ಆ್ಯಪ್ನಗರ

ಹತ್ಯೆಗೇಕೆ ಬೆಂಬಲಿಸಬೇಕು?

ಕೆಲವರು ಪ್ರಶಸ್ತಿ ಪಡೆದುಕೊಂಡವರಿರುತ್ತಾರೆ, ಇನ್ನುಳಿದವರು ಹೊಡೆದುಕೊಂಡವರಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂಥವರ ಸಂಖ್ಯೆ ಅಧಿಕವಾಗಿದೆ.

Vijaya Karnataka 9 Sep 2018, 7:45 am
ಕೆಲವರು ಪ್ರಶಸ್ತಿ ಪಡೆದುಕೊಂಡವರಿರುತ್ತಾರೆ, ಇನ್ನುಳಿದವರು ಹೊಡೆದುಕೊಂಡವರಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂಥವರ ಸಂಖ್ಯೆ ಅಧಿಕವಾಗಿದೆ. ಹಾಗೆ ಕೇವಲ ತಮ್ಮ ತಮ್ಮ ಸ್ವಾರ್ಥಕ್ಕಾಗಿ ಬಡಿದಾಡುವವರಿದ್ದಾರೆ ಹೊರತು ಸಮಾಜದ ಬಗ್ಗೆ ಕಾಳಜಿಯನ್ನು ಹೊಂದದಿರುವವರು ಅಧಿಕವಾಗಿದ್ದಾರೆ. ಇದು ವಿಪರ್ಯಾಸ.
Vijaya Karnataka Web 1


ಸಮಾಜಕ್ಕೆ ಇದು ಒಳಿತಲ್ಲ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಆದರೆ ಅದು ಇಂದು ತನ್ನ ಪ್ರಾಮುಖ್ಯ ಕಳೆದುಕೊಂಡಿದೆ ಎಂದು ಭಾಸವಾಗುತ್ತಿದೆ. ಕಾರ್ನಾಡರು ಅವರಿಗೆ ಅವರೇ ಹಾಗೆ ಕರೆದುಕೊಂಡಿದ್ದು ದೊಡ್ಡ ತಪ್ಪು. ಈ ದೇಶದಲ್ಲಿ ಇಂದು ನಕ್ಸಲಿಸಂ ತನ್ನ ಬೇರುಗಳನ್ನು ಆಳವಾಗಿ ಊರಿದೆ.
ಅದರ ಅಟ್ಟಹಾಸಕ್ಕೆ ಸಾವಿರಾರು ಜನ ತಮ್ಮ ಪ್ರಾಣ, ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದರೆ. ಇದು ದುರದೃಷ್ಟಕರ; ಇಂಥವರ ಹೆಸರನ್ನು ಮನಸೋ ಇಚ್ಛೆ ಬಳಸುತ್ತಾರೆ ಎಂದರೆ ಏನು ಹೇಳಬೇಕು? ಗೌರಿ ಹತ್ಯೆಯನ್ನು ಖಂಡಿಸಲು ನಕ್ಸಲರನ್ನು ಬೆಂಬಲಿಸಬೇಕೆ?

-ಈರಣ್ಣಾ , ಸಂಜು, ಗಣಾಚಾರಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ