ಆ್ಯಪ್ನಗರ

ಕರ್ನಾಟಕ ಯುಜಿ, ಪಿಜಿ ಪರೀಕ್ಷೆ ಯಾವಾಗ?

ಈ ನಡುವೆ ಯುಜಿ, ಪಿಜಿ ಪರೀಕ್ಷೆಗಳಿಗೆ ಪರೀಕ್ಷೆ ಯಾವಾಗ ನಡೆಸಲಾಗುತ್ತದೆ ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡುತ್ತಿತ್ತು. ಅದಕ್ಕೆ ಉತ್ತರ ಈಗ ಸಿಕ್ಕಿದೆ.

Vijaya Karnataka Web 17 Apr 2020, 12:05 pm
ಕರ್ನಾಟಕದಲ್ಲಿ ಲಾಕ್‌ಡೌನ್‌ ಸಮಸ್ಯೆ ಇಂದಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ. ಇನ್ನೂ 1-9 ನೇ ತರಗತಿ ವರೆಗಿನ ಶಾಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೇ ಪ್ರಮೋಟ್‌ ಮಾಡಲಾಗಿದೆ. ಈ ನಡುವೆ ಯುಜಿ, ಪಿಜಿ ಪರೀಕ್ಷೆಗಳಿಗೆ ಪರೀಕ್ಷೆ ಯಾವಾಗ ನಡೆಸಲಾಗುತ್ತದೆ ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡುತ್ತಿತ್ತು. ಅದಕ್ಕೆ ಉತ್ತರ ಈಗ ಸಿಕ್ಕಿದೆ.
Vijaya Karnataka Web karnataka ug pg exams dates 2020
karnataka ug pg exams dates 2020


ಕರ್ನಾಟಕದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಜೂನ್‌ ಮೊದಲ ವಾರ ಅಥವಾ ಎರಡನೇ ವಾರ ಪರೀಕ್ಷೆ ನಡೆಸಲು ತಾತ್ಕಾಲಿಕವಾಗಿ ವೇಳಾಪಟ್ಟಿ ಸಿದ್ಧತೆಗೆ ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಸಿ ಎನ್‌ ಅಶ್ವಥ್ ನಾರಾಯಣ್ ರವರು ಹೇಳಿದ್ದಾರೆ.

ರಾಜ್ಯದಾದ್ಯಂತದ ವಿವಿಗಳ ಉಪಕುಲಪತಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದುಕೊಂಡ ಬಗ್ಗೆ ತಿಳಿಸಿದ್ದಾರೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸದ ಹೊರತು ಪರೀಕ್ಷೆ ವ್ಯವಸ್ಥೆಯನ್ನು ಮುಂದುವರೆಸಲು ಆಗುವುದಿಲ್ಲ, ಉಪಕುಲಪತಿಗಳಿಗೂ ಈ ಬಗ್ಗೆ ಚಿಂತಿಸಲು ಅವಕಾಶ ನೀಡಲಾಗಿದೆ. ಪರೀಕ್ಷೆ ದಿನಾಂಕಗಳನ್ನು ಹೊರತುಪಡಿಸಿ, ಈ ವೇಳೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಇದ್ದಲ್ಲಿ ಅವುಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಗತಿಗಳು ಬೇಕೋ ಬೇಡವೋ, ಅಥವಾ ತರಗತಿಗಳನ್ನು ಪ್ರಾರಂಭಿಸಬೇಕೋ, ನೇರವಾಗಿ ಪರೀಕ್ಷೆ ನಡೆಸಬೇಕೋ ಎಂಬುದನ್ನು ವಿಶ್ವವಿದ್ಯಾಲಯಗಳೇ ನಿರ್ಧರಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ ಉನ್ನತ ಶಿಕ್ಷಣ ಸಚಿವ ಸಿ.ಎನ್‌ ಅಶ್ವಥ್‌ ನಾರಾಯಣ್ ರವರು.

ಹಾಸ್ಟೆಲ್‌ಗಳಲ್ಲಿರುವ ಅಂತರರಾಜ್ಯ, ವಿದೇಶಿ ವಲಸೆ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳನ್ನು ಸುರಕ್ಷತೆಗಾಗಿ ನೀಡಲಾಗಿದೆ.

ಪಠ್ಯಕ್ರಮ

" ಉಪಕುಲಪತಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯುಜಿ ಮತ್ತು ಪಿಜಿ ಪಠ್ಯಕ್ರಮಗಳನ್ನು ಬದಲಾವಣೆಗೆ ಮತ್ತು ಮೌಲ್ಯಮಾಪನಕ್ಕೆ ಕಮಿಟಿ ರಚಿಸಲಾಗಿದೆ. ಆರ್ಟ್ಸ್‌, ಸೈನ್ಸ್‌, ಕಾರ್ಮಸ್‌ ಮತ್ತು ಇಂಜಿನಿಯರಿಂಗ್ ಪ್ರೋಗ್ರಾಮ್‌ಗಳಿಗೆ ಪಠ್ಯಕ್ರಮ ಬದಲಾವಣೆ ಮಾಡಲಿದ್ದು, ಸಮಿತಿಗಳ ವರದಿ ನಂತರ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು," ಎಂದಿದ್ದಾರೆ ಸಚಿವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌