ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಶಿಕ್ಷಕರಿಗೂ ವರ್ಕ್‌ ಫ್ರಮ್‌ ಹೋಮ್ ಆದೇಶ!

ಕೊರೊನಾ ಮಹಾಮಾರಿ ದೆಸೆಯಿಂದ ಇಡೀ ದೇಶವೇ ಅಘೋಷಿತ್ ಬಂದ್‌ ಆಚರಿಸುತ್ತಿದೆ. ಇದೀಗ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಶಿಕ್ಷಕರಿಗೆ ವರ್ಕ್‌ ಫ್ರಮ್‌ ಹೋಮ್ (ಮನೆಯಿಂದ ಕೆಲಸ) ಮಾಡುವಂತೆ ಆದೇಶ ನೀಡಿದೆ.

Vijaya Karnataka Web 22 Mar 2020, 5:24 pm
ಬೆಂಗಳೂರು: ಕೊರೊನಾ ಮಹಾಮಾರಿ ದೆಸೆಯಿಂದ ಇಡೀ ದೇಶವೇ ಅಘೋಷಿತ್ ಬಂದ್‌ ಆಚರಿಸುತ್ತಿದೆ. ಐಟಿ-ಬಿಟಿ ಕಂಪನಿಗಳು ತಮ್ಮ ನೌಕರರಿಗೆ ವರ್ಕ್‌ ಫ್ರಮ್‌ ಹೋಮ್‌ ಆದೇಶಿಸಿವೆ. ಇದೀಗ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಶಿಕ್ಷಕರಿಗೆ ವರ್ಕ್‌ ಫ್ರಮ್‌ ಹೋಮ್ (ಮನೆಯಿಂದ ಕೆಲಸ) ಮಾಡುವಂತೆ ಆದೇಶ ನೀಡಿದೆ.
Vijaya Karnataka Web coronavirus white gown


ಈಗಾಗಲೇ ರಾಜ್ಯದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಜೊತೆಗೆ ಇಂದು ಎಸ್ ಎಸ್ಎಲ್‌ಸಿ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಸರಕಾರಿ/ಅನುದಾನಿತ/ ಅನುದಾನ ರಹಿತ ಶಾಲೆಗಳ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಮಾರ್ಚ್ 31ರ ವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದೆ.

ಶಿಕ್ಷಕರು ಅಥವಾ ಬೋಧಕ ಸಿಬ್ಬಂದಿಗಳು ಈ ಅವಧಿಯಲ್ಲಿ ಆನ್‌ಲೈನ್‌ನಲ್ಲೇ ಬೋಧನೆ ಮಾಡುವಂತೆ ಹಾಗೂ ಆನ್‌ಲೈನ್ನಲ್ಲಿಯೇ ಮೌಲ್ಯಮಾಪನ ಮಾಡುವಂತೆ ತಿಳಿಸಲಾಗಿದೆ. ಇದಲ್ಲದೆ, ಲೇಖನಗಳನ್ನು ಬರೆಯುವುದು, ಮಾದರಿ ಪ್ರಶ್ನೆಗಳನ್ನು ಸಿದ್ದಪಡಿಸುವುದು, ಮೊದಲಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಸುಚಿಸಲಾಗಿದೆ.

ಕೊರೊನಾ: ಗುಜರಾತ್‌ನಲ್ಲಿ ಮೊದಲ ಬಲಿ, ದೇಶದಲ್ಲಿ 7ಕ್ಕೇರಿದ ಸಾವಿನ ಸಂಖ್ಯೆ!

ಈ ಅವಧಿಯನ್ನು ರಜಾ ಅವಧಿಯೆಂದು ಪರಿಗಣಿಸಲಾಗಿಲ್ಲ. ಇದನ್ನು ಕರ್ತವ್ಯದ ಅವಧಿ ಎಂದೇ ಪರಿಗಣಿಸುವುದಾಗಿಯೂ ಆದೇಶದಲ್ಲಿ ಹೇಳಲಾಗಿದೆ. ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಹಾಗೂ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ತಿಳಿಸಲಾಗಿದೆ.

ಕೊರೊನಾ ಪರೀಕ್ಷೆಗೆ ₹4,500 ಶುಲ್ಕ: ಖಾಸಗಿ ಲ್ಯಾಬ್‌ಗಳಿಗೆ ಕೇಂದ್ರದ ಖಡಕ್‌ ಮಾರ್ಗಸೂಚಿ!

ಅಂದಹಾಗೇ ಈ ರಜಾ ಅವಧಿಯಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ. ಸರ್ಕಾರಕ್ಕೆ ಶಿಕ್ಷಕರ, ಬೋಧಕೇತರ ಸಿಬ್ಬಂದಿಯವರ ಸೇವೆ ಅಗತ್ಯವಿದ್ದಾಗ ಕಡ್ಡಾಯವಾಗಿ ಸೇವೆಗೆ ಹಾಜರಾಗತಕ್ಕದ್ದು ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌