ಆ್ಯಪ್ನಗರ

JEE Main 2019 Topper: ಮೈಸೂರಿನ ಕೇಂದ್ರೀಯ ವಿದ್ಯಾಲಯದ ನಾರ್ಮಿನ್‌ ಕೌಸರ್‌ ಟಾಪರ್‌

ದೇಶಾದ್ಯಂತ ಒಟ್ಟು 1,204 ಕೇಂದ್ರೀಯ ವಿದ್ಯಾಲಯಗಳಿದ್ದು, ತೆಹ್ರಾನ್‌, ಕಾಠ್ಮಂಡು ಮತ್ತು ಮಾಸ್ಕೊ ರಾಯಭಾರ ಕಚೇರಿಯಲ್ಲಿ ಕೂಡ ಕೇಂದ್ರೀಯ ವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ.

Vijaya Karnataka 17 May 2019, 11:36 am
ಹೊಸದಿಲ್ಲಿ: 2019ರ ಜಾಯಿಂಟ್‌ ಎಂಟ್ರೆನ್ಸ್‌ ಮೇನ್‌ ಪರೀಕ್ಷೆಯಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನ್‌ (ಕೆವಿಎಸ್‌) ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದ್ದು, ಸುಮಾರು 6,094 ವಿದ್ಯಾರ್ಥಿಗಳು ಮೇ 27ರಂದು ನಡೆಯುವ ಜೆಇಇ ಅಡ್ವಾನ್ಸಡ್‌ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿದ್ದಾರೆ. ಈ ವರ್ಷ ಒಟ್ಟು 21,299 ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆ ಬರೆದಿದ್ದರು.
Vijaya Karnataka Web Kendriya Vidyalaya


ಮೈಸೂರು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ನಾರ್ಮಿನ್‌ ಕೌಸರ್‌ ಅತಿಹೆಚ್ಚು ಪರ್ಸೆಂಟೈಲ್‌ (99.98) ಗಳಿಸಿದ್ದು , ಸೂರತ್‌ನ ಒಎನ್‌ಜಿಸಿ ಕೇಂದ್ರೀಯ ವಿದ್ಯಾಲಯದ ಅಭಿಜಿತ್‌ ಮಿಶ್ರಾ ಎರಡನೇ ಅತಿಹೆಚ್ಚು ಪರ್ಸೆಂಟೈಲ್‌ (99.95) ಪಡೆದ ವಿದ್ಯಾರ್ಥಿಯಾಗಿದ್ದಾರೆ. ಮುಂಬೈನ ಐಐಟಿ ಪೊವಾಯ್‌ ಕೇಂದ್ರೀಯ ವಿದ್ಯಾಲಯದ ಅದಿತ್‌ ಪ್ರಕಾಶ್‌ ಮೂರನೇ (99.93) ಸ್ಥಾನ ಪಡೆದಿದ್ದಾರೆ.

ಏ. 29ರಂದು ಜೆಇಇ ಮೇನ್ಸ್‌ ಫಲಿತಾಂಶ ಪ್ರಕಟವಾಗಿತ್ತು. ದೇಶಾದ್ಯಂತ ಒಟ್ಟು 1,204 ಕೇಂದ್ರೀಯ ವಿದ್ಯಾಲಯಗಳಿದ್ದು, ತೆಹ್ರಾನ್‌, ಕಾಠ್ಮಂಡು ಮತ್ತು ಮಾಸ್ಕೊ ರಾಯಭಾರ ಕಚೇರಿಯಲ್ಲಿ ಕೂಡ ಕೇಂದ್ರೀಯ ವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಸುಮಾರು 12.75 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌