ಆ್ಯಪ್ನಗರ

UPSC, KPSC ಪರೀಕ್ಷಾ ಪೂರ್ವ ಉಚಿತ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ

UPSC, KPSC Pre-Coaching 2019-20 Cadidates list: ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷಾ ಪೂರ್ವ ಉಚಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಚೆಕ್‌ ಮಾಡಬಹುದು.

Vijaya Karnataka Web 14 Nov 2019, 4:11 pm

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು 2019-20 ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುವ ಉಚಿತ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಿದೆ. ಇಲಾಖೆಯು ನೀಡುವ ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು, ದಾಖಲಾತಿ ಪರಿಶೀಲನೆಗೆ ಹಾಜರಾಗಲು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web Candidates List  for Documents Verification of UPSC kpsc Pre-Coaching 2019-20
UPSC, KPSC Pre-Coaching 2019-20 Cadidates list


ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷಾ ಪೂರ್ವ ಉಚಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಚೆಕ್‌ ಮಾಡಬಹುದು.

List & Intimation to Candidates for Documents Verification of UPSC Pre-Coaching 2019-20

List & Intimation to Candidates for Documents Verification of KPSC Pre-Coaching 2019-20

2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆಯಡಿ, ಐಎಎಸ್ ಮತ್ತು ಕೆಎಎಸ್ ಪೂರ್ವ ಪರೀಕ್ಷೆ ತರಬೇತಿ ನೀಡಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ಕೆಳಗಿನ ಮೂಲ ದಾಖಲಾತಿಗಳನ್ನು ಪರಿಶೀಲಿಸಲಿದೆ. ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ದಿನಾಂಕ 18-11-2019 ರಂದು ಬೆಳಿಗ್ಗೆ 9 ಗಂಟೆಗೆ ಇಲಾಖೆ ನಿಗದಿಪಡಿಸಿರುವ ವಿಳಾಸಕ್ಕೆ ಹಾಜರಾಗಬೇಕಿದೆ.

ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದರು, ದಾಖಲೆ ಪರಿಶೀಲಿಸಿ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಅವಕಾಶ

ಮೂಲ ದಾಖಲೆಗಳ ಪರಿಶೀಲನೆ ಸ್ಥಳ: ಕೆಎಎಸ್ ಆಫೀಸರ್ ಅಸೋಸಿಯೇಶನ್ ಬಿಲ್ಡಿಂಗ್, ಪೊಲೀಸ್ ಕಮಿಷನರ್ ಅಫೀಸರ್ ಕಛೇರಿ ಪಕ್ಕ, ಇನ್ಫಾಂಟ್ರಿ ರೋಡ್, ಬೆಂಗಳೂರು-01

KPSC Result: 661 ಟೈಪಿಸ್ಟ್‌ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಒದಗಿಸಬೇಕಾದ ಮೂಲ ದಾಖಲೆಗಳು

- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

- ಪಾಸ್‌ಪೋರ್ಟ್‌ ಅಳತೆಯ ಎರಡು ಭಾವಚಿತ್ರಗಳು.

-ಪದವಿ ಹಂತದ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು

- ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿಗಳು.

- ಬ್ಯಾಂಕ್ ಖಾತೆ ಮಾಹಿತಿ ಕುರಿತ ಜೆರಾಕ್ಸ್‌ ಪ್ರತಿ.

- ಇನ್‌ಕಮ್‌ ಟ್ಯಾಕ್ಸ್ ರಿಟರ್ನ್‌ ಕಾಪಿ.

- ಆಧಾರ್ ಕಾರ್ಡ್‌ ಜೆರಾಕ್ಸ್ ಪ್ರತಿ

- ಸ್ಪರ್ಧಾತ್ಮಕ ತರಬೇತಿ ಅಥಾರಿಟಿ ನೀಡಿರುವ ಅಧಿಕೃತ ಫೋಟೋ ಐಡಿ.

- ಇತರೆ ದಾಖಲೆಗಳ ಒಂದು ಸೆಟ್‌ ಜೆರಾಕ್ಸ್‌ ಪತ್ರಿಗಳನ್ನು, ಗೆಜೆಟೆಡ್‌ ಆಫೀಸರ್ ಗಳಿಂದ ಅಟೆಸ್ಟ್‌ ಮಾಡಿಸಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌