ಆ್ಯಪ್ನಗರ

2024ನೇ ಸಾಲಿನ I, II ಪಿಯುಸಿ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆ ವಿಷಯವಾರು ಡೌನ್‌ಲೋಡ್ ಮಾಡಿ..

Karnataka PUC Subjectwise Model Question Papers 2024: ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಿತದೃಷ್ಟಿಯಿಂದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆ.

Authored byಸುನೀಲ್ ಬಿ ಎನ್ | Vijaya Karnataka Web 23 Jan 2024, 5:45 pm

ಹೈಲೈಟ್ಸ್‌:

  • ಪಿಯು ಮಾದರಿ ಪ್ರಶ್ನೆ ಪತ್ರಿಕೆಗಳು ಬಿಡುಗಡೆ.
  • ಕೆಎಸ್‌ಇಎಬಿ ವೆಬ್‌ಸೈಟ್‌ನಲ್ಲಿ ಲಭ್ಯ.
  • ಡೌನ್‌ಲೋಡ್‌ ಮಾಡುವ ವಿಧಾನ ಇಲ್ಲಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web karnaraka 2nd puc model question papers 2024
2023-24 academic year I & II PUC Examination - Model Question Papers
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24ನೇ ಸಾಲಿನ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಚೆಕ್‌ ಮಾಡಲು ಹಾಗೂ ಡೌನ್‌ಲೋಡ್‌ ಮಾಡಲು ವಿಧಾನ, ಲಿಂಕ್ ಕೆಳಗಿನಂತೆ ನೀಡಲಾಗಿದೆ.
ಪ್ರಥಮ / ದ್ವಿತೀಯ ಪಿಯುಸಿ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆ ಡೌನ್‌ಲೋಡ್‌ ಹೇಗೆ?
- ವಿದ್ಯಾರ್ಥಿಗಳು ಕೆಎಸ್‌ಇಎಬಿ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಗೆ ಭೇಟಿ ನೀಡಿ.
- ಓಪನ್‌ ಆದ ಮುಖಪುಟದಲ್ಲಿ ' Documents ಕಾಲಂ ಅಡಿಯಲ್ಲಿ PUC >> Question Papers ಆಯ್ಕೆ ಮಾಡಿ ಕ್ಲಿಕ್ ಮಾಡಿ.
- ನಂತರ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ.
- ಈ ವೆಬ್‌ಪುಟದಲ್ಲಿ '2023-24 academic year I & II PUC Examination - Model Question Papers, Blue print, Illustrative examples of project work' ಎಂದಿರುವ ಲಿಂಕ್ ಕ್ಲಿಕ್ ಮಾಡಿ.
- ನಂತರ ತೆರೆಯುವ ವೆಬ್‌ಪೇಜ್‌ನಲ್ಲಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮತ್ತು ಪ್ರಥಮ ಪಿಯುಸಿ'ಯ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳ ಡೌನ್‌ಲೋಡ್‌ ಮಾಡಬಹುದು.
- ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್ ಮಾಡಿದರೆ ಆ ವಿಷಯದ ಮಾದರಿ ಪ್ರಶ್ನೆ ಪತ್ರಿಕೆ ಪಿಡಿಎಫ್‌ ಓಪನ್‌ ಆಗುತ್ತದೆ.
- ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇತ್ತೀಚೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಟೈಮ್‌ ಟೇಬಲ್‌ ಪ್ರಕಾರ ಫೆಬ್ರುವರಿ 2 ರಿಂದ 27, 2024 ರವರೆಗೆ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ವಿಷಯವಾರು ವೇಳಾಪಟ್ಟಿಯನ್ನು ಚೆಕ್‌ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.

ಕರ್ನಾಟಕ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹೊಸ ವೇಳಾಪಟ್ಟಿ ಬಿಡುಗಡೆ

ಕೆಎಸ್‌ಇಎಬಿ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು ಮಾರ್ಚ್‌ 01 ರಿಂದ 22 ರವರೆಗೆ ನಡೆಸಲು ಉದ್ದೇಶಿಸಿದ್ದು, ವಿದ್ಯಾರ್ಥಿಗಳು ವಿಷಯವಾರು ಪರೀಕ್ಷೆ ದಿನಾಂಕಗಳನ್ನು ಚೆಕ್‌ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.

Karnataka 2nd PUC Time Table 2024: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 ಅಂತಿಮ ವೇಳಾಪಟ್ಟಿ ಪ್ರಕಟ
ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌