ಆ್ಯಪ್ನಗರ

ಪಠ್ಯ ಕಡಿತ ನಿರ್ಧಾರದಿಂದ ಶಿಕ್ಷಣ ಇಲಾಖೆ ಯೂಟರ್ನ್‌

ಕೆಲವು ಪಾಠಗಳನ್ನು ಮಂಗಳವಾರ ಕೈಬಿಟ್ಟು ವಿವಾದಕ್ಕೆ ಗುರಿಯಾಗಿದ್ದ ಸರಕಾರ ಬುಧವಾರ ಯೂ ಟರ್ನ್‌ ಹೊಡೆದಿದೆ. 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿಷಯಗಳಲ್ಲಿ ಕೆಲವು ಪಾಠ ಕಡಿತಗೊಳಿಸಿದ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.

Vijaya Karnataka Web 1 Aug 2020, 9:31 am

ಕೆಲವು ಪಾಠಗಳನ್ನು ಮಂಗಳವಾರ ಕೈಬಿಟ್ಟು ವಿವಾದಕ್ಕೆ ಗುರಿಯಾಗಿದ್ದ ಸರಕಾರ ಬುಧವಾರ ಯೂ ಟರ್ನ್‌ ಹೊಡೆದಿದೆ. 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿಷಯಗಳಲ್ಲಿ ಕೆಲವು ಪಾಠ ಕಡಿತಗೊಳಿಸಿದ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.
Vijaya Karnataka Web karnataka education news
karnataka education news


''ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಸೂಚನೆಯಂತೆ ಪಠ್ಯಾಂಶಗಳ ಕಡಿತವನ್ನು ತಡೆ ಹಿಡಿಯಲಾಗಿದ್ದು, ಮರುಪರಿಶೀಲಿಸಿದ ನಂತರ ಕಡಿತಗೊಂಡ ಪಾಠಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಮತ್ತೆ ಪ್ರಕಟಿಸಲಾಗುವುದು,'' ಎಂದು ಇಲಾಖೆ ತಿಳಿಸಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ವಿಳಂಬವಾಗಿದೆ. ಶಾಲೆಗಳನ್ನು ಯಾವಾಗ ತೆರೆಯಬೇಕೆಂಬ ವಿಚಾರ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ 1ರಿಂದ 10ನೇ ತರಗತಿವರೆಗಿನ ಎಲ್ಲಾವಿಷಯಗಳ ಪಾಠಗಳನ್ನು 220 ದಿನಗಳ ಬದಲಿಗೆ ಕೇವಲ 120 ಶಾಲಾ ಕೆಲಸದ ದಿನಗಳಿಗೆ ಕಡಿತಗೊಳಿಸಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ಅವಧಿ ನೋಡಿ ಪಠ್ಯಕ್ರಮ
''ಕೋವಿಡ್‌-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ 1ರಿಂದ 10ನೇ ತರಗತಿವರೆಗೆ ಎಲ್ಲ ವಿಷಯಗಳಲ್ಲಿವೈಜ್ಞಾನಿಕವಾಗಿ ಪಠ್ಯ ಕಡಿತಕ್ಕೆ ಮುಂದಾಗಿದೆ. ಶೈಕ್ಷಣಿಕ ವರ್ಷದ ಅವಧಿ ಇನ್ನೂ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶ ಅಂತಿಮಗೊಳಿಸಿಲ್ಲ. ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಸಿಲೆಬಸ್‌ ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ಮಾಡಲಾಗುವ ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದೆ. ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಹಾಗಾಗಿ, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ,'' ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.
ಯುಜಿಸಿ ಅಂತಿಮ ವರ್ಷದ ಪರೀಕ್ಷೆಯ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌