Please enable javascript.ಹೈ.ಕ ದಾಸ ಸಾಹಿತ್ಯದ ತವರೂರು - ಹೈ.ಕ ದಾಸ ಸಾಹಿತ್ಯದ ತವರೂರು - Vijay Karnataka

ಹೈ.ಕ ದಾಸ ಸಾಹಿತ್ಯದ ತವರೂರು

ವಿಕ ಸುದ್ದಿಲೋಕ 9 Feb 2016, 5:19 pm
Subscribe

ಹೈದರಾಬಾದ್ ಕರ್ನಾಟಕ ಪ್ರದೇಶ ದಾಸ ಸಾಹಿತ್ಯ ತವರೂರಾಗಿದೆ. 300ಕ್ಕೂ ಹೆಚ್ಚು ದಾಸರಲ್ಲಿ 100 ಕ್ಕೂ ಹೆಚ್ಚು ದಾಸರು ಇದೇ ಭಾಗದವರಾಗಿದ್ದಾರೆ. ಆದರೆ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆ ಮಾಡದೆ ಇರುವುದು ವಿಷಾದಕರ ಸಂಗತಿ ಎಂದು ಕನಕ ಶ್ರೀ ಪ್ರಶಸ್ತಿ ಪುರಸ್ಕತ ಡಾ. ಸ್ವಾಮಿರಾವ ಕುಲಕರ್ಣಿ ತಲೇಖಾನ ಹೇಳಿದರು.

ಹೈ.ಕ ದಾಸ ಸಾಹಿತ್ಯದ ತವರೂರು
ಯಾದಗಿರಿ : ಹೈದರಾಬಾದ್ ಕರ್ನಾಟಕ ಪ್ರದೇಶ ದಾಸ ಸಾಹಿತ್ಯ ತವರೂರಾಗಿದೆ. 300ಕ್ಕೂ ಹೆಚ್ಚು ದಾಸರಲ್ಲಿ 100 ಕ್ಕೂ ಹೆಚ್ಚು ದಾಸರು ಇದೇ ಭಾಗದವರಾಗಿದ್ದಾರೆ. ಆದರೆ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆ ಮಾಡದೆ ಇರುವುದು ವಿಷಾದಕರ ಸಂಗತಿ ಎಂದು ಕನಕ ಶ್ರೀ ಪ್ರಶಸ್ತಿ ಪುರಸ್ಕತ ಡಾ. ಸ್ವಾಮಿರಾವ ಕುಲಕರ್ಣಿ ತಲೇಖಾನ ಹೇಳಿದರು.

ಭಾನುವಾರ ಹುಣಸಿಹೊಳೆ ಕಣ್ವಮಠದಲ್ಲಿ ಶ್ರೀ ವಿದ್ಯಾವಾರಿಧಿ ತೀರ್ಥರಿಂದ ಸನ್ಮಾನ ಮತ್ತು ಆಶೀರ್ವಾದ ಸ್ವೀಕರಿಸಿ ಮಾತನಾಡಿದರು. ದಾಸ ಸಾಹಿತ್ಯದಲ್ಲಿ ಅಪಾರ ಸಂಶೋಧನೆ ಆಗಬೇಕಿದೆ. ಅದಕ್ಕಾಗಿ ಸಾಹಿತಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ದಾಸ ಸಾಹಿತ್ಯ ಅಧ್ಯಯನ ಕೇಂದ್ರ ಸ್ಥಾಪಿತವಾದರೂ, ಸರಕಾರ ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ದಾಸ ಸಾಹಿತ್ಯ ಅಧ್ಯಯನಕ್ಕೆ ಹಿನ್ನಡೆಯಾಗಿದೆ. ಕಾರಣ ಶ್ರೀಮಠದಲ್ಲಿಯಾದರೂ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿದರು.

ವಿದ್ಯಾವಾರಿಧಿ ತೀರ್ಥರು ಮಾತನಾಡಿ, ಶ್ರೀಮಠದಲ್ಲಿ ಸಾಹಿತ್ಯ, ಕಲೆ ಮತ್ತು ಸಂಗೀತ ಅಧ್ಯಯನಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಅಲ್ಲದೆ ತಮ್ಮ ಬೇಡಿಕೆಯಂತೆ ಶ್ರೀ ಮಠದಲ್ಲಿ ದಾಸ ಸಾಹಿತ್ಯ ಅಧ್ಯಯನಕ್ಕೆ ಪೀಠ ಸ್ಥಾಪನೆಗೆ ತಾವು ಬದ್ಧರಾಗಿದ್ದು ,ಅದಕ್ಕೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಒದಗಿಸುವುದಾಗಿ ತಿಳಿಸಿದರು.

ಅಲ್ಲದೆ ಇದೇ ಸಂದರ್ಭದಲ್ಲಿ ಡಾ. ಸ್ವಾಮಿರಾವ ಕುಲಕರ್ಣಿಯವರನ್ನು ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಎರಡು ತಿಂಗಳಲ್ಲಿ ರೂಪರೇಷೆಯನ್ನು ಸಿದ್ದಪಡಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಡಾ.ಶೀಲಾ ದಾಸ, ಸತ್ಯನಾರಾಯಣ ಮುಜುಮದಾರ, ಗೋವಿಂದ ಕುಲಕರ್ಣಿ ಹೊಸಪೇಠ, ಸುರೇಖಾ ಕುಲಕರ್ಣಿ, ಬಿ.ಜಿ.ಕುಲಕರ್ಣಿ, ಶ್ಯಾಮರಾವ ಬೈಚಬಾಳ, ವಾಸುದೇವರಾವ ವಡಗೇರಾ, ಕಷ್ಣಮೂರ್ತಿ ಕುಲಕರ್ಣಿ, ವಿನೋದ ಕುಲಕರ್ಣಿ, ಎಸ್.ಎಸ್. ಕುಲಕರ್ಣಿ ಬೆಳಗಾಂವ,ಶ್ರೀ ಹರಿರಾವ ಸುರಪುರ ಸೇರಿದಂತೆ ಅನೇಕ ಸಾಹಿತಿಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ