Please enable javascript.Devanahaali Gttc Centre Cost 47 Crore,ದೇವನಹಳ್ಳಿಯಲ್ಲಿ 47 ಕೋಟಿ ರೂ. ವೆಚ್ಚದ ಜಿಟಿಟಿಸಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ - higher education minister dr ashwathanarayana grants rs 47 crore to gttc center in devanahalli - Vijay Karnataka

ದೇವನಹಳ್ಳಿಯಲ್ಲಿ 47 ಕೋಟಿ ರೂ. ವೆಚ್ಚದ ಜಿಟಿಟಿಸಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ

Vijaya Karnataka Web 1 Mar 2022, 8:13 am
Subscribe

ದೇವನಹಳ್ಳಿಯಲ್ಲಿ 47.61 ಕೋಟಿ ರೂ. ಅಂದಾಜು ವೆಚ್ಚದ ಸರಕಾರಿ ತರಬೇತಿ ಮತ್ತು ಉಪಕರಣಾಗಾರ ಸಂಸ್ಥೆಗೆ (ಜಿಟಿಟಿಸಿ) ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.

ಹೈಲೈಟ್ಸ್‌:

  • 47 ಕೋಟಿ ರೂ. ವೆಚ್ಚದ ಜಿಟಿಟಿಸಿ ಕೇಂದ್ರಕ್ಕೆ ಶಂಕುಸ್ಥಾಪನೆ.
  • ದೇವನಹಳ್ಳಿಯಲ್ಲಿ ಈ ಜಿಟಿಟಿಸಿ ಕಾಲೇಜು.
  • ಸರಕಾರಿ ಪದವಿ ಕಾಲೇಜಿನ ಹೆಚ್ಚುವರಿ ಕೊಠಡಿಗಳು, ಪ್ರಯೋಗಾಲಯಗಳ ಲೋಕಾರ್ಪಣೆ ಮಾಡಿದ ಉನ್ನತ ಶಿಕ್ಷಣ ಸಚಿವ.
Devanahaali Gttc Centre Cost 47 Crore
Devanahaali Gttc Centre Cost 47 Crore
ದೇವನಹಳ್ಳಿ: ಸ್ಥಳೀಯ ಯುವಜನರನ್ನು ಆಧುನಿಕ ಉದ್ಯೋಗಗಳಿಗೆ ಸಜ್ಜುಗೊಳಿಸಿ ಅವರನ್ನು ಅರ್ಹರನ್ನಾಗಿ ಮಾಡಲಿರುವ 47.61 ಕೋಟಿ ರೂ. ಅಂದಾಜು ವೆಚ್ಚದ ಸರಕಾರಿ ತರಬೇತಿ ಮತ್ತು ಉಪಕರಣಾಗಾರ ಸಂಸ್ಥೆಗೆ (ಜಿಟಿಟಿಸಿ) ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ವಿದ್ಯಾರ್ಥಿನಿಯರ ಹೆಚ್ಚುವರಿ ವಿಶ್ರಾಂತಿ ಕೊಠಡಿಗಳನ್ನೂ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕಾಗಿ ಸಾವಿರಾರು ಎಕರೆಯನ್ನು ಕಳೆದುಕೊಂಡ ರೈತರು ಮಕ್ಕಳಿಗೆ ಸೂಕ್ತ ಉದ್ಯೋಗ ಸೃಷ್ಟಿಸುವಂತಹ ವ್ಯವಸ್ಥೆ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ. ಏಕೆಂದರೆ, ದೇವನಹಳ್ಳಿಯ ಸುತ್ತಮುತ್ತ ಡೇಟಾ ಅನಾಲಿಟಿಕ್ಸ್, ಡೇಟಾ ಸೆಂಟರ್ ಸೇರಿದಂತೆ ಅತ್ಯಾಧುನಿಕ ಉದ್ದಿಮೆಗಳು ತಲೆ ಎತ್ತುತ್ತಿವೆ. ತಾಲ್ಲೂಕಿನ ಯುವಜನರು ಈ ಉದ್ಯೋಗಗಳನ್ನು ಪ್ರವೇಶಿಸಬೇಕೆಂಬ ಸದಿಚ್ಛೆಯಿಂದ ಜಿಟಿಟಿಸಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಎಸ್ಸೆಸ್ಸೆಲ್ಸಿ, ಡಿಪ್ಲೊಮ, ಐಟಿಐ ಮತ್ತು ಎಂಜಿನಿಯರಿಗ್ ವಿದ್ಯಾರ್ಥಿಗಳಿಗೆ ಉನ್ನತ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.

JEE Advanced 2022 Dates: ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕುಗಳು ಬೆಂಗಳೂರಿಗಿಂತಲೂ ಹೆಚ್ಚು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿವೆ. ಗ್ರಾಮೀಣ ಪ್ರದೇಶಗಳ ಪ್ರತಿಯೊಬ್ಬರಿಗೂ ಒಳ್ಳೆಯ ಉದ್ಯೋಗ ಸಿಕ್ಕಬೇಕೆಂಬ ಗುರಿಯಿಂದ ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಯನ್ನು ಕೂಡ 35 ಕೋಟಿ ರೂ.ವೆಚ್ಚದಲ್ಲಿ ಟಾಟಾ ಸಮೂಹದ ನೆರವಿನೊಂದಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಸರಕಾರಿ ಸಂಸ್ಥೆಗಳಲ್ಲಿ ಇಂದು ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ ಎಂದು ಅವರು ನುಡಿದರು.

ಈ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ನಾಲ್ಕು ವರ್ಷ ಅವಧಿಯ ಎರಡು ದೀರ್ಘಾವಧಿ ಕೋರ್ಸುಗಳು ಮತ್ತು 35ಕ್ಕೂ ಹೆಚ್ಚು ಅಲ್ಪಾವಧಿ ಕೋರ್ಸುಗಳಿವೆ. ಈ ಮೂಲಕ ವರ್ಷಕ್ಕೆ ಒಂದು ಸಾವಿರ ವಿದ್ಯಾರ್ಥಿಗಳು ಉದ್ಯೋಗಕ್ಕೆ ಬೇಕಾದ ಅರ್ಹತೆ ಗಳಿಸಿಕೊಂಡು ಹೊರಬರುತ್ತಿದ್ದಾರೆ. ಇವರ ಪೈಕಿ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ವರ್ಗಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಪ್ರಾಥಮಿಕ, ಪ್ರೌಢಶಾಲೆಗಳಿಗೆ ಬೇಸಿಗೆ ರಜೆ ಕಡಿಮೆ ಮಾಡಿದ ಸರ್ಕಾರ: ಡೀಟೇಲ್ಸ್‌ ಇಲ್ಲಿದೆ..

ಯಾವುದೇ ಖಾಸಗಿ ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲೂ ಸಿಗದೆ ಇರುವಂತಹ ಶ್ರೇಷ್ಠ ಶಿಕ್ಷಣ ಇಂದು ಸರಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್ ಮತ್ತು ಐಟಿಐಗಳಲ್ಲಿ ಸಿಗುತ್ತಿದೆ. ಪದವಿ ಕಾಲೇಜುಗಳಲ್ಲಿ ಶಿಕ್ಷಣದ ಡಿಜಿಟಲೀಕರಣದ ಜತೆಗೆ ಕೌಶಲ್ಯಾಭಿವೃದ್ಧಿಗೆ ಒತ್ತು ಕೊಟ್ಟು, ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಈ ಸಂದರ್ಭದಲ್ಲಿ ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದುರಸ್ತಿ ಮತ್ತು ನವೀಕರಣಕ್ಕೆ ಈಗಾಗಲೇ 1 ಕೋಟಿ ರೂ. ಕೊಟ್ಟಿರುವ ಇಲ್ಲಿನ ಬೈಯಪ್ಪ ಶಿಕ್ಷಣ ಸಮೂಹ ಸಂಸ್ಥೆಗೆ ಸರಕಾರದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು. ಜತೆಗೆ, ಈ ಕಾಲೇಜಿಗೆ ಇನ್ನೂ 1 ಕೋಟಿ ರೂ. ಕೊಡುವುದಾಗಿ ವಾಗ್ದಾನ ಮಾಡಿರುವ ಸಂಸ್ಥೆಯ ಔದಾರ್ಯವನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಸಚಿವ ಎಂ.ಟಿ.ಬಿ.ನಾಗರಾಜ್, ಎಂಎಲ್ ಸಿ ಅ.ದೇವೇಗೌಡ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ