ಆ್ಯಪ್ನಗರ

ಜೂನ್ 30 ರಿಂದ ಜುಲೈ 6 ರವರೆಗೆ ದಿಲ್ಲಿ ವಿವಿ ಪ್ರವೇಶ ಪರೀಕ್ಷೆ: ಬೆಂಗಳೂರು ಸೇರಿ ದೇಶಾದ್ಯಂತ ಪರೀಕ್ಷಾ ಕೇಂದ್ರ

ಜೂನ್ 30 ರಿಂದ ಜುಲೈ 6 ರವರೆಗೆ ಪರೀಕ್ಷೆ ನಡೆಯಲಿದ್ದು, ಪ್ರತಿ ದಿನ ಮೂರು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಸಹ ಮಾಹಿತಿ ನೀಡಲಾಗಗಿದೆ.

TIMESOFINDIA.COM 7 Jun 2019, 4:52 pm
ಹೊಸದಿಲ್ಲಿ: ಜೂನ್ 30 ರಿಂದ ಜುಲೈ 6 ರವರೆಗೆ ಬೆಂಗಳೂರು ಸೇರಿ ದೇಶಾದ್ಯಂತ ದಿಲ್ಲಿ ವಿಶ್ವವಿದ್ಯಾನಿಲಯದ 9 ಪದವಿ ಕೋರ್ಸ್‌ಗಳು, ಸ್ನಾತಕೋತ್ತರ, ಎಂ.ಫಿಲ್, ಪಿಎಚ್‌ಡಿ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ (ಎನ್‌ಟಿಎ) ದಿಲ್ಲಿ ವಿವಿಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ.
Vijaya Karnataka Web exam writing


11 ಪದವಿ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಯುತ್ತಿದ್ದರೂ ಸಂಗೀತ ಹಾಗೂ ದೈಹಿಕ ಶಿಕ್ಷಣದ ಪರೀಕ್ಷೆಗಳು ವಿವಿಯಲ್ಲಿ ಆಂತರಿಕವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ 12 ನೇ ತರಗತಿ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕಗಳು ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕಗಳನ್ನು ಆಧರಿಸಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ನಡೆಯಲಿದೆ.

ಅಹಮದಾಬಾದ್, ಬೆಂಗಳೂರು, ಭೋಪಾಲ್‌, ಭುವನೇಶ್ವರ, ಚಂಡೀಗಢ, ಚೆನ್ನೈ, ದಿಲ್ಲಿ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕೋಲ್ಕತ, ಮುಂಬಯಿ, ನಾಗ್ಪುರ, ಪಟನಾ, ರಾಂಚಿ, ತಿರುವನಂತಪುರ ಹಾಗೂ ವಾರಾಣಸಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಜೂನ್ 30 ರಿಂದ ಜುಲೈ 6 ರವರೆಗೆ ಪರೀಕ್ಷೆ ನಡೆಯಲಿದ್ದು, ಪ್ರತಿ ದಿನ ಮೂರು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಸಹ ಮಾಹಿತಿ ನೀಡಲಾಗಗಿದೆ.

ಎರಡು ಗಂಟೆಗಳ ಕಾಲ ಪ್ರವೇಶ ಪರೀಕ್ಷೆ ನಡೆಯಲಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರತಿ ಪರೀಕ್ಷೆಯಲ್ಲೂ 100 ಪ್ರಶ್ನೆಗಳು ಇರಲಿದ್ದು, ಸರಿ ಉತ್ತರಕ್ಕೆ 4 ಅಂಕಗಳು, ತಪ್ಪು ಉತ್ತರಕ್ಕೆ ಮೈನಸ್ 1 ಅಂಕ ನೀಡಲಾಗುವುದು ಹಾಗೂ ಉತ್ತರಿಸದ ಪ್ರಶ್ನೆಗಳಿಗೆ ಸೊನ್ನೆ ಅಂಕಗಳನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.

ಇನ್ನು, ಪರೀಕ್ಷೆ ನಡೆದ 24 ರಿಂದ 48 ಗಂಟೆಗಳೊಳಗೆ ಪ್ರಶ್ನೆ ಪತ್ರಿಕೆಗಳ ಉತ್ತರಗಳನ್ನು ಅಪ್ಲೋಡ್‌ ಮಾಡಲಾಗುವುದು. ಬಳಿಕ ಅಭ್ಯರ್ಥಿಗಳ ಬಳಿ ಆಕ್ಷೇಪ ಸಲ್ಲಿಕೆಗೂ ಅವಕಾಶವಿದೆ ಎಂದು ದಿಲ್ಲಿ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌