ಆ್ಯಪ್ನಗರ

DCET-2020 ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ: ಆನ್‌ಲೈನ್‌ ಅರ್ಜಿ ಆರಂಭ

2020ನೇ ಸಾಲಿನ 2ನೇ ವರ್ಷದ ಮೂರನೇ ಸೆಮಿಸ್ಟರ್‌ ಲ್ಯಾಟರಲ್‌ ಎಂಜಿನಿಯರಿಂಗ್‌ ಪ್ರವೇಶಾತಿಗಾಗಿ ಅಕ್ಟೋಬರ್‌ 7ರಂದು 'ಡಿಸಿಇಟಿ-2020' ಪರೀಕ್ಷೆ ನಡೆಯಲಿದೆ.

Vijaya Karnataka Web 14 Aug 2020, 9:07 am

2020ನೇ ಸಾಲಿನ 2ನೇ ವರ್ಷದ ಮೂರನೇ ಸೆಮಿಸ್ಟರ್‌ ಲ್ಯಾಟರಲ್‌ ಎಂಜಿನಿಯರಿಂಗ್‌ ಪ್ರವೇಶಾತಿಗಾಗಿ ಅಕ್ಟೋಬರ್‌ 7ರಂದು 'ಡಿಸಿಇಟಿ-2020' ಪರೀಕ್ಷೆ ನಡೆಯಲಿದೆ.
Vijaya Karnataka Web dcet 2020 exam date
dcet 2020 revised exam date


ಕೋವಿಡ್‌-19 ಹಿನ್ನೆಲೆಯಲ್ಲಿ ಆ.9ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಡಿಸಿಇಟಿ-2020 ಪರೀಕ್ಷೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಇದುವರೆಗೆ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಆಗಸ್ಟ್‌.14ರಿಂದ 20ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಆಗಸ್ಟ್‌ 21ರ ಒಳಗೆ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬೇಕು. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿರಿ.
ಕಾಮೆಡ್‌ಕೆ ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕೃತಗೊಳಿಸಿದ ಕರ್ನಾಟಕ ಹೈಕೋರ್ಟ್‌

ಪ್ರಮುಖ ದಿನಾಂಕಗಳು

ಡಿಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 14-08-2020

ಡಿಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20-08-2020

ಡಿಸಿಇಟಿ ಪರೀಕ್ಷೆಗೆ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 21-08-2020

ಡಿಸಿಇಟಿ ಪರೀಕ್ಷೆ ನಡೆಸುವ ದಿನಾಂಕ : 07-10-2020
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌