ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಯಾವುವು ಸಹ ಪೂರಕ ಪರೀಕ್ಷೆ ಆಗಿರುವುದಿಲ್ಲ. ವಿದ್ಯಾರ್ಥಿಗಳು ಮೂರರಲ್ಲಿ ಮೂರು ಪರೀಕ್ಷೆಗಳನ್ನು ಬರೆಯಬಹುದು. ಅಥವಾ ಒಂದು ಪರೀಕ್ಷೆಯನ್ನು ಬರೆಯಬಹುದು. ವಿದ್ಯಾರ್ಥಿಗಳು ಮೂರು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಉತ್ತಮ ಅಂಕಗಳು ಇರುತ್ತದೋ ಆ ಪರೀಕ್ಷೆಯ ಅಂಕಗಳನ್ನು ತಮ್ಮ ಫಲಿತಾಂಶವಾಗಿ ಪಡೆಯಬಹುದು. ಇಂತಹ ಒಂದು ಮಹತ್ತರ ನಿರ್ಧಾರವನ್ನು ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡ ಕಡಿಮೆ ಮಾಡಲು ಹಾಗೂ ಅವರು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡುವುದು ಈ ಮಾದರಿಯ ಮುಖ್ಯ ಉದ್ದೇಶವಾಗಿದೆ. ಯಾವೊಂದು ಪರೀಕ್ಷೆಯ ಅಂಕಪಟ್ಟಿಯಲ್ಲಿಯೂ ಪೂರಕ ಪರೀಕ್ಷೆ ಎಂದು ನಮೂದು ಆಗುವುದಿಲ್ಲ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಯಾವುವು ಸಹ ಪೂರಕ ಪರೀಕ್ಷೆ ಆಗಿರುವುದಿಲ್ಲ. ವಿದ್ಯಾರ್ಥಿಗಳು ಮೂರರಲ್ಲಿ ಮೂರು ಪರೀಕ್ಷೆಗಳನ್ನು ಬರೆಯಬಹುದು. ಅಥವಾ ಒಂದು ಪರೀಕ್ಷೆಯನ್ನು ಬರೆಯಬಹುದು. ವಿದ್ಯಾರ್ಥಿಗಳು ಮೂರು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಉತ್ತಮ ಅಂಕಗಳು ಇರುತ್ತದೋ ಆ ಪರೀಕ್ಷೆಯ ಅಂಕಗಳನ್ನು ತಮ್ಮ ಫಲಿತಾಂಶವಾಗಿ ಪಡೆಯಬಹುದು. ಇಂತಹ ಒಂದು ಮಹತ್ತರ ನಿರ್ಧಾರವನ್ನು ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡ ಕಡಿಮೆ ಮಾಡಲು ಹಾಗೂ ಅವರು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡುವುದು ಈ ಮಾದರಿಯ ಮುಖ್ಯ ಉದ್ದೇಶವಾಗಿದೆ. ಯಾವೊಂದು ಪರೀಕ್ಷೆಯ ಅಂಕಪಟ್ಟಿಯಲ್ಲಿಯೂ ಪೂರಕ ಪರೀಕ್ಷೆ ಎಂದು ನಮೂದು ಆಗುವುದಿಲ್ಲ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ವಿದ್ಯಾರ್ಥಿಗಳಿಗೆ 2023-24ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು ಮಾರ್ಚ್‌ 25 ರಿಂದ ಏಪ್ರಿಲ್ 06, 2024 ರವರೆಗೆ ನಡೆಸಲಿದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 8,96,271 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯತ್ತಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2024
ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ಫಲಿತಾಂಶವನ್ನು ಸಹ ತಡವಾಗಿ ಬಿಡುಗಡೆ ಮಾಡುವ ಅವಕಾಶ ಇದೆ. ಆದ್ದರಿಂದ ಸಾಮಾನ್ಯವಾಗಿಯೇ ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಮೇ ಕೊನೆ ವಾರದಲ್ಲಿ ಅಥವಾ ಜೂನ್‌ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ನಿರೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಣೆಗೊಂಡ ನಂತರ ತಮ್ಮ ರೋಲ್‌ ನಂಬರ್ / ರಿಜಿಸ್ಟರ್‌ ನಂಬರ್ / ನೋಂದಣಿ ಸಂಖ್ಯೆ ಬಳಸಿ ಫಲಿತಾಂಶ ಚೆಕ್‌ ಮಾಡಬಹುದು. ಫಲಿತಾಂಶ ಚೆಕ್‌ ಮಾಡಲು ವೆಬ್‌ಸೈಟ್‌ ವಿಳಾಸಗಳು ಕೆಳಗಿನಂತಿವೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಚೆಕ್‌ ಮಾಡಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸಗಳು
https://kseab.karnataka.gov.in
https://karresults.nic.in/
https://sslc.karnataka.gov.in

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ಮುಂದಿನ ಶಿಕ್ಷಣ ಆಯ್ಕೆಗೆ ನಿರ್ಣಾಯಕ
10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಅತಿಹೆಚ್ಚಿನ ನಿರ್ಣಾಯಕ ಹಂತವಾಗಿದೆ. ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣಗಳನ್ನು ಪಡೆಯಲು, ವೃತ್ತಿಪರ ಶಿಕ್ಷಣಗಳನ್ನು ಆಯ್ಕೆ ಮಾಡಲು, ಅದರಲ್ಲೂ ಪ್ರತಿಷ್ಠಿತ ಎನಿಸಿಕೊಂಡ ಸರ್ಕಾರಿ ಕಾಲೇಜುಗಳು, ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯಲು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಹಳ ನಿರ್ಣಾಯಕವಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶವು ಉತ್ತಮವಾಗಿರದೇ ಇದ್ದಲ್ಲಿ ಇಚ್ಛೆಯ ಕಾಲೇಜುಗಳಲ್ಲಿ, ಆಸಕ್ತ ವಿಷಯಗಳಲ್ಲಿ ಮುಂದಿನ ವಿದ್ಯಾಭ್ಯಾಸವು ಕಷ್ಟವಾಗುವ ಸನ್ನಿವೇಶ ಬರುತ್ತದೆ.

ಎಸ್‌ಎಸ್ಎಲ್‌ಸಿ ಫಲಿತಾಂಶದ ನಂತರ ಮುಂದೇನು?
ಎಸ್‌ಎಸ್‌ಎಲ್‌ಸಿ ಫಲಿತಾಂಶದ ನಂತರ ಮುಂದಿನ ಆಯ್ಕೆ ಉನ್ನತ ವಿದ್ಯಾಭ್ಯಾಸವಾದಲ್ಲಿ ಹೇರಳ ಅವಕಾಶಗಳಿವೆ. ಪಿಯುಸಿ ಶಿಕ್ಷಣ, ಐಟಿಐ ಶಿಕ್ಷಣ, ಡಿಪ್ಲೊಮ ಇನ್ ಇಂಜಿನಿಯರಿಂಗ್ ಶಿಕ್ಷಣವು ಮುಖ್ಯ ಮಾರ್ಗಗಳಾದರೆ, ಅವುಗಳಲ್ಲಿ ವೈವಿಧ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶಗಳಿವೆ.

ಎಸ್‌ಎಸ್ಎಲ್‌ಸಿ ಫಲಿತಾಂಶದ ನಂತರ ಪಿಯುಸಿ ಶಿಕ್ಷಣ ಪಡೆಯುವವರಿಗೆ ಆಯ್ಕೆಗಳು
ಪಿಯುಸಿ ಶಿಕ್ಷಣ ಪಡೆಯಲು ಬಯಸುವವರು ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಎಂದು ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳಬಹುದು. ನಂತರ ಆಯ್ಕೆ ಮಾಡಿದ ಒಂದು ವಿಭಾಗದಲ್ಲಿ ನಿರ್ದಿಷ್ಟ ಸಂಯೋಜನೆಯ ವಿಷಯಗಳನ್ನು ಓದಲು ಸಹ ಅವಕಾಶ ಇರುತ್ತದೆ. ಉದಾಹರಣೆಗೆ ಕಲಾ ವಿಭಾಗದಲ್ಲಿ ಮಾನವಿಕ ವಿಷಯಗಳ ಪೈಕಿ ಯಾವುದಾದರೂ 4 ವಿಷಯಗಳ ಸಂಯೋಜನೆ (ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ- HEGP / ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ - HEPS) ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ವಿಜ್ಞಾನದಲ್ಲೂ ಪಿಸಿಎಂಬಿ, ಪಿಸಿಎಂಸಿ ಎಂದು ಆಯ್ಕೆ ಮಾಡಬಹುದು. ವಾಣಿಜ್ಯ ಶಿಕ್ಷಣದಲ್ಲಿ ಕಾಮರ್ಸ್‌ ಕಾಂಬಿನೇಷನ್‌ ಆಯ್ಕೆ ಮಾಡಬಹುದು.

ಎಸ್‌ಎಸ್ಎಲ್‌ಸಿ ಫಲಿತಾಂಶದ ನಂತರ ಐಟಿಐ ಶಿಕ್ಷಣ ಪಡೆಯುವವರಿಗೆ ಆಯ್ಕೆಗಳು
ಐಟಿಐ ಶಿಕ್ಷಣದಲ್ಲಿ ವಿವಿಧ ಟ್ರೇಡ್‌ ಗಳಿದ್ದು ಯಾವುದಾದರೂ ಒಂದು ಟ್ರೇಡ್‌ ಆಯ್ಕೆ ಮಾಡಿಕೊಂಡು ಓದಬಹುದು. ಉದಾಹರಣೆಗೆ ಫಿಟ್ಟರ್, ಇಲೆಕ್ಟ್ರಾನಿಕ್ಸ್‌, ಇಲೆಕ್ಟ್ರಿಕಲ್ಸ್‌, ಮೆಕ್ಯಾನಿಕಲ್, ಟರ್ನರ್, ಕಾರ್ಪೆಂಟರ್, ಮಷಿನಿಸ್ಟ್‌, ಡ್ರಾಟ್ಸ್‌ಮನ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ ಎಂದು ಹೀಗೆ ಹಲವಾರು ಇರುತ್ತವೆ.

ಎಸ್‌ಎಸ್ಎಲ್‌ಸಿ ಫಲಿತಾಂಶದ ನಂತರ ಡಿಪ್ಲೊಮ ಶಿಕ್ಷಣ ಪಡೆಯುವವರಿಗೆ ಆಯ್ಕೆಗಳು
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶದ ನಂತರ ಡಿಪ್ಲೊಮ ಓದುವವರಿಗೆ ಹಲವು ವಿಷಯಗಳಲ್ಲಿ ವೃತ್ತಿ ಶಿಕ್ಷಣ ಪಡೆಯುವ ಅವಕಾಶ ಇದೆ. ಇಲ್ಲೂ ಸಹ ಹಲವು ಬ್ರ್ಯಾಂಚ್‌ಗಳಿದ್ದು ಅವುಗಳೆಂದರೆ - ಇಲೆಕ್ಟ್ರಿಕಲ್ ಬ್ರ್ಯಾಂಚ್, ಕಂಪ್ಯೂಟರ್ ಸೈನ್ಸ್‌ ಬ್ರ್ಯಾಂಚ್‌, ಸಿವಿಲ್ ಇಂಜಿನಿಯರಿಂಗ್ ಬ್ರ್ಯಾಂಚ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ರ್ಯಾಂಚ್, ಇಲೆಕ್ಟ್ರಾನಿಕ್ಸ್‌ ಅಂಡ್‌ ಕಂಮ್ಯುನಿಕೇಷನ್‌ ಇಂಜಿನಿಯರಿಂಗ್ ಬ್ರ್ಯಾಂಚ್, ಆಟೋಮೊಬೈಲ್ ಬ್ರ್ಯಾಂಚ್‌, ಇತರೆ. ಈ ಡಿಪ್ಲೊಮ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ತಮ್ಮ ತಮ್ಮ ಹತ್ತಿರದ ಪಾಲಿಟೆಕ್ನಿಕ್ ಶಿಕ್ಷಣ ಕಾಲೇಜುಗಳು / ಸಂಸ್ಥೆಗಳಲ್ಲಿ ಅರ್ಜಿ ನಮೂನೆ ಪಡೆದು ಅರ್ಜಿ ಸಲ್ಲಿಸಬೇಕು. ನಂತರ ಕೌನ್ಸಿಲಿಂಗ್‌ನಲ್ಲಿ ಹಾಜರಾಗಬೇಕು. ಇಲ್ಲೂ ಸಹ ಪ್ರತಿಷ್ಠಿತ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕು ಎಂದರೆ ಎಸ್‌ಎಸ್ಎಲ್‌ಸಿ ಫಲಿತಾಂಶವು ಉತ್ತಮ ಅಂಕಗಳಿಂದ ಕೂಡಿರಬೇಕು.