Please enable javascript.ಚಂದಾವರ:ಗೋಪುರದ ಕಲಶಾರೋಹಣ ಇಂದು, ನಾಳೆ - the tower's art today is tomorrow - Vijay Karnataka

ಚಂದಾವರ:ಗೋಪುರದ ಕಲಶಾರೋಹಣ ಇಂದು, ನಾಳೆ

Vijaya Karnataka 25 Feb 2019, 5:00 am
Subscribe

ಕುಮಟಾ : ಹತ್ತಿರದ ಚಂದಾವರದ ಸೀಮೆ ದೇವರಾದ ಶ್ರೀ ಹನುಮಂತ ದೇವರ ಕಲಾವೃದ್ಧಿ ಹಾಗೂ ಗೋಪುರದ ಬಂಗಾರ ಲೇಪನದ ಕಲಶಾರೋಹಣ ಕಾರ್ಯಕ್ರಮವು ಫೆ.25ರಿಂದ 26ರ ವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಆರ್‌.ಜಿ.ನಾಯ್ಕ ತಿಳಿಸಿದರು.

KWR-PHT 24 KMT 1
ಕುಮಟಾ : ಹತ್ತಿರದ ಚಂದಾವರದ ಸೀಮೆ ದೇವರಾದ ಶ್ರೀ ಹನುಮಂತ ದೇವರ ಕಲಾವೃದ್ಧಿ ಹಾಗೂ ಗೋಪುರದ ಬಂಗಾರ ಲೇಪನದ ಕಲಶಾರೋಹಣ ಕಾರ್ಯಕ್ರಮವು ಫೆ.25ರಿಂದ 26ರ ವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಆರ್‌.ಜಿ.ನಾಯ್ಕ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದಾವರದ ಹನುಮಂತ ದೇವರಿಗೆ ವಿಶೇಷ ಶಕ್ತಿ ಇರುವುದರಿಂದ ಜಿಲ್ಲೆ ಅಷ್ಟೇ ಅಲ್ಲದೇ ವಿವಿಧ ರಾಜ್ಯಗಳಿಂದ ಭಕ್ತರು ಈ ದೇವರನ್ನು ನಂಬಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಸುಮಾರು 50ರಿಂದ 60 ಸಾವಿರ ಭಕ್ತರು ಆಗಮಿಸಲಿದ್ದಾರೆ. ಫೆ.26ರಂದು ಆಗಮಿಸುವ ಭಕ್ತರಿಗಾಗಿ ಕುಮಟಾ-ಹೊನ್ನಾವರದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ನಡೆಯುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕೆಂಬ ಉದ್ದೇಶದಿಂದ 11 ಸಮಿತಿಗಳನ್ನು ರಚಿಸಲಾಗಿದೆ. 2,500 ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಅಂದು ಶ್ರೀ ದೇವರ ಕಲಾವೃದ್ಧಿ, ಕಲಶಾರೋಹಣ, ಶತರುದ್ರ ಹವನ, ಸಾಮೂಹಿಕ ಶನಿಕಥೆ ಮತ್ತು ಪವಮಾನ ಕಲಶಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಪೂರ್ವಾಹ್ನ 9 ಗಂಟೆಯಿಂದ ಮಹಾಸಂಕಲ್ಪ, ಗಣಪತಿ ಪೂಜೆ, ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಋುತ್ವಿವರ್ಣಿ, ಪವಮಾನಸೂಕ್ತ ಜಪ, ಬ್ರಹ್ಮಕೂರ್ಚಾಹವನ ನಡೆಯಲಿದೆ. ಸಂಜೆ 5.30ಕ್ಕೆ ಯಾಗಾಶಾಲಾ ಪ್ರವೇಶ, ಮಂಡಲ ದರ್ಶನ, ಕಲಶ ಸ್ಥಾಪನೆ, ರಾಕ್ಷೋಘ್ನವಾಸ್ತು ಹವನ, ಮಂಟಪ ಸಂಸ್ಕಾರ, ಬಲಿಶಾಂತಿಪಾಠ, ಶತರುದ್ರ ಜಪ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 26ರಂದು ಬೆಳಗ್ಗೆ 8 ಗಂಟೆಯಿಂದ ಗಣಪತಿ ಪೂಜೆ, ಸ್ಥಾನ ಶುದ್ಧಿ, ಬಿಂಬಶುದ್ಧಿ, ನವಗ್ರಹ, ಕಲಾವೃದ್ಧಿ, ಕಲಶಾರೋಹಣ, ಕಲಾತತ್ವಶಕ್ತಿ, ಪವಮಾನ, ಪಂಚಬ್ರಹ್ಮ, ರುದ್ರ ಹವನಗಳು ಹಾಗೂ ಪರಿವಾರ ದೇವತೆಗೆ ದುರ್ಗಾಶಾಂತಿ, ಶ್ರೀಸೂಕ್ತ, ನಾಗ ಶಾಂತಿ, ಪೂರ್ಣಾಹುತಿ, ಕಲಶಾಭಿಷೇಕ, ಮಹಾ ಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯುವುದು. ಮಧ್ಯಾಹ್ನ 1.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಾಮೂಹಿಕ ಶನಿಕಥೆ, ಪವಮಾನ ಕಲಾಭಿಷೇಕ, ಸರ್ವಸೇವೆ ಮೊದಲಾದ ವಿಶೇಷ ಸೇವೆಗಳನ್ನು ಶ್ರೀದೇವರ ಸನ್ನಿಧಿಯಲ್ಲಿ ನೀಡುವವರು ನಿಗದಿತ ದೇಣಿಗೆಯನ್ನು ನೀಡಿ ನೋಂದಾಯಿಸಿಕೊಳ್ಳತಕ್ಕದು. ಇದು ಜಾಗೃತ ಸಿದ್ಧಿ ಕ್ಷೇತ್ರವಾಗಿದ್ದು ಒಳ, ಹೊರಗೆ ಅಸಂಖ್ಯ ಭಕ್ತರನ್ನು ಹೊಂದಿದೆ ಎಂದು ಆರ್‌.ಜಿ.ನಾಯ್ಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿಯ ಎ.ಆರ್‌.ನಾಯ್ಕ, ಎನ್‌.ಎಸ್‌.ನಾಯ್ಕ, ದೇವು ಗೌಡ, ಎಂ.ಕೆ. ಪಟಗಾರ, ಉಮೇಶ ನಾಯ್ಕ, ಅರುಣ ನಾಯ್ಕ, ರಾಮಚಂದ್ರ ನಾಯ್ಕ, ನಿತ್ಯಾನಂದ ನಾಯ್ಕ, ಕೃಷ್ಣ ಗೌಡ, ಎಂ.ಎಸ್‌.ನಾಯ್ಕ, ಮಾರುತಿ ಐಗಳ್‌, ವಿ.ಬಿ. ಪಟಗಾರ ಉಪಸ್ಥಿತರಿದ್ದರು.


ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ