ಆ್ಯಪ್ನಗರ

MBA, PGDM ಪ್ರವೇಶಾತಿಗೆ ಪದವಿ ಅಂಕಗಳೇ ಮಾನದಂಡ; ಎಐಸಿಟಿಇ

PGDM, MBA ಕೋರ್ಸ್‌ಗಳಿಗೆ ಪದವಿ ಪರೀಕ್ಷೆಯ ಅಂಕಗಳನ್ನು ಮಾನದಂಡವಾಗಿಟ್ಟುಕೊಂಡು ಪ್ರವೇಶ ನೀಡಲು...

Vijaya Karnataka 25 Aug 2020, 10:46 am
ಕೊರೊನಾ ಕಾರಣಕ್ಕೆ ಕೆಲವು ಪ್ರವೇಶ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದ ಕಾರಣ AICTE ಈ ಕ್ರಮ ಕೈಗೊಂಡಿದೆ. ಈ ರೀತಿಯ ಅವಕಾಶವು 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸಲಿದೆ. ಮುಂದಿನ ಅಕಾಡೆಮಿಕ್‌ ವರ್ಷಕ್ಕೆ ಇದು ಅನ್ವಯಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಜತೆಗೆ, ಪ್ರವೇಶ ಪರೀಕ್ಷೆ ಬರೆದು ಅರ್ಹತೆ ಪಡೆದ ಅಭ್ಯರ್ಥಿಗೆ ಮೊದಲ ಆಧ್ಯತೆ ನೀಡಬೇಕು, ಆಗ ಅಭ್ಯರ್ಥಿಗಳ ಪದವಿ ಅಂಕಗಳನ್ನು ಪರಿಗಣಿಸುವಂತಿಲ್ಲ. ಅಭ್ಯರ್ಥಿಗಳು ಪ್ರವೇಶಕ್ಕೆ ಅಗತ್ಯ ಕನಿಷ್ಠ ಅಂಕಗಳನ್ನು ಪದವಿ ಪರೀಕ್ಷೆಯಲ್ಲಿ ಗಳಿಸಿರಬೇಕು ಎಂದು ಮಂಡಳಿ ಸೂಚಿಸಿದೆ.
Vijaya Karnataka Web MBA, PGDM ಪ್ರವೇಶಾತಿಗೆ ಪದವಿ ಅಂಕಗಳೇ ಮಾನದಂಡ; ಎಐಸಿಟಿಇ
pgdm and mba admission 2020


CAT, CMAT, ATMA, MAT ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು ಮತ್ತು ಆಯಾ ರಾಜ್ಯಗಳು ನಡೆಸುವ ಎಂಟ್ರ್ಯಾನ್ಸ್‌ ಎಕ್ಸಾಮ್‌ಗಳ ಮೂಲಕ ಎಂಬಿಎ ಅಥವಾ ಪೋಸ್ಟ್‌ ಗ್ರಾಜುಯೇಟ್‌ ಡಿಪ್ಲೊಮ ಇನ್‌ ಮ್ಯಾನೇಜ್ಮೆಂಟ್ (PGDM) ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಹಲವು ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿಲ್ಲ. ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಅಥವಾ ರದ್ದುಗೊಳಿಸುವ ಬಗ್ಗೆಯೂ ಮಾಹಿತಿ ನೀಡಿಲ್ಲ ಎಂದು ಎಐಸಿಟಿಇ ಸದಸ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ರವರು ತಿಳಿಸಿದ್ದಾರೆ.

ನೀಟ್‌ ಆಕಾಂಕ್ಷಿಗಳಿಗೆ ವಿಮಾನ ಸೇವೆ

'ಸದ್ಯದ ಸನ್ನಿವೇಶವನ್ನು ಅವಲೋಕಿಸಿ ಸದರಿ ಪರ್ಯಾಯ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಈ ನಿರ್ಧಾರ ಅನುಕೂಲವಾಗಲಿದೆ. ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರ ಮೇಲೆ ಪಾರದರ್ಶಕವಾಗಿ ಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬಹುದು' ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

CSIR NET 2020 ಪರೀಕ್ಷೆ ಆನ್‌ಲೈನ್‌ ಅರ್ಜಿಗೆ ಮತ್ತೊಮ್ಮೆ ಅವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌