ಆ್ಯಪ್ನಗರ

ಸಿಬಿಎಸ್‌ಇ ಇಂದ CSS ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ

ಸೆಂಟ್ರಲ್ ಸೆಕ್ಟಾರ್ ಸ್ಕೀಮ್‌ ವಿದ್ಯಾರ್ಥಿವೇತನಗಳಿಗೆ ಕಾಲೇಜು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಸ ಅರ್ಜಿಗಳು ಮತ್ತು ರಿನೀವಲ್‌ ಅಪ್ಲಿಕೇಶನ್‌ಗಳನ್ನು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಸಲ್ಲಿಸಬಹುದು.

Vijaya Karnataka Web 16 Oct 2020, 1:13 pm
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಸೆಂಟ್ರಲ್ ಸೆಕ್ಟಾರ್ ಸ್ಕೀಮ್‌ ವಿದ್ಯಾರ್ಥಿವೇತನಗಳಿಗೆ ಕಾಲೇಜು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಸ ಅರ್ಜಿಗಳು ಮತ್ತು ರಿನೀವಲ್‌ ಅಪ್ಲಿಕೇಶನ್‌ಗಳನ್ನು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಸಲ್ಲಿಸಬಹುದು.
Vijaya Karnataka Web ಸಿಬಿಎಸ್‌ಇ ಇಂದ CSS ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ
css scholarship 2020


ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗದ ನೋಟಿಸ್ ಪ್ರಕಾರ ಸಿಎಸ್‌ಎಸ್‌ ಸ್ಕಾಲರ್‌ಶಿಪ್‌ 2020 ಗೆ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ 31-10-2020.

ಮೊದಲನೇ ರಿನೀವಲ್ 2019 ಸಾಲಿನಲ್ಲಿ ಅಪ್ಲಿಕೇಶನ್‌ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ, ಎರಡನೇ ರಿನೀವಲ್ 2018ನೇ ಸಾಲಿನ ವಿದ್ಯಾರ್ಥಿಗಳಿಗೆ, ಮೂರನೇ ರಿನೀವಲ್ 2017 ಸಾಲಿನ ವಿದ್ಯಾರ್ಥಿಗಳಿಗೆ, ನಾಲ್ಕನೇ ರಿನೀವಲ್ 2016ನೇ ಸಾಲಿನ ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಅಧಿಕೃತ ಲಿಂಕ್‌ ಅನ್ನು ನ್ಯಾಷನಲ್ ಸ್ಕಾಲರ್‌ಶಿಪ್‌ ಪೋರ್ಟಲ್‌ನಲ್ಲಿ ನೀಡಲಾಗಿದೆ.

ಶಿಕ್ಷಣಕ್ಕೆ 'STARS' ಎಂಬ ಹೊಸ ಯೋಜನೆ: ಏನಿದು?

ವಿದ್ಯಾರ್ಥಿಗಳು ಸೆಂಟ್ರಲ್ ಸೆಕ್ಟಾರ್ ಸ್ಕೀಮ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ.

CSS Scholarship 2020 Direct Link

ವಿದ್ಯಾರ್ಥಿಗಳು ಸಿಎಸ್‌ಎಸ್‌ ಸ್ಕಾಲರ್‌ಶಿಪ್‌ಗೆ ಅಪ್ಲಿಕೇಶನ್‌ ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಅಪ್ಲಿಕೇಶನ್‌ಗಳನ್ನು ಆಯಾ ಶಿಕ್ಷಣ ಸಂಸ್ಥೆಗಳು ವೆರಿಫಿಕೇಶನ್‌ ಮಾಡಲಿದ್ದು, ನವೆಂಬರ್ 15 ಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.

ಅರ್ಹತೆಗಳು

ಸಿಎಸ್‌ಎಸ್‌ ಸ್ಕಾಲರ್‌ಶಿಪ್‌ಗೆ ಫ್ರೆಶ್‌ ಅಪ್ಲಿಕೇಶನ್‌ ಸಲ್ಲಿಸಲು ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಶೇಕಡ.80 ಅಂಕಗಳನ್ನು ಗಳಿಸರಬೇಕು, ಹಾಗೂ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿವೇತನ ಎಷ್ಟು ಸಿಗಲಿದೆ?

ಸಿಎಸ್‌ಎಸ್‌ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.10,000 ವಿದ್ಯಾರ್ಥಿವೇತನ ಪದವಿ ಹಂತದಲ್ಲಿ ಸಿಗಲಿದೆ. ಪೋಸ್ಟ್‌ ಗ್ರಾಜುಯೇಟ್‌ ಹಂತದಲ್ಲಿ ರೂ.20,000 ವಾರ್ಷಿಕ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

- ಎಸ್ಎಸ್‌ಎಲ್‌ಸಿ ಅಂಕಪಟ್ಟಿ

- ಇತರೆ ಶೈಕ್ಷಣಿಕ ದಾಖಲೆಗಳು

- ಪ್ರಸಕ್ತ ವರ್ಷದ ಪ್ರವೇಶಾತಿ ಶುಲ್ಕ ರಶೀದಿ.

- ಜಾತಿ ಮತ್ತು ಆದಾಯ ಪ್ರಮಾಣ ಪತ್ರ,.

- ಇತರೆ ಅಗತ್ಯ ದಾಖಲೆಗಳು.

ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌