ಆ್ಯಪ್ನಗರ

ಸಂಪಾದಕೀಯ: ಪದವಿಯಲ್ಲಿ ಕನ್ನಡ ಕಲಿಕೆ ಕಡ್ಡಾಯ

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಅವುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಬೋಧಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾಲೇಜು ಶಿಕ್ಷ ಣ ಇಲಾಖೆಯ ಆಯುಕ್ತರಿಗೆ ಸೂಚಿಸಿದೆ. ಇದು ಸ್ವಾಗತಾರ್ಹ ನಡೆ. ಉನ್ನತ ಶಿಕ್ಷ ಣ ವಲಯದಲ್ಲಿ ಕನ್ನಡ ಭಾಷೆಯ ಅನುಷ್ಠಾನ, ಬೆಳವಣಿಗೆಯ ಬಗ್ಗೆ ಈಗಾಗಲೇ ಪ್ರಾಧಿಕಾರವೇ ನೇಮಿಸಿದ್ದ ಡಾ. ಹೀ.ಚಿ. ಬೋರಲಿಂಗಯ್ಯ ಅವರ ನೇತೃತ್ವದ ಸಮಿತಿ ಅನೇಕ ಶಿಫಾರಸುಗಳನ್ನು ಮಾಡಿದೆ. ಈಗ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಅವರ ಸೂಚನೆಯೂ ಈ ಶಿಫಾರಸಿನ ಒಂದು ಭಾಗವೇ ಆಗಿದ್ದು, ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಪ್ರಯತ್ನವಾಗಿದೆ.

Vijaya Karnataka 15 Sep 2018, 5:00 am
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಅವುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಬೋಧಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾಲೇಜು ಶಿಕ್ಷ ಣ ಇಲಾಖೆಯ ಆಯುಕ್ತರಿಗೆ ಸೂಚಿಸಿದೆ. ಇದು ಸ್ವಾಗತಾರ್ಹ ನಡೆ. ಉನ್ನತ ಶಿಕ್ಷ ಣ ವಲಯದಲ್ಲಿ ಕನ್ನಡ ಭಾಷೆಯ ಅನುಷ್ಠಾನ, ಬೆಳವಣಿಗೆಯ ಬಗ್ಗೆ ಈಗಾಗಲೇ ಪ್ರಾಧಿಕಾರವೇ ನೇಮಿಸಿದ್ದ ಡಾ. ಹೀ.ಚಿ. ಬೋರಲಿಂಗಯ್ಯ ಅವರ ನೇತೃತ್ವದ ಸಮಿತಿ ಅನೇಕ ಶಿಫಾರಸುಗಳನ್ನು ಮಾಡಿದೆ. ಈಗ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಅವರ ಸೂಚನೆಯೂ ಈ ಶಿಫಾರಸಿನ ಒಂದು ಭಾಗವೇ ಆಗಿದ್ದು, ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಪ್ರಯತ್ನವಾಗಿದೆ. ತಜ್ಞರ ಸಮಿತಿಯು, ಎಂಜಿನಿಯರಿಂಗ್‌, ವೈದ್ಯಕೀಯ, ಕಾನೂನು, ಕೃಷಿ ಸೇರಿದಂತೆ ಎಲ್ಲ ವೃತ್ತಿ ಶಿಕ್ಷ ಣ ಪದವಿಗಳಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಬೇಕು ಎಂದು ಶಿಫಾರಸು ಮಾಡಿದೆ. ಇದಕ್ಕೂ ಮೊದಲು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗಲೂ ವೃತ್ತಿ ಶಿಕ್ಷ ಣಕ್ಕೆ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮೂಲಕವೇ ಕನ್ನಡ ಕಲಿಸುವುದು ಕಡ್ಡಾಯವಾಗಬೇಕೆಂದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಸೇರಿ ಕೆಲವು ವಿವಿ ಹಾಗೂ ಶಿಕ್ಷ ಣ ಸಂಸ್ಥೆಗಳಿಗೆ ಆದೇಶವಾಗುವಂತೆ ನೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಪ್ರಾಧಿಕಾರ ಮತ್ತೆ ತಾಂತ್ರಿಕ ಮತ್ತು ತಾಂತ್ರಿಕೇತರ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡುವಂತೆ ಸೂಚಿಸಿರುವುದು ಮಹತ್ವ ಪಡೆದುಕೊಂಡಿದೆ. ಯಾವ ರೀತಿಯಲ್ಲಿ ಕನ್ನಡ ಕಲಿಸಬೇಕು? ಅದರ ಪಠ್ಯ ಕ್ರಮ ಹೇಗಿರಬೇಕು ಎಂಬುದನ್ನು ತಜ್ಞರ ಶಿಫಾರಸಿನ ಮೇರೆಗೆ ರೂಪಿಸಲಿ. ಆದರೆ, ಪದವಿ ಹಂತದಲ್ಲೂ ಕನ್ನಡ ಕಲಿಕೆ ವೈಫಲ್ಯ ಕಾಣಬಾರದು.
Vijaya Karnataka Web vks editorial
ಸಂಪಾದಕೀಯ: ಪದವಿಯಲ್ಲಿ ಕನ್ನಡ ಕಲಿಕೆ ಕಡ್ಡಾಯ


ಹೊರ ರಾಜ್ಯಗಳಿಂದ ಇಲ್ಲಿಗೆ ಶಿಕ್ಷ ಣ ಕಲಿಯಲು ಆಗಮಿಸುವವರಿಗೆ ಈ ನೆಲದ ಭಾಷೆ, ಅದರ ಮಹತ್ವ ಮತ್ತು ಇಲ್ಲಿನ ಸಂಸ್ಕೃತಿಯ ಬಗ್ಗೆ ಪರಿಚಯ ಆಗಲೇಬೇಕು. ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡುವುದು ಈ ದಿಸೆಯಲ್ಲಿ ಒಂದು ಉತ್ತಮ ಮಾರ್ಗವಾಗಬಲ್ಲದು. ಫ್ರಾನ್ಸ್‌, ಜರ್ಮನಿ ಮತ್ತು ಜಪಾನ್‌ನಂಥ ದೇಶಗಳಿಗೆ ನೀವು ಶಿಕ್ಷ ಣಕ್ಕಾಗಿಯೋ, ವೃತ್ತಿ ಉದ್ದೇಶಕ್ಕಾಗಿಯೋ ಹೋಗಬೇಕಿದ್ದರೆ ಆ ದೇಶಗಳ ಭಾಷೆಯನ್ನು ಕಲಿತುಕೊಂಡೇ ಹೋಗಬೇಕು; ಅಂಥ ವಾತಾವಾರಣವನ್ನು ಅವರು ಸೃಷ್ಟಿಸಿದ್ದಾರೆ. ಅದೇ ರೀತಿಯ ವಾತಾವರಣ ನಮ್ಮಲ್ಲೂ ಸೃಷ್ಟಿಯಾಗಬೇಕು. ಆಗ ಕನ್ನಡದ ಭವ್ಯ ಪರಂಪರೆಯ ವ್ಯಾಪ್ತಿಗೆ ಹೊರಗಿನವರೂ ಒಳಬರಲು ಸಾಧ್ಯವಾಗುತ್ತದೆ. ಕನ್ನಡಗಿರು ಕೂಡ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವುದರ ಬಗ್ಗೆ ಅಸಡ್ಡೆ ತೋರಿಸುತ್ತಿದ್ದೇವೆ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ನಮ್ಮ ಈ ಪ್ರವೃತ್ತಿ ಹೀಗೆಯೇ ಮುಂದುವರಿದರೆ ಕನ್ನಡವೇ ಗೊತ್ತಿಲ್ಲದ ಒಂದು ಜನಾಂಗ ರಾಜ್ಯದಲ್ಲಿ ಸೃಷ್ಟಿಯಾಗುವ ಅಪಾಯವಿದೆ. ಹಾಗಾಗಬಾರದು. ಹೊರಗಿನವರಿಗೆ ಕನ್ನಡ ಕಲಿಸುವುದು ಎಷ್ಟು ಮಹತ್ವದ್ದಾಗಿದೆಯೋ ಅಷ್ಟೇ ಮಹತ್ವವು ನಾವು ನಮ್ಮ ಮಕ್ಕಳಿಗೆ ಕಲಿಸುವುದೂ ಆಗಿದೆ. ಸಿಬಿಎಸ್‌ಇ, ಐಸಿಎಸ್‌ಇ, ಕೇಂದ್ರೀಯ ವಿದ್ಯಾಲಯಗಳು, ನವೋದಯ ಶಾಲೆಗಳಲ್ಲಿ ಒಂದನೆಯ ತರಗತಿಯಿಂದಲೇ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬ ಆದೇಶವು ಜಾರಿಯಾಗುವಂತೆ ಮಾಡುವಲ್ಲಿ ಈ ಹಿಂದೆಯೇ ಪ್ರಾಧಿಕಾರ ಯಶಸ್ವಿಯಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಜಾರಿಯಾಗಿದೆ, ಆಗುತ್ತಿದೆ ಎಂಬುದರ ಮೇಲೆ ನಿಗಾ ಅಗತ್ಯ. ಶಿಕ್ಷ ಣ ಸಂಸ್ಥೆಗಳು ಕೂಡ, ಸುಪ್ರೀಂ ಕೋರ್ಟ್‌ನ ತೀರ್ಪನ್ನೇ ತಮ್ಮ ಗುರಾಣಿಯನ್ನಾಗಿಸಿಕೊಂಡು ಶಾಲಾ ಮಟ್ಟದಲ್ಲಿ ಕನ್ನಡ ಕಲಿಕೆಯನ್ನು ತ್ಯಜಿಸಿವೆ. ಇದೇ ರೀತಿಯಲ್ಲಿ ಪದವಿ ಮಟ್ಟದಲ್ಲೂ ಕನ್ನಡ ಕಲಿಸುವ ಶಿಫಾರಸು ಹಳ್ಳ ಹಿಡಿಯಬಾರದು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರಕಾರದ ಮೇಲೆ ಒತ್ತಡ ತಂದು, ಸೂಕ್ತ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ