ಆ್ಯಪ್ನಗರ

ಬೆಂಗಳೂರು ಉತ್ತರ ವಿವಿ ಪ್ರವೇಶಾತಿ ದಿನಾಂಕ ವಿಸ್ತರಣೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2020-21ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

Vijaya Karnataka Web 26 Nov 2020, 5:15 pm
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2020-21ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಕುರಿತು ವಿವಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ದಿನಾಂಕಗಳ ವಿವರಗಳು ಈ ಕೆಳಗಿನಂತಿವೆ.
Vijaya Karnataka Web bnu admission application last date
bnu admission application last date


ಪ್ರಮುಖ ದಿನಾಂಕಗಳು

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-11-2020

ರೂ.200 ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-12-2020

ಆನ್‌ಲೈನ್‌ ಅರ್ಜಿಗಳನ್ನು ಮುದ್ರಿತ ಪ್ರತಿಯೊಂದಿಗೆ ಪೂರಕ ದಾಖಲೆಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು 07-12-2020 ಕೊನೆ ದಿನಾಂಕವಾಗಿರುತ್ತದೆ.

ಬಿ.ಎಡ್, ಡಿ.ಎಡ್ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಭರ್ತಿ ಮಾಡಿದ ಅರ್ಜಿಯ ಮುದ್ರಿತ ಪ್ರತಿಗಳ ಜೊತೆ ಸೀಟುಗಳ ಕೋರಿಕೆಗೆ ಬೇಕಾಗುವ ಎಲ್ಲಾ ಪೂರಕ ದಾಖಲೆಗಳನ್ನು (ದೃಢೀಕರಿಸಿದ) ಲಗತ್ತಿಸಿ, ನೊಂದಾಯಿತ ಅಂಚೆಯ ಮುಖಾಂತರ ಅಥವಾ ಖುದ್ದಾಗಿ ನಿಗಧಿಪಡಿಸಿರುವ ಕೊನೆಯ ದಿನಾಂಕದೊಳಗೆ ಕುಲಸಚಿವರ ಕಛೇರಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಆಡಳಿತ ಕಟ್ಟಡ (ಶ್ರೀ ದೇವರಾಜ ಅರಸು ವೈದ್ಯಕೀಯ ವಿವಿ ಎದುರು ) ಶ್ರೀ ದೇವರಾಜ ಅರಸು ಬಡಾವಣೆ, ಟಮಕ, ಕೋಲಾರ-563103 ಈ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸತಕ್ಕದ್ದು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.220.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.110.

ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಪೇಮೆಂಟ್ ಗೇಟ್‌ವೇ ಮುಖಾಂತರವೇ ಸಂದಾಯ ಮಾಡತಕ್ಕದ್ದು.

ಬೆಂಗಳೂರು ಉತ್ತರ ವಿವಿ ಮತ್ತು ಕೋಲಾರ ಕೇಂದ್ರ ಸ್ನಾತಕೋತ್ತರ ಕೋರ್ಸ್‌ಗಳ ವಿವರ

ಕಲಾ ವಿಭಾಗ ಕೋರ್ಸ್‌ಗಳು : ಇಂಗ್ಲಿಷ್, ಅರ್ಥಶಾಸ್ತ್ರ, ಕನ್ನಡ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಮಾಜ ಕಾರ್ಯ (ಎಂ.ಎಸ್‌.ಡಬ್ಲ್ಯೂ).

ವಿಜ್ಞಾನ ವಿಭಾಗ : ಎಂಎಸ್ಸಿ ಗಣಿತಶಾಸ್ತ್ರ, ಗಣಕ ವಿಜ್ಞಾನ, ಸಸ್ಯಶಾಸ್ತ್ರ, ಭೌತಶಾಸ್ತ್ರ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (ಎಂ.ಎಲ್‌.ಐ.ಎಸ್ಸಿ).

ವಾಣಿಜ್ಯ ವಿಭಾಗ: ಎಂ.ಕಾಂ.

ಬೆಂಗಳೂರು ಉತ್ತರ ವಿವಿ ವಿವಿಧ ಸಂಯೋಜಿತ ಕಾಲೇಜುಗಳಲ್ಲಿ ಇರುವ ಸ್ನಾತಕೋತ್ತರ ಕೋರ್ಸುಗಳ ವಿವರ

ಕಲಾ ವಿಭಾಗ : ಎಂಎ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಂವಹನ ಹಾಗೂ ಸಮಾಜ ಕಾರ್ಯ (ಎಂ.ಎಸ್‌.ಡಬ್ಲ್ಯೂ).

ವಿಜ್ಞಾನ ವಿಭಾಗ : ಎಂಎಸ್ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿಶಾಸ್ತ್ರ, ಗಣಕ ವಿಜ್ಞಾನ, ಜೀವತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರ, ಆಡಿಯೋಲಜಿ, ಸ್ಫೀಚ್ ಲಾಂಗ್ವೇಜ್ ಪೇಥಾಲಜಿ, ಆಡಿಯೋಲಜಿ ಅಂಡ್ ಸ್ಪೀಚ್ ಲಾಂಗ್ವೇಜ್ ಪೇಥಾಲಜಿ, ಮನಃಶಾಸ್ತ್ರ ಮತ್ತು ಸೈಕಾಲಜಿಕಲ್ ಕೌನ್ಸಿಲಿಂಗ್.

ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ : ಎಂ.ಕಾಂ.

ಶಿಕ್ಷಣ ವಿಭಾಗ : ಎಂ.ಎಡ್‌ (ಶಿಕ್ಷಣ).

ಅನುಕೂಲಕರವಾಗಿರುವ ವಿದ್ಯಾರ್ಥಿಗಳ ಪಾಲಕರು ಪ್ರವೇಶ ಶುಲ್ಕ ಪಾವತಿಸಿ: ಎಸ್‌ ಸುರೇಶ್‌ಕುಮಾರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌