Please enable javascript.ಆರ್‌ಟಿಇ ಗೊಂದಲ ನಿವಾರಣೆಗೆ ಒತ್ತಾಯ - ಆರ್ಟಿಇ ಗೊಂದಲ ನಿವಾರಣೆಗೆ ಒತ್ತಾಯ - Vijay Karnataka

ಆರ್‌ಟಿಇ ಗೊಂದಲ ನಿವಾರಣೆಗೆ ಒತ್ತಾಯ

ವಿಕ ಸುದ್ದಿಲೋಕ 16 Mar 2017, 9:00 am
Subscribe

ಆರ್‌ಟಿಇ ಗೊಂದಲ ನಿವಾರಣೆಗೆ ಒತ್ತಾಯ ವಿಕ ಸುದ್ದಿಲೋಕ, ಲಿಂಗಸುಗೂರು ಕಡ್ಡಾಯ ಶಿಕ್ಷ ಣ ಹಕ್ಕು ಕಾಯಿದೆಯಡಿ ಶಾಲೆಗಳಿಗೆ ಪ್ರವೇಶ ಕೋರಿ ಅರ್ಜಿಗಳನ್ನು ಸಲ್ಲಿಸಲು ಪಾಲಕರಿಗೆ ...

ಆರ್‌ಟಿಇ ಗೊಂದಲ ನಿವಾರಣೆಗೆ ಒತ್ತಾಯ

ಲಿಂಗಸುಗೂರು: ಕಡ್ಡಾಯ ಶಿಕ್ಷ ಣ ಹಕ್ಕು ಕಾಯಿದೆಯಡಿ ಶಾಲೆಗಳಿಗೆ ಪ್ರವೇಶ ಕೋರಿ ಅರ್ಜಿಗಳನ್ನು ಸಲ್ಲಿಸಲು ಪಾಲಕರಿಗೆ ತೊಂದರೆ ಆಗುತ್ತಿದ್ದು, ಶಿಕ್ಷ ಣ ಇಲಾಖೆ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆಗುತ್ತಿರುವ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಸಾಲಿಡಾರಿಟಿ ಯೂತ್‌ ಮೂವ್‌ಮೆಂಟ್‌ನ ತಾಲೂಕು ಘಟಕದ ಕಾರ್ಯಕರ್ತರು ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ ಮೂಲಕ ಮಂಗಳವಾರ ಮನವಿ ರವಾನಿಸಿದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಕಚೇರಿ ಅಧಿಕಾರಿ ಮೂಲಕ ಶಿಕ್ಷ ಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿ, ಆರ್‌ಟಿಇ ಅರ್ಜಿ ಸಲ್ಲಿಸುವಾಗ ವಾರ್ಡ್‌ಗಳ ವಿವರ ಸರಿಯಾಗಿ ಅರ್ಜಿಯಲ್ಲಿ ನಮೂದಾಗುತ್ತಿಲ್ಲ. ಆಧಾರ್‌ ಕಾರ್ಡ್‌ಗೂ ಗೂಗಲ್‌ ಅರ್ಜಿಯಲ್ಲಿ ಇರುವ ವಿಳಾಸಕ್ಕೂ ವ್ಯತ್ಯಾಸ ಆಗುತ್ತಿದೆ. ಈ ಬಗ್ಗೆ ನಿತ್ಯ ಕಚೇರಿಗೆ ಅಲೆಯುವಂಥ ಪರಿಸ್ಥಿತಿ ಬಂದಿದೆ. ಗ್ರಾಮೀಣ ಭಾಗದ ಪಾಲಕರಿಗಂತೂ ಇದು ಅರ್ಥವಾಗದ ಸಮಸ್ಯೆಯಾಗಿದೆ. ಕೆಲಸ ಕಾರ್ಯ ಬಿಟ್ಟು ದಿನಗಟ್ಟಲೇ ಮಕ್ಕಳ ಭವಿಷ್ಯಕ್ಕಾಗಿ ಕಂಪ್ಯೂಟರ್‌ ಕೇಂದ್ರಗಳಿಗೆ ಪಾಲಕರು ಅಲೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡ್‌ವಾರು ಇರುವ ಮಾಹಿತಿ ಅರ್ಜಿಯಲ್ಲಿ ಬಾರದೇ ಇರುವ ಕಾರಣ ತೀವ್ರ ತೊಂದರೆ ಆಗುತ್ತಿದೆ. ಅರ್ಜಿಗಳನ್ನು ಭರ್ತಿ ಮಾಡಲು ಆಗುತ್ತಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಿ, ಪಾಲಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕು. ಸಕಾಲದಲ್ಲಿ ಆರ್‌ಟಿಇ ಅರ್ಜಿ ತುಂಬಲು ಸರಳ ಮಾರ್ಗೋಪಾಯಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಘಟಕದ ಅಧ್ಯಕ್ಷ ಖಾಜಾ ಬಂದೇನವಾಜ್‌, ಕಾರ್ಯದರ್ಶಿ ರಿಯಾಜ್‌, ಮೌಲಾನಾ ಅಬುಸಯೀದ್‌, ಡಾ.ಮಹ್ಮದ್‌ ಜಾವೀದ್‌, ಸೈಯದ್‌ ರಹೀಮ್‌, ಅಬ್ದುಲ್‌ ರಹೆಮಾನ್‌, ಶೇಖ್‌ ಇಬ್ರಾಹಿಂ, ಅಬ್ದುಲ್‌ ಸತ್ತಾರ್‌, ಮೊಹ್ಮದ್‌ ಅಸ್ಲಂ, ಅಬ್ದುಲ್‌ ರಹಿಮ್‌ಖಾನ್‌, ಅಬ್ದುಲ್‌ ರಶೀದ್‌ ಇನ್ನಿತರರಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ