ಆ್ಯಪ್ನಗರ

ಬೆಂಗಳೂರು ಸಿಟಿ ವಿವಿ ಪ್ರವೇಶಾತಿ ಆರಂಭ: ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಸಿಟಿ ಯುನಿವರ್ಸಿಟಿಯು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಿಸಿದೆ. ಪದವಿ ಪಾಸಾದ, ಪಿಜಿ ಕೋರ್ಸ್‌ ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಅಗತ್ಯ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

Vijaya Karnataka Web 24 Sep 2021, 5:11 pm
2021-22ನೇ ಶೈಕ್ಷಣಿಕ ಸಾಲಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ(ಬೆಂ.ನ.ವಿ) ಸೆಂಟ್ರಲ್‌ ಕಾಲೇಜು ಆವರಣದ ಸ್ನಾತಕೋತ್ತರ ವಿಭಾಗಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಲಭ್ಯವಿರುವ ಈ ಕೆಳಕಂಡ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Vijaya Karnataka Web applications has been invited for bengaluru city university post graduate admissions 2021
ಬೆಂಗಳೂರು ಸಿಟಿ ವಿವಿ ಪ್ರವೇಶಾತಿ ಆರಂಭ: ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ


ವಿವಿ ವಿಭಾಗಗಳಲ್ಲಿ / ಸಂಯೋಜಿತ ಕಾಲೇಜುಗಳಲ್ಲಿ ಲಭ್ಯವಿರುವ ಸ್ನಾತಕೋತ್ತರ ವಿಷಯಗಳ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ. ಹಾಗೂ ಅರ್ಜಿ ಸಲ್ಲಿಸಲು ಅಗತ್ಯ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ.

​ಕಲಾ ವಿಭಾಗ

ಎಂಎ ಕೋರ್ಸ್‌ಗಳು : ಕನ್ನಡ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪಾನಿಷ್, ಜಪಾನೀಸ್, ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಕಾರ್ಯ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ನಗರ ಅಧ್ಯಯನ ಮತ್ತು ಯೋಜನೆ.

​ಎಂವಿಎ (ಮಾಸ್ಟರ್ ಆಫ್ ವಿಷುವಲ್ ಆರ್ಟ್ಸ್‌) ಕೋರ್ಸ್‌ಗಳು

ಅನಿಮೇಷನ್ ಡಿಸೈನ್, ಇಂಟಿರಿಯನ್ ಡಿಸೈನ್, ಅಪ್ಲೈಡ್ ಆರ್ಟ್ಸ್‌, ಆರ್ಟ್ಸ್‌ ಹಿಸ್ಟ್ರೀ, ಪೇಂಟಿಂಗ್, ಪ್ರಿಂಟ್ ಮೇಕಿಂಗ್, ಸ್ಕಲ್ಪಚರ್

​ವಿಜ್ಞಾನ ವಿಭಾಗ ಕೋರ್ಸ್‌ಗಳು

ಎಂಎಸ್ಸಿ : ಪ್ರಾಣಿ ವಿಜ್ಞಾನ, ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಗಣಿತ, ಸೂಕ್ಷ್ಮಜೀವ ಶಾಸ್ತ್ರ, ಭೌತಶಾಸ್ತ್ರ, ಸಸ್ಯವಿಜ್ಞಾನ, ಮನಃಶಾಸ್ತ್ರ, ಮಾನಸಿಕ ಸಮಾಲೋಚನೆ, ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ, ಪರಿಸರ ವಿಜ್ಞಾನ, ಗಣಕ ವಿಜ್ಞಾನ.

​ವಾಣಿಜ್ಯ ವಿಭಾಗ ಕೋರ್ಸ್‌ಗಳು

ಎಂಕಾಂ ಫೈನಾನ್ಸ್‌ ಮತ್ತು ಅಕೌಂಟಿಂಗ್, ಎಂಕಾಂ ಇಂಟರ್‌ನ್ಯಾಷನಲ್ ಬಿಸಿನೆಸ್, ಎಂಟಿಟಿಎಂ - ಮಾಸ್ಟರ್ ಆಫ್‌ ಟೂರಿಸಂ ಅಂಡ್ ಟ್ರಾವಲ್ ಮ್ಯಾನೇಜ್ಮೆಂಟ್, ಎಂಎಂಎಸ್- ಮಾಸ್ಟರ್ ಆಫ್‌ ಮ್ಯಾನೇಜ್ಮೆಂಟ್‌ ಸ್ಟಡೀಸ್.

​ಕಾನೂನು ವಿಭಾಗ, ಶಿಕ್ಷಣ ವಿಭಾಗ ಕೋರ್ಸ್‌ಗಳು

ಕಾನೂನು ವಿಭಾಗ : ಎಲ್‌ಎಲ್‌ಎಂ, ಪಿಜಿ ಡಿಪ್ಲೊಮ ಕೋರ್ಸ್‌ಗಳು, ಸೈಬರ್‌ ಕಾನೂನು ಮತ್ತು ಸೈಬರ್ ವಿಧಿವಿಜ್ಞಾನ, ಪರಿಸರ ಕಾನೂನು ಮತ್ತು ನೀತಿ, ಭೌದ್ಧಿಕ ಹಕ್ಕುಗಳು ಮತ್ತು ಕಾನೂನು.

ಶಿಕ್ಷಣ ವಿಭಾಗ ಕೋರ್ಸ್‌ಗಳು : ಎಂ.ಇಡಿ (ಶಿಕ್ಷಣ)

CTET 2021: ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ರಿಜಿಸ್ಟ್ರೇಷನ್ ಆರಂಭ., ವೇಳಾಪಟ್ಟಿ ಇಲ್ಲಿದೆ

​ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು

ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಹ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಪದವಿಯ ಅಂತಿಮ ಫಲಿತಾಂಶ ಕಾಯುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ, ಸೀಟ್ ಮ್ಯಾಟ್ರಿಕ್ಸ್‌ ಮತ್ತು ಕೋರ್ಸ್‌ಗಳ ಶುಲ್ಕದ ಮಾಹಿತಿ ಮತ್ತು ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಬೆಂಗಳೂರು ಸಿಟಿ ವಿವಿ ವೆಬ್‌ಸೈಟ್‌ http://bcu.ac.in ಗೆ ಸಂಪರ್ಕಿಸಲು ಕೋರಲಾಗಿದೆ. ಆನ್‌ಲೈನ್‌ ಮೂಲಕವೇ ಅರ್ಜಿ ಅಲ್ಲಿಸಬೇಕು.

ನೀಟ್‌ ಮೆಡಿಕಲ್‌ ಪರೀಕ್ಷೆಯಲ್ಲಿ ಮೇಜರ್ ಸ್ಕ್ಯಾಮ್‌: ಸಿಬಿಐ ಹೇಳಿಕೆ

​ಅರ್ಜಿ ಶುಲ್ಕ ವಿವರ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200.

ಎಸ್‌ಸಿ / ಎಸ್‌ಟಿ / ಪ್ರವರ್ಗ-1 / ವಿಶೇಷ ಚೇತನರು ಅಭ್ಯರ್ಥಿಗಳಿಗೆ ರೂ.100.

ಆನ್‌ಲೈನ್‌ ಮುಖಾಂತರ ಅರ್ಜಿ ಶುಲ್ಕ ಸಂದಾಯ ಮಾಡಬೇಕು.

PGCET, DCET 2021 ಪರೀಕ್ಷೆಗಳು ಮುಂದೂಡಿಕೆ

​ಅರ್ಜಿ ಹಾರ್ಡ್‌ಕಾಪಿಯನ್ನು ಸಲ್ಲಿಸಬೇಕು

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಒಂದು ಮುದ್ರಿತ ಪ್ರತಿಯನ್ನು ಅಗತ್ಯವಿರುವ ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ನೊಂದಾಯಿತ ಅಂಚೆಯ ಮುಖಾಂತರ ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ವಿಳಾಸ - ಅಧ್ಯಕ್ಷರು, ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಆವರಣ, ಡಾ.ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಕಳುಹಿಸಲು ತಿಳಿಸಲಾಗಿದೆ.

Apply Online

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌