನ್‌, ಜಿಲ್ಲಾಧ್ಯಕ್ಷ ಉಮಾಶಂಕರ್‌, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಮತ, ಮಂಡ್ಯ ತಾಲೂಕು ಅಧ್ಯಕ್ಷ ಸುಮನ್‌, ಮೈಸೂರು ಜಿಲ್ಲಾಧ್ಯಕ್ಷ ಗಿರೀಶ್‌, ರಾಮನಗರ ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಚಂದ್ರಶೇಖರ್‌, ಪ್ರಗತಿಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡ, ದೀಪಕ್‌ ಸ್ವರ್ಣಸಂದ್ರ, ಉಪೇಂದ್ರ, ಸೋಮು ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ