ಆ್ಯಪ್ನಗರ

ಅಂದರ್‌ ಬಾಹರ್‌: ಜಾಸ್ತಿ ಹಾರಬೇಡಿ ಎಂದ ಮೋದಿ!

‘ತಮ್ಮ ಪ್ರತಿಯೊಬ್ಬ ಸಚಿವ ಸಹೋದ್ಯೋಗಿಯೂ ಸೌಹಾರ್ದತೆಯ ಸಂಕೇತವಾಗಿ ತಲಾ ಎರಡು ರಾಷ್ಟ್ರಗಳಿಗೆ ಭೇಟಿ ನೀಡಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ ಹೇಳಿದ್ದರಷ್ಟೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಸಚಿವರ ಪ್ಲ್ಯಾನ್‌ಗಳಿಗೆಲ್ಲ ತಣ್ಣೀರೆರಚಿದ್ದಾರೆ.

Vijaya Karnataka Web 23 Oct 2016, 4:00 am
‘ತಮ್ಮ ಪ್ರತಿಯೊಬ್ಬ ಸಚಿವ ಸಹೋದ್ಯೋಗಿಯೂ ಸೌಹಾರ್ದತೆಯ ಸಂಕೇತವಾಗಿ ತಲಾ ಎರಡು ರಾಷ್ಟ್ರಗಳಿಗೆ ಭೇಟಿ ನೀಡಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ ಹೇಳಿದ್ದರಷ್ಟೆ. ಈ ಸಲಹೆ ಹೊರಬಂದಿದ್ದೇ, ಕೇಂದ್ರ ಸಚಿವರೆಲ್ಲ ಹಿರಿಹಿರಿ ಹಿಗ್ಗಿಹೋದರು. ಈ ವರ್ಷದ ಅಂತ್ಯದೊಳಗೆ ಯಾವ ದೇಶಕ್ಕೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎನ್ನುವ ವಿವರಗಳನ್ನು ಒದಗಿಸಬೇಕು ಎಂದು ವಿದೇಶಾಂಗ ಸಚಿವಾಲಯದಿಂದ ಸಂದೇಶವೂ ಇವರಿಗೆಲ್ಲ ರವಾನೆಯಾಯಿತು. ಕೆಲ ಸಚಿವರಂತೂ ವಾರಗಟ್ಟಲೇ ಟೂರ್ ಮಾಡುವ ಪ್ಲ್ಯಾನ್ ಕೂಡ ರೆಡಿಮಾಡಿಕೊಂಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ, ಸಚಿವರ ಪ್ಲ್ಯಾನ್‌ಗಳಿಗೆಲ್ಲ ತಣ್ಣೀರೆರಚಿದ್ದಾರೆ. ‘‘ನೀವು ಮೂರು ದಿನಗಳಿಗಿಂತ ಹೆಚ್ಚು ಕಾಲ ವಿದೇಶ ಪ್ರವಾಸದಲ್ಲಿರಬಾರದು, ಅಲ್ಲಿ ಕುಳಿತರೆ ಇಲ್ಲಿನ ಕೆಲಸ ಯಾರು ನೋಡಿಕೊಳ್ಳೋದು?’’ ಎಂದು ಪ್ರಶ್ನಿಸಿದ್ದಾರೆ ಮೋದಿ. ಬಹಳಷ್ಟು ಸಚಿವರು ಪ್ರಧಾನಿಗಳ ಆದೇಶ ಕೇಳಿ ಮುಖ ಗಂಟಿಕ್ಕಿದ್ದಾರೆ. ‘ಅವರಾದರೆ(ಮೋದಿ) ತಿಂಗಳುಗಟ್ಟಲೆ ವಿದೇಶ ಪ್ರವಾಸದಲ್ಲಿರ್ತಾರೆ. ನಮಗೆ ಮಾತ್ರ ಟೈಮ್ ಲಿಮಿಟ್ಟಾ?’ ಎಂದು ಗೊಣಗುತ್ತಿದ್ದಾರೆ. ಆದರೆ ಬಹಿರಂಗವಾಗಿ ಈ ಮಾತನ್ನು ಯಾರೂ ಹೇಳುತ್ತಿಲ್ಲವಷ್ಟೆ!
Vijaya Karnataka Web andar bahar
ಅಂದರ್‌ ಬಾಹರ್‌: ಜಾಸ್ತಿ ಹಾರಬೇಡಿ ಎಂದ ಮೋದಿ!


**

ಕಾಂಗ್ರೆಸ್ ‘ಸೆಟ್‌ದೋಸೆ ’ಶಾಸಕರು

ಕಾಂಗ್ರೆಸ್‌ನಲ್ಲಿ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ಕೊಂಡಯ್ಯ ಅವರನ್ನು ಸೆಟ್‌ದೋಸೆ ನಾಯಕರು ಎಂದು ದಶಕದ ಹಿಂದೆ ಕರೆಯಲಾಗುತ್ತಿತ್ತು. ಈ ಮೂವರು ಹಿರಿಯ ನಾಯಕರು ಈಗ ಒಟ್ಟಾಗಿ ಕಾಣಿಸಿಕೊಳ್ಳದಿದ್ದರೂ ಈಗ ಆ ಹೆಸರು ಕಾಂಗ್ರೆಸ್‌ನ ಮೂವರು ಶಾಸಕರಿಗೆ ಅಂಟಿಕೊಂಡಿದೆ. ಈ ಮೂವರು ಬೆಂಗಳೂರಿನವರು. ಫಾರಿನ್‌ಗೇ ಹೋಗಲಿ, ಸಿಎಂ ಮನೆಗೇ ಹೋಗಲಿ, ಸಚಿವಾಲಯದ ಕಚೇರಿಗಳಿಗೆ ರೌಂಡ್ಸ್ ಹೋದಾಗಲೂ ಈ ಮೂವರು ಶಾಸಕರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಕ್ಷೇತ್ರದ ಕೆಲಸಕ್ಕಾಗಿ ಮಂತ್ರಿಗಳ ಕಚೇರಿ ಇಲ್ಲವೇ ಮನೆಗೂ ಜಂಟಿ ಆಪರೇಷನ್ ಮಾಡುತ್ತಾರೆ ಎಂಬುದು ವಿಶೇಷ. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರ ಶಾಸಕ ಭೈರತಿ ಬಸವರಾಜ್ , ರಾಜರಾಜೇಶ್ವರಿನಗರದ ಮುನಿರತ್ನ ಈ ಮೂವರು ಅಕ್ಕ ಸಮ್ಮೇಳನಕ್ಕೆ ಜಂಟಿಯಾಗಿಯೇ ಹೋಗಿದ್ರು. ಕ್ಷೇತ್ರಕ್ಕೆ ಗ್ರ್ಯಾಂಡ್ಸ್ ಮಂಜೂರು ಮಾಡಿಸಿಕೊಂಡಾಗಲೂ ಮೂವರಿಗೂ ಸಮಪಾಲು ಇರುವಂತೆ ನೋಡಿಕೊಳ್ಳುತ್ತಾರಂತೆ ಎಂಬುದು ವಿಶೇಷ. ಮತ್ತೊಂದು ವಿಶೇಷ ಅಂದ್ರೆ ಈ ತ್ರಿಮೂರ್ತಿ ಶಾಸಕರು ಸಿಎಂ ಪರ ಆಗಾಗ ಬ್ಯಾಟಿಂಗ್ ಮಾಡುತ್ತಾರೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಕೊನೆಗೆ ಬೈರತಿ ಹಾಗೂ ಸೋಮಶೇಖರ್ ಅವರು ಬಿಡಿಎ ಸದಸ್ಯರಾದರು. ಆದ್ರೆ ಮುನಿರತ್ನಗೆ ಮಾತ್ರ ಸ್ಥಾನ ಸಿಗಲಿಲ್ಲವಂತೆ. ನೀವಿಬ್ಬರೂ ಮೆಂಬರ್ ಆಗಿರುವುದರಿಂದ ನಾನೂ ಮೆಂಬರ್ ಆದಂತೆ ಎಂದು ಮುನಿರತ್ನ ತಮಗೆ ತಾವೇ ಸಮಾಧಾನಮಾಡಿಕೊಂಡಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ