ಆ್ಯಪ್ನಗರ

ಕುಡುಕ ಉಬರ್‌ ಚಾಲಕ: ಪ್ರಯಾಣಿಕನಿಂದಲೇ ಕ್ಯಾಬ್‌ ಚಾಲನೆ

ಉಬರ್ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸದ ಸ್ಥಿತಿಯಲ್ಲಿದ್ದ ಕಾರಣ ಪ್ರಯಾಣಿಕನೇ ಕಾರನ್ನು ಚಲಾಯಿಸಿದ ಘಟನೆ ನಡೆದಿದೆ.

TIMESOFINDIA.COM 15 Sep 2018, 10:39 am
ಬೆಂಗಳೂರು: ಉಬರ್ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸದ ಸ್ಥಿತಿಯಲ್ಲಿದ್ದ ಕಾರಣ ಪ್ರಯಾಣಿಕನೇ ಕಾರನ್ನು ಚಲಾಯಿಸಿದ ಘಟನೆ ನಡೆದಿದೆ.
Vijaya Karnataka Web 1


ಪ್ರಯಾಣಿಕ ಸೂರ್ಯ ಒರುಗಂತಿ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಿಂದ ಕ್ಯಾಬ್‌ ಹಿಡಿದಿದ್ದರು. ಅವರಿಗೆ ಕಂಪೆನಿಯು ಆ್ಯಪ್‌ನಲ್ಲಿ ಪರಿಚಯಿಸಿದ್ದ ಚಾಲಕ ಬೇರೆಯಾಗಿದ್ದು, ಪಿಕ್‌ಅಪ್‌ ಮಾಡಲು ಬಂದಿದ್ದ ಚಾಲಕ ಬೇರೆಯಾಗಿದ್ದ. ಆತ ಕುಡಿದಿದ್ದು ಕಾರು ಚಲಾಯಿಸಲಾಗದ ಸ್ಥಿತಿಯಲ್ಲಿದ್ದ . ಹೀಗಾಗಿ ಸೂರ್ಯ ಅವರು ಚಾಲಕನ ವೀಡಿಯೊ ಶೂಟ್‌ ಮಾಡಿ ಬಳಿಕ ತಾನೇ ಕಾರು ಚಲಾಯಿಸಿದ್ದಾಗಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ವಿಷಯವನ್ನು ಉಬರ್‌ ಕಂಪೆನಿಗೂ ವಿಷಯ ತಿಳಿಸಿ ವೀಡಿಯೊ ಸಹಿತ ಪೋಸ್ಟ್‌ ಮಾಡಿದ್ದರು. ವಿಷಯ ತಿಳಿದ ಕಂಪೆನಿಯು ಈ ಬಗ್ಗೆ ನಮ್ಮಸುರಕ್ಷತಾ ಘಟಕವು ಗಮನಹರಿಸಿದ್ದು, ತನಿಖೆ ನಡೆಸಲಿದೆ ಎಂದು ಪ್ರತಿಕ್ರಿಯಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ