ಆ್ಯಪ್ನಗರ

ಕೆಟ್ಟು ನಿಂತ ಜೆಡಿಎಸ್‌ನ 'ವಿಕಾಸವಾಹಿನಿ'

ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ಕೋಟಿ ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಿದ್ದ ' ವಿಕಾಸವಾಹಿನಿ' ಬಸ್ ಯಾತ್ರೆಯ ಆರಂಭದಲ್ಲೇ ಕೆಟ್ಟು ನಿಂತಿತ್ತು.

Vijaya Karnataka Web 8 Nov 2017, 4:50 pm
ಚಿಕ್ಕಮಗಳೂರು: ಕುಮಾರಸ್ವಾಮಿ ಅವರು ಜೆಡಿಎಸ್‌ ಚುನಾವಣಾ ಪ್ರಚಾರಕ್ಕಾಗಿ ಕೋಟಿ ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಿದ್ದ ವಿಶೇಷ ಬಸ್‌ 'ಕರ್ನಾಟಕ ವಿಕಾಸವಾಹಿನಿ' ಯಾತ್ರೆಯ ಆರಂಭದಲ್ಲೇ ಮೂವತ್ತು ನಿಮಿಷ ಕೆಟ್ಟು ನಿಂತು ಕಾರ್ಯಕರ್ತರನ್ನು ಗೊಂದಲಕ್ಕೆ ಗುರಿ ಮಾಡಿದೆ.
Vijaya Karnataka Web vikasavahini bus struck in mugulavalli
ಕೆಟ್ಟು ನಿಂತ ಜೆಡಿಎಸ್‌ನ 'ವಿಕಾಸವಾಹಿನಿ'


ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಶಿವಮೊಗ್ಗಕ್ಕೆ ಪ್ರಯಾಣಿಸಲು ಮುಂದಾದಾಗ ಬಸ್‌ ಕೆಟ್ಟು ನಿಂತಿತ್ತು.

ಈ ಬಸ್‌ ಅನ್ನು ಅಶೋಕ್ ಲೇಲ್ಯಾಂಡ್ ಕಂಪನಿ ರೂಪಿಸಿದ್ದು, ಬಸ್‌ನ ಚಾಸಿಸ್‌ ಅನ್ನು ಸೇಲಂನ ಸ್ಪೇಸ್ ಟೆಕ್ ಕಂಪನಿ ವಿನ್ಯಾಸಗೊಳಿಸಿದೆ. ಪ್ರಕಾಶ್ ಬಸ್ ಕವಚ ನಿರ್ಮಾಣ ಸಂಸ್ಥೆಯಲ್ಲಿ ಬಸ್‌‌ ಅನ್ನು ಸಿದ್ಧಪಡಿಸಲಾಗಿದೆ. ಬಸ್ ವಿನ್ಯಾಸಕ್ಕೆ 1ಕೋಟಿ ರೂ.ವ್ಯಯಿಸಲಾಗಿದ್ದು, ರೂಪಿಸಲು ಮೂರು ತಿಂಗಳು ತೆಗೆದುಕೊಳ್ಳಲಾಗಿದೆ. ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿರುವ ಬಸ್ ಒಳಗಡೆ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಬೆಡ್ ರೂಂ, ಬಾತ್ ರೂಂ, ಅಡುಗೆ ಕೋಣೆ ಕೂಡ ಇದೆ. ಮೂರು ಜನರನ್ನು ಬಸ್‌ನ ಮೇಲ್ಭಾಗಕ್ಕೆ ಎತ್ತುವ ಹೈಡ್ರಾಲಿಕ್ ಲಿಫ್ಟ್ ವೇದಿಕೆ ವ್ಯವಸ್ಥೆ ಕೂಡ ಇದರಲ್ಲಿದೆ.

ಸುದ್ದಿ ವಾಹಿನಿಗಳ ವೀಕ್ಷಣೆಗೆ ಡಿಜಿಟಲ್ ಇಂಟರ್‌ನೆಟ್ ಟಿವಿ, ಹೋಂ ಥಿಯೇಟರ್ ಸೌಲಭ್ಯದ ಜತೆಗೆ ಮೂರ್ನಾಲ್ಕು ಜನ ಕುಳಿತು ಸಭೆ ನಡೆಸಲು ಅನುವಾಗುವಂತೆ ಸೋಫಾ ವ್ಯವಸ್ಥೆ, ಕುಮಾರಸ್ವಾಮಿ ಅವರಿಗೆ ಚಲಿಸುವ ವ್ಯವಸ್ಥೆ ಹೊಂದಿರುವ ವಿಶೇಷ ಆಸನವನ್ನೂ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ