ಆ್ಯಪ್ನಗರ

ಅಪ್ಪ ಮಗನನ್ನು ಹಿಡ್ಕೊಂಡು ಹಿಗ್ಗಾಮುಗ್ಗಾ ಹೊಡೀತಾ ಇದ್ದ

ಅಪ್ಪ ಮಗನನ್ನು ಹಿಡ್ಕೊಂಡು ಹಿಗ್ಗಾಮುಗ್ಗಾ ಹೊಡೀತಾ ಇದ್ದ ಪಕ್ಕದ ಮನೆಯವರು: ಯಾಕ್ರಿ? ಈ ರೀತಿ ಹೊಡಿತಿದ್ದೀರಿ? ಅಪ್ಪ: ನಾಳೆ ಇವನು ಬರೆದಿರುವ ಪರೀಕ್ಷೆಯ ಫಲಿತಾಂಶ ಬರುತ್ತದೆ...

Vijaya Karnataka Web 14 May 2017, 5:30 am

ಅಪ್ಪ ಮಗನನ್ನು ಹಿಡ್ಕೊಂಡು ಹಿಗ್ಗಾಮುಗ್ಗಾ ಹೊಡೀತಾ ಇದ್ದ.

ಪಕ್ಕದ ಮನೆಯವರು: ಯಾಕ್ರಿ? ಈ ರೀತಿ ಹೊಡಿತಿದ್ದೀರಿ?

ಅಪ್ಪ: ನಾಳೆ ಇವನು ಬರೆದಿರುವ ಪರೀಕ್ಷೆಯ ಫಲಿತಾಂಶ ಬರುತ್ತದೆ.

ಪಕ್ಕದ ಮನೆಯವರು: ಅದಕ್ಕೆ ಇವತ್ತು ಯಾಕೆ ಹೊಡೆಯುತ್ತಿದ್ದೀರಿ?

ಅಪ್ಪ: ನಾಳೆ ನಾನು ಊರಲ್ಲಿ ಇರಲ್ಲ.

*

ಹುಡುಗೀರು 12 ರೂ. ನೇಲ್‌ ಪಾಲಿಷ್‌, 5 ರೂ. ಫೇರ್‌ ಆ್ಯಂಡ್‌ ಲವ್ಲಿ ಪೌಚ್‌ ಮತ್ತು 7 ರೂಗಳ ಹೇರ್‌ ಕ್ಲಿಪ್‌ ಖರೀದಿಸಿ ಶಾಪಿಂಗ್‌ಗೆ ಹೋಗಿದ್ದೆ, ಶಾಪಿಂಗ್‌ಗೆ ಹೋಗಿದ್ದೆ ಎಂದು ಊರು ತುಂಬಾ ಹೇಳ್ಕೊಂಡು ಬರ್ತಾರೆ.

ಆದ್ರೆ ಹುಡುಗರು, ಬಾರ್‌ನಲ್ಲಿ 1000 ರೂ. ಬಿಲ್‌ ಕೊಟ್ಟು ಬಂದ್ರೂ, ಯಾರಿಗೂ ಹೇಳದೆ ಸುಮ್ನೆ ಮಲ್ಕೋತಾರೆ. ಅದಕ್ಕೆ ಹೇಳೋದು ಹುಡುಗರು ಬಹಳ ಸಿಂಪಲ್‌ ಅಂತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ