ಆ್ಯಪ್ನಗರ

ಸಿಎಸ್‌ಐಆರ್‌-ಯುಜಿಸಿ ನೆಟ್‌ ಫಲಿತಾಂಶ ಪ್ರಕಟ

2018ರ ಡಿಸೆಂಬರ್‌ನಲ್ಲಿ ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅಭ್ಯರ್ಥಿಗಳ ರೋಲ್‌ ನಂಬರ್‌ ಮತ್ತು ಪಡೆದಿರುವ ರ‍್ಯಾಂಕ್ ವಿವರಗಳನ್ನು ಪಟ್ಟಿಯಲ್ಲಿ ನೀಡಲಾಗಿದೆ.

Vijaya Karnataka Web 5 Apr 2019, 12:26 pm
ಹೊಸದಿಲ್ಲಿ: ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಮತ್ತು ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಜಂಟಿಯಾಗಿ ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಮತ್ತು ಲೆಕ್ಚರ್‌ಶಿಪ್‌ಗಾಗಿ 2018ರ ಡಿಸೆಂಬರ್‌ನಲ್ಲಿ ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
Vijaya Karnataka Web result


ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ 7,525 ಅಭ್ಯರ್ಥಿಗಳ ಪೈಕಿ 1969 ಅಭ್ಯರ್ಥಿಗಳು ಜೆಆರ್‌ಎಫ್‌(ನೆಟ್‌) ಸಿಎಸ್‌ಐಆರ್‌ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 67 ಅಭ್ಯರ್ಥಿಗಳು ಜೆಆರ್‌ಎಫ್‌ಗೆ (ಸಿಎಸ್‌ಐಆರ್‌) ಮಾತ್ರ ಆಯ್ಕೆಯಾಗಿದ್ದಾರೆ. ಇನ್ನು 1500 ಅಭ್ಯರ್ಥಿಗಳು ಜೆಆರ್‌ಎಫ್‌ (ನೆಟ್‌) ಯುಜಿಸಿಗೆ ಆಯ್ಕೆಯಾದರೆ, 3,989 ಅಭ್ಯರ್ಥಿಗಳು ಲೆಕ್ಚರ್‌ಶಿಪ್‌ಗೆ(ನೆಟ್‌) ಆಯ್ಕೆಯಾಗಿದ್ದಾರೆ. 2019ರ ಜುಲೈ 1 ರಿಂದ ಫೆಲೋಶಿಪ್‌ ಅನ್ವಯವಾಗಲಿದೆ.

2018ರ ಡಿಸೆಂಬರ್‌ 16 ರಂದು ಪರೀಕ್ಷೆ ನಡೆದಿತ್ತು. ಕಳೆದ ಜನವರಿ 16 ರಂದು ಕೀ ಉತ್ತರಗಳನ್ನು ಪ್ರಕಟಿಸಿರುವ ಸಿಎಸ್‌ಐಆರ್‌ ಆಕ್ಷೇಪಣೆ ಸಲ್ಲಿಸಲು ಒಂದು ವಾರದ ಗಡುವು ನೀಡಿತ್ತು. ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳ ರೋಲ್‌ ನಂಬರ್‌ ಮತ್ತು ಪಡೆದಿರುವ ರ‍್ಯಾಂಕ್ ವಿವರಗಳನ್ನು ಪಟ್ಟಿಯಲ್ಲಿ ನೀಡಲಾಗಿದೆ. ಫಲಿತಾಂಶ ನೋಡಲು ವೆಬ್‌: csirhrdg.res.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌