Please enable javascript.ಪ್ರಯಾಣ ದರ ಹೆಚ್ಚಳ ಪ್ರಸ್ತಾಪಕ್ಕೆ ಕಲ್ಲೂರ ವಿರೋಧ - ಪ್ರಯಾಣ ದರ ಹೆಚ್ಚಳ ಪ್ರಸ್ತಾಪಕ್ಕೆ ಕಲ್ಲೂರ ವಿರೋಧ - Vijay Karnataka

ಪ್ರಯಾಣ ದರ ಹೆಚ್ಚಳ ಪ್ರಸ್ತಾಪಕ್ಕೆ ಕಲ್ಲೂರ ವಿರೋಧ

Vijaya Karnataka Web 6 May 2014, 4:07 pm
Subscribe

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರವನ್ನು 10% ಹೆಚ್ಚು ಮಾಡಿರುವುದು ಅವೈಜ್ಞಾನಿಕ ಕ್ರಮ.

ಪ್ರಯಾಣ ದರ ಹೆಚ್ಚಳ ಪ್ರಸ್ತಾಪಕ್ಕೆ ಕಲ್ಲೂರ ವಿರೋಧ
ಆಲಮಟ್ಟಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರವನ್ನು 10% ಹೆಚ್ಚು ಮಾಡಿರುವುದು ಅವೈಜ್ಞಾನಿಕ ಕ್ರಮ.

ಇದು ಮಧ್ಯಮ ವರ್ಗದವರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಕಲ್ಲೂರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ನಾನು ಅಧ್ಯಕ್ಷನಾಗಿದ್ದಾಗ, ಕಾರ್ಮಿಕರ, ನೌಕರರ ಪರಿಶ್ರಮದ ಫಲವಾಗಿ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಲಾಭದಲ್ಲಿತ್ತು. ಹಿಂದೆ ಬಿಜೆಪಿ ಸರಕಾರವಿದ್ದಾಗ, ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ನೌಕರರ ಹಿತಕ್ಕಾಗಿ, ಆಡಳಿತಶಾಹಿ ಧೋರಣೆಯನ್ನು ಹೊಡೆದೋಡಿಸಿ ಅವರಿಗೆ ವೇತನ ಹೆಚ್ಚಳದ ಕ್ರಮ ಕೈಗೊಳ್ಳಲಾಗಿದೆ ಎಂದರು.

ನೌಕರರಿಗೂ ಆರ್ಥಿಕ ಅನುಕೂಲತೆ ಮಾಡಲಾಗಿದೆ. ಇದನ್ನೇ ದೊಡ್ಡ ತಪ್ಪು ಎಂದು ಬಿಂಬಿಸಿ, ಸಂಸ್ಥೆಯ ಆರ್ಥಿಕ ಸೋರಿಕೆ ತಡೆಗಟ್ಟದೆ, ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿದ ವರ್ಷದಲ್ಲಿಯೇ ಎರಡೆರೆಡು ಬಾರಿ ತಲಾ 10% ರಂತೆ ಪ್ರಯಾಣ ದರ ಹೆಚ್ಚಿಸಿರುವುದು ಪ್ರಯಾಣಿಕರ ಮೇಲೆ ಹೊರೆಯಾಗುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಬಸ್‌ಗಳ ಸಂಚರಿಸುವ ಮಾರ್ಗದ ಲೈನ್ ಚೆಕ್ಕಿಂಗ್ ಸಮರ್ಪಕವಾಗಬೇಕು, ಅನವಶ್ಯಕವಾಗಿ ಬಹಳಷ್ಟು ಎಕ್ಸ್‌ಪ್ರೆಸ್‌ಗಳನ್ನು ಓಡಿಸಬಾರದು, ಅವಶ್ಯಕತೆ ಆಧಾರದ ಮೇಲೆ ಬಸ್‌ಗಳನ್ನು ಓಡಿಸಬೇಕು, ಅನವಶ್ಯಕ ಮಾರ್ಗಗಳ ಬಸ್‌ಗಳನ್ನು ಕಡಿತಗೊಳಿಸಬೇಕು. ನಾನಾ ಖಾಸಗಿ ಬಸ್‌ಗಳ ಲಗೇಜ್ ಹಾಕುವುದು ನಿಷೇಧವಿದ್ದರೂ, ಅವರು ಬೇಕಾಬಿಟ್ಟಿಯಾಗಿ ಲಗೇಜ್ ಹಾಕುತ್ತಿದ್ದಾರೆ. ಇದನ್ನೆಲ್ಲವನ್ನು ನಿಷೇಧಿಸಬೇಕು ಎಂದಿದ್ದಾರೆ.

ವಿಜಾಪುರ ನಗರ ಸಂಚಾರ ಉತ್ತಮಗೊಳಿಸಲಿ:
ನಾನು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷನಾಗಿದ್ದಾಗ ಜಾರಿಗೆ ಬಂದ ವಿಜಾಪುರ ನಗರ ಸಾರಿಗೆ ಬಸ್‌ಸಂಖ್ಯೆಗಳನ್ನು ಹೆಚ್ಚಳ ಮಾಡುವ ಅಗತ್ಯವಿದೆ. ವಿಜಾಪುರದ ಪ್ರತಿ ಬಡಾವಣೆಗೂ ನಗರ ಸಂಚಾರ ಬಸ್‌ಗಳು ಸಂಚರಿಸುವಂತಾಗಬೇಕು, ಆ ನಿಟ್ಟಿನಲ್ಲಿ ಸರಕಾರರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ