ಆ್ಯಪ್ನಗರ

ನಾಳೆ ಸಿಬಿಎಸ್‌ಇ 10ನೇ ತರಗತಿಯ ಸಮಾಜ ವಿಜ್ಞಾನ ಪರೀಕ್ಷೆ: ಹೆಚ್ಚು ಅಂಕ ಪಡೆಯಲು ಇಲ್ಲಿದೆ ಟಿಪ್ಸ್

ವಿದ್ಯಾರ್ಥಿಗಳು ಸಮಾಜ ವಿಜ್ಞಾನದ ಎಲ್ಲ 4 ವಿಷಯಗಳಿಗೂ ಸಮಾನವಾದ ಪ್ರಾಮುಖ್ಯತೆ ನೀಡಬೇಕು. ಇತಿಹಾಸ, ಸಿವಿಕ್ಸ್, ಭೂಗೋಳ ಮತ್ತು ಅರ್ಥಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

TIMESOFINDIA.COM 28 Mar 2019, 5:37 pm
ಹೊಸದಿಲ್ಲಿ: ಸಿಬಿಎಸ್‌ಇಯ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ನಾಳೆ ( ಮಾರ್ಚ್ 29,2019) ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಫೆಬ್ರವರಿ 21,2019ರಂದು 10ನೇ ತರಗತಿಯ ಪರೀಕ್ಷೆ ಆರಂಭವಾಗಿತ್ತು.
Vijaya Karnataka Web cbse exam preparation


ಈ ಬಗ್ಗೆ ವಿಜಯ ಕರ್ನಾಟಕ ಸೋದರ ಪತ್ರಿಕೆ ಎಜುಕೇಷನ್‌ ಟೈಮ್ಸ್ ಬಗ್ಗೆ ಮಾತನಾಡಿದ ಪಟನಾದ ಟಿಜಿಟಿ ಸಮಾಜ ವಿಜ್ಞಾನ ನೋಟರ್ ಡೇಮ್ ಅಕಾಡೆಮಿಯ ಅಮಲೇಶ್‌ ಕುಮಾರ್, ''ವಿದ್ಯಾರ್ಥಿಗಳು ಸಮಾಜ ವಿಜ್ಞಾನದ ಎಲ್ಲ 4 ವಿಷಯಗಳಿಗೂ ಸಮಾನವಾದ ಪ್ರಾಮುಖ್ಯತೆ ನೀಡಬೇಕು. ಇತಿಹಾಸ, ಸಿವಿಕ್ಸ್, ಭೂಗೋಳ ಮತ್ತು ಅರ್ಥಶಾಸ್ತ್ರಕ್ಕೆ ಪ್ರಾಮುಖ್ಯತೆ ನೀಡಬೇಕು'' ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಅಲ್ಲದೆ, ''ಆಯ್ಕೆ ಮಾಡಲಾದ ಇತಿಹಾಸದ ಎಲ್ಲ 4 ಅಧ್ಯಾಯಗಳ ಸಾರಾಂಶವನ್ನು ವಿದ್ಯಾರ್ಥಿಗಳು ಓದಬೇಕು. ಜತೆಗೆ, ಲೇ ಔಟ್‌ ಫ್ರೇಮ್‌ ಮಾಡಬೇಕು ಹಾಗೂ
ಅಧ್ಯಾಯಗಳ ಮೌಲ್ಯಯುತವಾದ ಅಂಶಗಳನ್ನು ನೆನಪಿಟ್ಟುಕೊಳ್ಳಿ'' ಎಂದು ಸಲಹೆ ನೀಡಿದ್ದಾರೆ.

ಜತೆಗೆ, ಬೋರ್ಡ್ ಎಕ್ಸಾಮ್ ಪರೀಕ್ಷೆಗಳು ಎನ್‌ಸಿಎಆರ್‌ಟಿ ಪಠ್ಯಕ್ರಮದ ಆಧಾರಿತವಾಗಿದೆ. ಈ ಹಿನ್ನೆಲೆ ಕೊನೆ ಗಳಿಗೆಯಲ್ಲಿ ಪರೀಕ್ಷೆಗೆ ತಯಾರಿ ಆಗುತ್ತಿರುವ ವೇಳೆ ಎನ್‌ಸಿಎಆರ್‌ಟಿ ಪಠ್ಯಪುಸ್ತಕಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು.

ಕೊನೆ ಗಳಿಗೆಯ ಅಧ್ಯಯನಕ್ಕೆ ತಜ್ಞರ ಸಲಹೆಗಳು
ಓದುವಾಗ ಮುಖ್ಯವಾದ ಅಂಶಗಳನ್ನು ಬರೆದಿಟ್ಟುಕೊಳ್ಳುವುದು ತ್ವರಿತವಾಗಿ ರಿವಿಷನ್‌ ಮಾಡಲು ಸಹಾಯವಾಗುತ್ತದೆ. ಬೋರ್ಡ್ ಎಕ್ಸಾಂಗಳಲ್ಲಿ ಪದೇ ಪದೇ ಬರುವ ಪ್ರಶ್ನೆಗಳ ಬಗ್ಗೆ ಹೆಚ್ಚು ಗಮನ ಕೊಟ್ಟು, ಅವುಗಳ ಬಗ್ಗೆ ತಯಾರಾಗಿ.

- ವಿದ್ಯಾರ್ಥಿಗಳು ಕನಿಷ್ಠ 1-2 ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳಿಗೆ, ಸಿಬಿಎಸ್‌ಇ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಹಾಗೂ ಅಣಕು ಪರೀಕ್ಷೆಗಳಿಗೆ ಉತ್ತರಿಸಬೇಕು. ಕೆಲವು ಪ್ರಶ್ನೆಗಳು ಪುನರಾವರ್ತನೆಯಾಗುವುದರಿಂದ ನಿಮಗೆ ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತದೆ.

- 4 - 5 ಭೂಪಟಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಆ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಿದೆ.

- ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಹೊಸ ಆವೃತ್ತಿಯ ಪುಸ್ತಕವನ್ನು ಅಧ್ಯಯನ ಮಾಡಿದರೆ ಸರಿಯಾದ ಅಂಕಿ ಸಂಖ್ಯೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು

- ಪರೀಕ್ಷೆ ಬಗ್ಗೆ ಭಯ ಬೇಡ. 4 ವಿಷಯಗಳ ರಿವಿಷನ್‌ಗೆ ಸಮಯವನ್ನು ವಿಂಗಡಿಸಿಕೊಳ್ಳಿ. ಒಂದೇ ಸಮಯದಲ್ಲಿ ಎಲ್ಲ ಪುಸ್ತಕಗಳನ್ನು ಓಪನ್‌ ಮಾಡಿಟ್ಟುಕೊಳ್ಳಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌