ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿಯೊಂದನ್ನು ನೀಡಿದ್ದು, ಆಘಾತಕಾರಿ ಅಂಶವೊಂದು ವರದಿಯಲ್ಲಿ ಇದೆ. ರಾಜ್ಯದಲ್ಲಿ ಸಾವಿರಾರು ಶಾಲೆಗಳನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಸುಮಾರು 1,316 ಅನಧಿಕೃತ ಶಾಲೆಗಳಿವೆ ಎಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. 63 ಶಾಲೆಗಳು ನೋಂದಣಿ, ಅನುಮತಿ ಪಡೆಯದೇ ನಡೆಯುತ್ತಿವೆ. 74 ಶಾಲೆಗಳು ನೋಂದಣಿ ಇಲ್ಲದೆ, ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿವೆ ಎಂದು ತಿಳಿಸಿದೆ.
95 ಶಾಲೆಗಳು ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಬೇರೆ ಪಠ್ಯಕ್ರಮದಲ್ಲಿ ನಡೆಯುತ್ತಿವೆ. 294 ಶಾಲೆಗಳು ಅನಧಿಕೃತ ಮಾಧ್ಯಮಗಳಲ್ಲಿ ನಡೆಯುತ್ತಿವೆ. 620 ಶಾಲೆಗಳು ಅನಧಿಕೃತ ವಿಭಾಗಗಳನ್ನು ಹೊಂದಿವೆ. 141 ಶಾಲೆಗಳು ಅನುಮತಿ ಇಲ್ಲದೆಯೇ ಸ್ಥಳಾಂತರ ಮಾಡಿವೆ. 8 ಶಾಲೆಗಳು ಅನುಮತಿ ಇಲ್ಲದೆಯೇ ಹಸ್ತಾಂತರಿಸಿದೆ ಎಂದು ವರದಿಯಲ್ಲಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ..ವಿದ್ಯಾರ್ಥಿಗಳಿಗೆ ಸಿಗಲಿದೆ 20 ರಿಂದ 35 ಸಾವಿರ ಪ್ರೈಜ್ ಮನಿ
ಅನಧಿಕೃತ ಶಾಲೆಗಳಲ್ಲಿ ಬೆಂಗಳೂರಿನಲ್ಲಿಯೇ ಇವೆ. ಬೆಂಗಳೂರು ಉತ್ತರದಲ್ಲಿ 485 ಅನಧಿಕೃತ ಶಾಲೆಗಳು ಮತ್ತು ಬೆಂಗಳೂರು ದಕ್ಷಿಣದಲ್ಲಿ 386 ಅನಧಿಕೃತ ಶಾಲೆಗಳಿವೆ. ರಾಜ್ಯದ ಒಟ್ಟು ಅನಧಿಕೃತ ಶಾಲೆಗಳಲ್ಲಿ ಶೇಕಡ 66 ರಷ್ಟು ಬೆಂಗಳೂರಿನಲ್ಲೇ ಇದೆ.
ಉಳಿದಂತೆ ತುಮಕೂರು 109, ಬೆಂಗಳೂರು ಗ್ರಾಮಾಂತರದಲ್ಲಿ 66, ಚಿಕ್ಕಬಳ್ಳಾಪುರ 59, ಬೀದರ್ 50, ಕೋಲಾರ 32, ಚಿಕ್ಕಮಗಳೂರು 21, ಕಲಬುರಗಿ 17, ಧಾರವಾಡ 14 ಮತ್ತು ಮಂಡ್ಯ ಜಿಲ್ಲೆಯಲ್ಲಿ 10 ಅನಧಿಕೃತ ಶಾಲೆಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.
INSPIRE Scholarship 2023 : ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ರೂ. 80 ಸಾವಿರ ಸ್ಕಾಲರ್ಶಿಪ್.. ಅರ್ಜಿ ಸಲ್ಲಿಕೆ ಹೇಗೆ?
ಉಳಿದಂತೆ ಉಡುಪಿ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ತಲಾ ಒಂದು ಅನಧಿಕೃತ ಶಾಲೆಗಳು ಪತ್ತೆಯಾಗಿವೆ. ಹಾಸನ ಜಿಲ್ಲೆಯಲ್ಲಿ ಎರಡು, ರಾಯಚೂರು ಜಿಲ್ಲೆಯಲ್ಲಿ ನಾಲ್ಕು, ಚಾಮರಾಜನಗರ ಜಿಲ್ಲೆಯಲ್ಲಿ ಐದು ಮತ್ತು ಮೈಸೂರು ಜಿಲ್ಲೆಯಲ್ಲಿ ಏಳು ಅನಧಿಕೃತ ಶಾಲೆಗಳಿವೆ ಎಂದು ಹೇಳಲಾಗಿದೆ.
ಇನ್ನು ದಕ್ಷಿಣ ಕನ್ನಡ, ಗದಗ, ಶಿರಸಿ, ವಿಜಯಪುರ, ಬಾಗಲಕೋಟೆ, ಚಿಕ್ಕೊಡಿ, ಬೆಳಗಾವಿ, ಕೊಡಗು, ಕೊಪ್ಪಳ, ಯಾದಗಿರಿ, ವಿಜಯನಗರ, ರಾಮನಗರ, ದಾವಣಗೆರೆ, ಶಿವಮೊಗ್ಗ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಅನಧಿಕೃತ ಶಾಲೆಗಳು ಕಂಡು ಬಂದಿಲ್ಲ.
ಫೆಬ್ರವರಿನಲ್ಲಿ ಈ 3 ಸ್ಕಾಲರ್ಶಿಪ್ಗಳಿಗೆ ಅರ್ಜಿ ಹಾಕಿ.. ಪಡೆಯಿರಿ ರೂ. 20 ಸಾವಿರದಿಂದ 2 ಲಕ್ಷದವರೆಗೆ ವಿದ್ಯಾರ್ಥಿವೇತನ