ಆ್ಯಪ್ನಗರ

ಮಾಲಿನ್ಯ ಕಾರಣಕ್ಕೆ ಮನೆ ಮಾರಿದ್ದರು ಕಾರ್ನಾಡ್

ಜೆ.ಪಿ. ನಗರ 15ನೇ ಕ್ರಾಸ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿಯಿಂದ ಬರುತ್ತಿದ್ದ ಶಬ್ದ ಮತ್ತು ವಾಯುಮಾಲಿನ್ಯವನ್ನು ತಡೆಯಲಾಗದೆ ಕಾರ್ನಾಡರು ಜೆ.ಪಿ. ನಗರದಲ್ಲಿದ್ದ ತಮ್ಮ ಮನೆಯನ್ನು ಮಾರಾಟ ಮಾಡಿ, ಯುಬಿ ಸಿಟಿ ಹತ್ತಿರದ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್‌ ಖರೀದಿಸಿ ಕಳೆದ ಒಂದೂವರೆ ವರ್ಷದಿಂದ ಅಲ್ಲೇ ನೆಲೆಸಿದ್ದರು.

Vijaya Karnataka 11 Jun 2019, 5:00 am
ಬೆಂಗಳೂರು: ಜೆ.ಪಿ. ನಗರ 15ನೇ ಕ್ರಾಸ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿಯಿಂದ ಬರುತ್ತಿದ್ದ ಶಬ್ದ ಮತ್ತು ವಾಯುಮಾಲಿನ್ಯವನ್ನು ತಡೆಯಲಾಗದೆ ಕಾರ್ನಾಡರು ಜೆ.ಪಿ. ನಗರದಲ್ಲಿದ್ದ ತಮ್ಮ ಮನೆಯನ್ನು ಮಾರಾಟ ಮಾಡಿ, ಯುಬಿ ಸಿಟಿ ಹತ್ತಿರದ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್‌ ಖರೀದಿಸಿ ಕಳೆದ ಒಂದೂವರೆ ವರ್ಷದಿಂದ ಅಲ್ಲೇ ನೆಲೆಸಿದ್ದರು. ಕಾರ್ನಾಡರ ಆರೋಗ್ಯ ಹದಗೆಟ್ಟಿದ್ದರಿಂದ ಅವರಿಗೆ ಪ್ರಶಾಂತವಾದ ವಾತಾವರಣ ಬಯಸುತ್ತಿದ್ದರು. ಅವರು ವಾಸಿಸುತ್ತಿದ್ದ ರಸ್ತೆಗಳಲ್ಲಿದ್ದ ಮರಗಳನ್ನು ಕೂಡ ಸರಕಾರಿ ಆದೇಶವಿದ್ದುದರಿಂದ ಕಡಿಯಲಾಗಿತ್ತು. ಹೀಗಾಗಿ ಬೇಸರಗೊಂಡು ಶಾಂತತೆಯನ್ನು ಬಯಸಿ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿ, ಅಲ್ಲಿ ಕುಟುಂಬ ಸಮೇತ ವಾಸ ಮಾಡುತ್ತಿದ್ದರು ಎಂದು ಕಾರ್ನಾಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಚಿತ್ರನಿರ್ದೇಶಕ ಕೆ.ಎಂ.ಚೈತನ್ಯ ಹೇಳಿದರು.
Vijaya Karnataka Web Kanada2


ಕೃಷ್ಣರಾವ್‌ ಪಾರ್ಕ್‌ ಅಚ್ಚುಮೆಚ್ಚು

ಬಸವನಗುಡಿಯಲ್ಲಿರುವ ಕೃಷ್ಣರಾವ್‌ ಪಾರ್ಕ್‌ ಕಾರ್ನಾಡರಿಗೆ ಅಚ್ಚುಮೆಚ್ಚು. ಯಾಕೆಂದರೆ ಅವರು ಜಯನಗರದಲ್ಲಿ ನೆಲೆಸಿದ್ದಾಗ ನಿತ್ಯ ಕೃಷ್ಣರಾವ್‌ ಪಾರ್ಕ್‌ನಲ್ಲಿ ವಾಯುವಿಹಾರ ಮಾಡಿಯೇ ನಿತ್ಯದ ಚಟುವಟಿಕೆಗಳನ್ನು ಆರಂಭಿಸುತ್ತಿದ್ದುದು. ಇಲ್ಲಿ ಪ್ರತಿದಿನ ನಸುಕಿನ ವೇಳೆಗೆ ತೆರಳಿ ಸುಮಾರು 7-8 ಕಿ.ಮೀ. ವಾಕ್‌ ಮಾಡುತ್ತಿದ್ದರು. ಆದರೆ ಜಯನಗರದಿಂದ ಜೆ.ಪಿ.ನಗರಕ್ಕೆ ಸ್ಥಳಾಂತರಗೊಂಡ ನಂತರ ಇವರ ವಾಕಿಂಗ್‌ಗೆ ಸಮೀಪದಲ್ಲಿ ಪಾರ್ಕ್‌ಗಳಿಲ್ಲದೆ ಮಿನಿ ಪಾರ್ಕ್‌ಗಳಿಗೆ ಹೋಗಬೇಕಾದ ಅನಿವಾರ್ಯ ಎದುರಾಯಿತು. ಆದರೂ ವಾಕಿಂಗ್‌ ಮಾತ್ರ ಬಿಡುತ್ತಿರಲಿಲ್ಲ ಎಂದು ಚೈತನ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ