ಆ್ಯಪ್ನಗರ

ಭಾರತದ ಬಿ.ಟೆಕ್‌ ವಿದ್ಯಾರ್ಥಿನಿಗೆ ಯುಎಇಯಲ್ಲಿ ಸಿಕ್ತು 36 ಲಕ್ಷ ರೂ. ಭರ್ಜರಿ ಪ್ಯಾಕೇಜ್‌

ಇದೇ ವರ್ಷ ಬಿ.ಟೆಕ್‌ ಪದವಿ ಪೂರ್ಣಗೊಳಿಸಿರುವ ಶಫಾಖ್‌ ಅಹ್ಮರೀನ್‌ಗೆ ಇಂಟರ್‌ನೆಟ್‌ ಆಫ್ ಥಿಂಗ್ಸ್‌ (ಐಒಟಿ) ನಲ್ಲಿ ಜೂನಿಯರ್ ರೀಸರ್ಚರ್‌ ಹುದ್ದೆ ನೀಡಲಾಗುತ್ತದೆ. ಆಕೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವರ್ಷಕ್ಕೆ 1 ಲಕ್ಷ 92 ಸಾವಿರ ದಿರ್ಹಾಮ್ಸ್‌ ( 36 ಲಕ್ಷ ರೂ.) ಪ್ಯಾಕೇಜ್‌ ಘೋಷಿಸಿದೆ.

TIMESOFINDIA.COM 4 Jun 2019, 11:30 am
ಹೈದರಾಬಾದ್: ಬಿ.ಟೆಕ್ ವಿದ್ಯಾರ್ಥಿನಿಯೊಬ್ಬರಿಗೆ ವರ್ಷಕ್ಕೆ 36 ಲಕ್ಷ ರೂ.ನ ಭರ್ಜರಿ ಪ್ಯಾಕೇಜ್‌ ದೊರೆತಿದೆ. ಹೈದರಾಬಾದ್‌ ಮೂಲದ ಐಸಿಎಫ್‌ಎಐಟೆಕ್‌ನ ಶಫಾಖ್‌ ಅಹ್ಮರೀನ್‌ ಅನ್ನು ಯುಎಇ ಸರಕಾರದ ಶಿಕ್ಷಣ ಸಚಿವಾಲಯ ನೇಮಿಸಿಕೊಂಡಿದೆ.
Vijaya Karnataka Web job2

ಇದೇ ವರ್ಷ ಬಿ.ಟೆಕ್‌ ಪದವಿ ಪೂರ್ಣಗೊಳಿಸಿರುವ ಶಫಾಖ್‌ ಅಹ್ಮರೀನ್‌ಗೆ ಇಂಟರ್‌ನೆಟ್‌ ಆಫ್ ಥಿಂಗ್ಸ್‌ (ಐಒಟಿ) ನಲ್ಲಿ ಜೂನಿಯರ್ ರೀಸರ್ಚರ್‌ ಹುದ್ದೆ ನೀಡಲಾಗುತ್ತದೆ. ಆಕೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವರ್ಷಕ್ಕೆ 1 ಲಕ್ಷ 92 ಸಾವಿರ ದಿರ್ಹಾಮ್ಸ್‌ ( 36 ಲಕ್ಷ ರೂ.) ಪ್ಯಾಕೇಜ್‌ ಘೋಷಿಸಿದೆ.

ಅಲ್ಲದೆ, ಬಿ.ಟೆಕ್‌ 2019ರ ಬ್ಯಾಚ್‌ನ ಐಸಿಎಫ್‌ಎಐಟೆಕ್‌ ಹೈದರಾಬಾದಿನ ಪುರಾಣಂ ಕಾರ್ತಿಕ್‌ ಸಾಯಿ ರಾಧಾಕೃಷ್ಣ ಹಾಗೂ ಮಣಿ ಚಂದ್ರ ತೇಜ ಗದ್ದಂ ಎಂಬ ಇನ್ನಿಬ್ಬರು ವಿದ್ಯಾರ್ಥಿಗಳು ಬೆಂಗಳೂರಿನ ನ್ವೆಸ್ಟ್‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

ಇನ್ನು, ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ಯಾಕೇಜ್‌ ಪಡೆದುಕೊಂಡಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿ ಸಹ ಹರ್ಷ ವ್ಯಕ್ತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌