ಆ್ಯಪ್ನಗರ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 15 ದಿನ ದಸರಾ ರಜೆ: ಯಾವ ದಿನಾಂಕದಿಂದ ಗೊತ್ತೇ?

Dasara Holidays 2019: ಕರ್ನಾಟಕದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ದಸರಾ ರಜೆ ಯಾವಾಗಿನಿಂದ ಸಿಗಲಿದೆ ಎಂಬುದರ ಡೀಟೇಲ್ಸ್ ಇಲ್ಲಿದೆ. ರಜೆಯ ಪ್ಲಾನ್‌ಗಾಗಿ ಈ ಮಾಹಿತಿಗಳನ್ನು ತಿಳಿಯಿರಿ.

Vijaya Karnataka Web 1 Oct 2019, 11:12 am

ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿವೆ. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಎಲ್ಲಾ ವಯೋಮಾನದವರು ಕುಣಿದು ಕುಪ್ಪಳಿಸುವ ದಸರಾ ಅಂಗವಾದ 'ಯುವ ಸಂಭ್ರಮ' ನಿನ್ನೆಯಷ್ಟೇ (ಸೆಪ್ಟೆಂಬರ್ 17, 2019) ಚಾಲನೆ ಸಿಕ್ಕಿದೆ. ಅಧಿಕೃತವಾಗಿ ನಾಡಹಬ್ಬ ಮೈಸೂರು ದಸರಾದ ಇತರೆ ಎಲ್ಲಾ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8 ರವರೆ ನಡೆಯಲಿವೆ.
Vijaya Karnataka Web Dasara Holidays 2019 in karnataka


ಕರ್ನಾಟಕ ಅಂಚೆ ಇಲಾಖೆಯ 2637 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ

ದಸರಾ ಎಂಬ ಪದ ಕಿವಿಗೆ ಬಿದ್ದ ತಕ್ಷಣ ಶಾಲಾ ಮಕ್ಕಳಿಂದ ಹಿಡಿದು ಸರ್ಕಾರಿ-ಖಾಸಗಿ ಸಂಸ್ಥೆ ಗಳಲ್ಲಿ ಕೆಲಸ ಮಾಡುವವರೆಲ್ಲರಿಗೂ ತಲೆಗೆ ಬರುವ ಅಲೋಚನೆ ರಜೆ ಎಷ್ಟು ದಿನ ಸಿಗಬಹುದು ಎಂಬುದು. ಆದರೆ ರಜೆ ಎಷ್ಟು ದಿನ ಕೊಟ್ಟರೂ ಯಾರಿಗೂ ಸಾಲದು ಬಿಡಿ.

ದಸರಾ ರಜೆಗಳ ಮಾಹಿತಿ ಈ ಕೆಳಗಿನಂತಿದೆ

ಮೈಸೂರು ಡಿವಿಷನ್‌ಗೆ ಒಳಪಡುವ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ದಸರಾ ರಜೆ ಅಕ್ಟೋಬರ್ 6, 2019 ರಿಂದ ಅಕ್ಟೋಬರ್ 20 ವರೆಗೆ ಸಿಗಬಹುದಾದ ಅವಕಾಶ ಇದೆ. ವಿದ್ಯಾರ್ಥಿಗಳು 15 ದಿನಗಳ ಕಾಲ ದಸರಾ ರಜೆ ಮಜಾ ಮಾಡಬಹುದು. ನಾಡಹಬ್ಬ ಮೈಸೂರು ದಸರಾ ವೈಭವವನ್ನು ಕೊನೆ ಎರಡು ಮೂರು ದಿನಗಳ ಕಾಲ ಕಣ್ತುಂಬಿಕೊಳ್ಳಬಹುದು.

ಖಾಸಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯಾ ಸಂಸ್ಥೆಯ ತೀರ್ಮಾನದಂತೆ ರಜೆ ಸಿಗಲಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಕಡಿಮೆ ದಿನಗಳ ದಸರಾ ರಜೆಯನ್ನು ನೀಡಬಹುದು.

ಮೈಸೂರು ವಿಭಾಗ ಹೊರತು ಪಡಿಸಿ ಇತರೆ ಪ್ರದೇಶಗಳಲ್ಲಿಯ ದಸರಾ ರಜೆಯನ್ನು ಆಯಾ ವಿಭಾಗಕ್ಕೆ ಸಂಬಂಧಿಸಿದ ಜಂಟಿ ನಿರ್ದೇಶಕರು ನಿರ್ಧರಿಸುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಕಡೆ ಪ್ರವಾಹ ಬಂದ ಕಾರಣ ಆ ಭಾಗದ ವಿದ್ಯಾರ್ಥಿಗಳಿಗೆ ಯಾವ ದಿನಾಂಕಗಳಲ್ಲಿ ರಜೆ ಸಿಗಬಹುದು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಕೋಲಾರ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ನೇಮಕ: 131 ಹುದ್ದೆಗಳಿಗೆ ಅರ್ಜಿ

ಇನ್ನೂ ಖಾಸಗಿ ಕಂಪನಿಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ದಸರಾ ರಜೆ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 8 ರಂದು ಇದ್ದು, ಆ ದಿನ ಸಿಗಲಿದೆ. ವಾರದ ಮಧ್ಯದಲ್ಲಿ ದಸರಾ ರಜೆ ಇರುವುದರಿಂದ ಎಲ್ಲರಿಗೂ ಸ್ವಲ್ಪ ಬೇಸರವೇ ಆಗುವುದು. ವೀಕೆಂಡ್‌ಗೆ ಒಂದು ದಿನ ಹಿಂದಿನ ದಿನ ಇದ್ದರೂ ಎಲ್ಲರೂ ತುಂಬಾ ಸಂತೋಷದಿಂದ ರಜೆಯನ್ನು ಎಂಜಾಯ್ ಮಾಡಬಹುದಿತ್ತು.

ಮೈಸೂರು ದಸರಾ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್‌ ವಿಳಾಸ https://www.mysoredasara.gov.in/ ಕ್ಕೆ ಭೇಟಿ ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌