Please enable javascript.Msysuru,ಸವಿತ ಸಮಾಜ ಪ್ರವರ್ಗ-1 ಕ್ಕೆ ಸೇರಿಸಲು ಸಿಎಂಗೆ ಒತ್ತಡ - the pressure on the cm to add to the savita samaj pravarga -1 - Vijay Karnataka

ಸವಿತ ಸಮಾಜ ಪ್ರವರ್ಗ-1 ಕ್ಕೆ ಸೇರಿಸಲು ಸಿಎಂಗೆ ಒತ್ತಡ

Vijaya Karnataka 28 Jul 2018, 5:00 am
Subscribe

ಸವಿತ ಸಮಾಜ ಸೇರಿದಂತೆ ಶೋಷಿತ ಸಣ್ಣ ಪುಟ್ಟ ಸಮಾಜಗಳನ್ನು 2 ಎ ಯಿಂದ ಪ್ರವರ್ಗ-1 ಕ್ಕೆ ಸೇರಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವುದಾಗಿ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

the pressure on the cm to add to the savita samaj pravarga 1
ಸವಿತ ಸಮಾಜ ಪ್ರವರ್ಗ-1 ಕ್ಕೆ ಸೇರಿಸಲು ಸಿಎಂಗೆ ಒತ್ತಡ
ಹುಣಸೂರು : ಸವಿತ ಸಮಾಜ ಸೇರಿದಂತೆ ಶೋಷಿತ ಸಣ್ಣ ಪುಟ್ಟ ಸಮಾಜಗಳನ್ನು 2 ಎ ಯಿಂದ ಪ್ರವರ್ಗ-1 ಕ್ಕೆ ಸೇರಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವುದಾಗಿ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಸವಿತ ಸಮಾಜದ ವತಿಯಿಂದ ಆಯೋಜಿಸಿದ್ದ ಶ್ರೀಹಡಪದ ಅಪ್ಪಣ್ಣಸ್ವಾಮಿ ಅವರ ಪ್ರಥಮ ಜಯಂತಿ ಉದ್ಘಾಟಿಸಿ ಮಾತನಾಡಿದರು. '' ಸವಿತ ಸಮಾಜದಂಥÜ ಶೋಷಿತ ಸಮಾಜಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ತಮ್ಮ ಮಕ್ಕಳನ್ನು ಶಿಕ್ಷ ಣವಂತರಾಗಿಸಿ, ಉನ್ನತ ಹುದ್ದೆ ಪಡೆಯಲು ಶ್ರಮ ಹಾಕಿ'' ಎಂದು ಸೂಚಿಸಿದರು.

''ಈ ಹಿಂದೆ ಸಮಾಜವನ್ನು ಕಡೆಗಣಿಸುವ ಪ್ರವೃತ್ತಿ ಇತ್ತು, ಇದೀಗ ಎಲ್ಲ ಸಮಾಜಗಳು ಗೌರವದಿಂದ ಕಾಣುತ್ತಿವೆ. ಇದಕ್ಕೆ ನಿಮ್ಮ ವೃತ್ತಿಯ ಜತೆಗೆ ಶಿಕ್ಷ ಣ ಪಡೆಯುತ್ತಿರುವುದೇ ದೊಡ್ಡ ಗೌರವವೆಂದರು. ಇಂಥ ಸಮಾಜಗಳು ಒಗ್ಗೂಡುವ ಮೂಲಕ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ, ನಿವೇಶನ ಸೇರಿದಂತೆ ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ'' ತಿಳಿಸಿದರು.

ಹಡಪದ ಹಪ್ಪಣ್ಣರ ಕುರಿತು ಶಿಕ್ಷ ಣ ಇಲಾಖೆಯ ರಂಗಯ್ಯನಕೊಪ್ಪಲು ಮಾಧುಪ್ರಸಾದ್‌ ಮಾತನಾಡಿದರು. '' ಹಡಪದ ಅಪ್ಪಣ್ಣ ಅವರ ಹುಟ್ಟೂರು, ಮತ್ತಿತರ ಪೂರ್ವಪರದ ಮಾಹಿತಿ ಇಲ್ಲ. ಆದರೆ ಅವರ ವಚನ ಸಾಹಿತ್ಯವು ಬಹಳಷ್ಟು ವಿಮರ್ಶೆಗೊಳಪಟ್ಟಿದೆ. ವಚನ ಸಾಹಿತ್ಯದಲ್ಲಿ 2 ಸಾವಿರಕ್ಕೂ ಅಧಿಕ ವಚನಗಳಿದ್ದು, ಅದರಲ್ಲಿ ಹಡಪದ ಅಪ್ಪಣ್ಣ ಅವರ 223 ವಚನಗಳು ಪ್ರಮುಖವಾದವು. ಬಸವ ಪೂರ್ವ ಹಾಗೂ ಬಸವನಂತರದ ವಚನಕಾರರಿವರು'' ಎಂದರು.

'' ಇವರು 12ನೇ ಶತಮಾನದ ಬಸವಣ್ಣ ಅವರ ಅನುಭವ ಮಂಟಪದಲ್ಲಿದ್ದುದ್ದನ್ನು ಮಹಾ ಅಪರಾಧ ಎಂದು ಕೆಲವರು ಕುಹಕವಾಡುತ್ತಿದ್ದರು. ಎಂಥ ಸಂದರ್ಭ ತಮ್ಮ ತನವನ್ನು ಬಿಟ್ಟುಕೊಟ್ಟವರಲ್ಲ, ಇವರು ಬಂಡಾಯ ವಚನಕಾರರಾಗಿದ್ದರಲ್ಲದೆ ಜನಪದ ಸಾಹಿತ್ಯದಲ್ಲಿ ವೀರರಾಗಿದ್ದರು. ಶೋಷಿತರಿಗೆ ಧÜ್ವನಿಯಾಗಿದ್ದವರು. ಇಂಥÜ ಮಹಾನ್‌ ವ್ಯಕ್ತಿಯ ವಚನಗಳನ್ನು ಓದುವ ಮೂಲಕ ಅಥೈರ್‍ಸಿಕೊಳ್ಳಬೇಕೆಂದು'' ಆಶಿಸಿದರು.

ತಾಲೂಕು ಅಧ್ಯಕ್ಷ ಗದ್ದಿಗೆ ಗೌರೀಶ್‌ ಮಾತನಾಡಿ, '' ಪ್ರಥಮವಾಗಿ ನಡೆಯುತ್ತಿರುವ ಹಡಪದ ಅಪ್ಪಣ್ಣ ಅವರ ಜಯಂತಿ ಸಮಾಜಕ್ಕೆ ಹರ್ಷ ತಂದಿದೆ. ಹುಣಸೂರು ನಗರದಲ್ಲಿ ಸಮಾಜದ ಚಟುವಟಿಕೆಗಳಿಗೆ ಭವನ ಅವಶ್ಯವಿದ್ದು, ಸೂಕ್ತ ನಿವೇಶನ ಕೊಡಿಸಬೇಕು'' ಎಂದು ಶಾಸಕರಲ್ಲಿ ಮನವಿ ಮಾಡಿದರು.

ಸಾಂಬಸದಾಶಿವ ಸ್ವಾಮಿಜಿ, ನಟರಾಜ ಸ್ವಾಮಿಜಿ, ತಹಸೀಲ್ದಾರ್‌ ಮೋಹನ್‌, ಸಮಿತಿ ಸದಸ್ಯ ಎಸ್‌.ಜಯರಾಂ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ನೂರು ಮಂದಿ ಕಲಾವಿದರಿಗೆ ಗಣ್ಯರು ಸನ್ಮಾನಿಸಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಶಿವಕುಮಾರ್‌, ಜಿ.ಪಂ.ಸದಸ್ಯ ಸುರೇಂದ್ರ, ತಾ.ಪಂ . ಅಧ್ಯಕ್ಷೆ ಪದ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್‌, ನಗರಸಭೆ ಸದಸ್ಯ ಬಾಬು, ಇಒ ಕೃಷ್ಣಕುಮಾರ್‌, ಸವಿತಾ ಸಮಾಜದ ಪದಾಧಿಕಾರಿಗಳಾದ ದೇವರಾಜ್‌, ರಮೇಶ್‌, ಮಾದಪ್ಪ, ಜಲೇಂದ್ರ, ಕೃಷ್ಣ, ರಂಗಸ್ವಾಮಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.

ನಾದಸ್ವರದ ಸಾಂಸ್ಕೃತಿಕ ಮೆರವಣಿಗೆ


ಕಾರ್ಯಕ್ರಮಕ್ಕೂ ಮುನ್ನ ಮಂಜುನಾಥ ದೇವಾಲಯದ ಬಳಿಯಿಂದ ಬೆಳ್ಳಿ ರಥದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರವನ್ನಿರಿಸಿ ವೈಭವದ ಮೆರವಣಿಗೆಯಲ್ಲಿ ಕಳಸ ಹೊತ್ತ ನೂರಾರು ಹೆಂಗಳೆಯರು ಹಾಗೂ ನೂರಕ್ಕೂ ಹೆಚ್ಚು ಸಮಾಜದ ಕಲಾವಿದರು ಸ್ಯಾಕ್ಸಫೋನ್‌, ನಾದಸ್ವರ, ಡೋಲು ನುಡಿಸುವ ಮೂಲಕ ಇಡೀ ಮೆರವಣಿಗೆಗೆ ಕಳೆಕಟ್ಟಿತ್ತು. ನಾದಸ್ವರದ ನೀನಾದವನ್ನು ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಆಸ್ವಾಧಿಸಿದರು. ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಮಾಜದ ಮಂದಿ ಭಾಗವಹಿಸಿದ್ದರು.
MYR-mys27hun4

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ