ಆ್ಯಪ್ನಗರ

ಕರ್ನಾಟಕ ಪಿಜಿಸಿಇಟಿ ಫಲಿತಾಂಶ ಪ್ರಕಟ; ಫಲಿತಾಂಶ ತಿಳಿಯಲು ಹೀಗೆ ಮಾಡಿ

ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಬಯಸಿರುವ ವಿದ್ಯಾರ್ಥಿಗಳು ಬರೆದ ಕರ್ನಾಟಕ ಪಿಜಿಸಿಇಟಿ ಫಲಿತಾಂಶವು ಪ್ರಕಟಗೊಂಡಿದ್ದು, ಫಲಿತಾಂಶ ಅರಿಯಲು ಈ ಸಲಹೆಯನ್ನು ಅನುಸರಿಸಿ.

TOI.in 23 Aug 2019, 1:55 pm
ಬೆಂಗಳೂರು: ಕರ್ನಾಟಕ ಶಿಕ್ಷಣ ಪ್ರಾಧಿಕಾರ (ಕೆಇಎ) ಕರ್ನಾಟಕ ಪಿಜಿಸಿಇಟಿ 2019ರ ಫಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ತಿಳಿದುಕೊಳ್ಳಬಹುದು.
Vijaya Karnataka Web KEA


ಉನ್ನತ ಶಿಕ್ಷಣಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಪಿಜಿಸಿಇಟಿ ಸಂಖ್ಯೆಯನ್ನು ನಮೂದಿಸಬೇಕು. ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಲು https://cetonline.karnataka.gov.in/kea/ ಕ್ಲಿಕ್‌ ಮಾಡಿ.

ಆಗಸ್ಟ್‌ 26ಕ್ಕೆ ಕೌನ್ಸೆಲಿಂಗ್‌ ದಾಖಲೆಗಳ ಪರಿಶೀಲನೆ ನಡೆಯಲಿದೆ. ಆಗಸ್ಚ್‌ 30, 2019ರಿಂದ ಅಭ್ಯರ್ಥಿಗಳು ತಮ್ಮ ಆಸಕ್ತಿಕರ ವಿಷಯಗಳನ್ನು ಆಯ್ಕೆ ಮಾಡಬಹುದು. ಸೆಪ್ಟಂಬರ್‌ 7, 2019ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯಾಗಲಿದೆ.

ಕರ್ನಾಟಕ ಪಿಜಿಸಿಇಟಿ 2019 ಫಲಿತಾಂಶ ತಿಳಿಯುವುದು ಹೇಗೆ?
1. ಪಿಜಿಸಿಇಟಿ 2019ರ ಫಲಿತಾಂಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಲಾಗ್‌ಇನ್‌ ಆಗಿ. ವೆಬ್‌ಸೈಟ್‌ ವಿಳಾಸ: https://cetonline.karnataka.gov.in/kea/
2. PGCET 2019 Result ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
3. ಸ್ಕ್ರೀನ್‌ನಲ್ಲಿ ನೂತನ ಪುಟ ಕಾಣಿಸಿಕೊಳ್ಳುತ್ತದೆ.
4. ಪಿಜಿಸಿಇಟಿ ರಿಜಿಸ್ಟರ್‌ ಸಂಖ್ಯೆಯನ್ನು ನಮೂದಿಸಿ
5. ನಂತರ ಸಬ್ಮಿಟ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ.
6. ನಿಮ್ಮ ಪಿಜಿಸಿಇಟಿ ಫಲಿತಾಂಶವು ಸ್ಕ್ರೀನ್‌ ಮೇಲೆ ಮೂಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌