ಆ್ಯಪ್ನಗರ

ಹಾಸ್ಟೆಲ್ ಕಳಪೆ ಊಟ, ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಜೀವ ಬೆದರಿಕೆ: ರಕ್ಷಣೆಗೆ ಮನವಿ

ಧಾರವಾಡದ ಹುಬ್ಬಳ್ಳಿಯ ಗೋಕುಲದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವೃತ್ತಿಪರ ವಸತಿ ನಿಲಯದಲ್ಲಿ ಕಳಪೆ ಮಟ್ಟದ ಊಟ, ಹಾಸ್ಟೆಲ್‌ಗೆ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ ಎಸಗಿರುವುದನ್ನು ಪ್ರಶ್ನಿಸಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

Vijaya Karnataka Web 28 Jan 2022, 6:32 pm

ಹೈಲೈಟ್ಸ್‌:

  • ದಲಿತ ವಿದ್ಯಾರ್ಥಿಗೆ ಜೀವ ಬೆದರಿಕೆ.
  • ಹಾಸ್ಟೆಲ್ ಕಳಪೆ ಊಟ, ಭ್ರಷ್ಟಾಚಾರ ಪ್ರಶ್ನಿಸಿದ ಹಿನ್ನೆಲೆ.
  • ರಕ್ಷಣೆಗಾಗಿ ಜಂಟಿ ನಿರ್ದೇಶಕರಾದ ಜಗದೀಶ್ ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Life Threatening For Dalit Student
Life Threatening For Dalit Student
ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಗೋಕುಲದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವೃತ್ತಿಪರ ವಸತಿ ನಿಲಯದಲ್ಲಿ ಕಳಪೆ ಮಟ್ಟದ ಊಟ, ಹಾಸ್ಟೆಲ್‌ಗೆ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ ಎಸಗಿರುವುದನ್ನು ಪ್ರಶ್ನಿಸಿರುವುದಕ್ಕೆ, ಪಂಪಾಪತಿ ಎಂಬ ಎಲ್‌.ಎಲ್.ಬಿ ದ್ವಿತೀಯ ವರ್ಷದ ವಿದ್ಯಾರ್ಥಿಗೆ ಹಾಸ್ಟೆಲ್‌ ವಾರ್ಡನ್‌ ಸೇರಿದಂತೆ ಇತರೆ ಅಧಿಕಾರಿಗಳು ಜೀವ ಬೆದರಿಕೆ ಹಾಕಿ, ವಿದ್ಯಾರ್ಥಿಯನ್ನು ಹಾಸ್ಟೆಲ್‌ ನಿಂದ ಹೊರ ಹಾಕಿರುವ ಆರೋಪ ಕೇಳಿಬಂದಿದೆ. ಈ ಕುರಿತು ವಿದ್ಯಾರ್ಥಿಯೇ ಆರೋಪಿಸಿ ವಿಡಿಯೋದಲ್ಲಿ ಸ್ವತಃ ಹೇಳಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಪಾಪತಿ'ಯು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಹಾಯ ಹಸ್ತದೊಂದಿಗೆ ಜೀವಕ್ಕೆ ಯಾವುದೇ ಆಪಾಯ ಆಗದೇ ಇರುವ ರೀತಿಯಲ್ಲಿ ನನಗೆ ರಕ್ಷಣೆ ನೀಡಬೇಕು, ಶಿಕ್ಷಣ ಮುಂದುವರೆಸಲು ಅದೇ ಹಾಸ್ಟೆಲ್ ನಲ್ಲಿ ಅವಕಾಶ ಕಲ್ಪಿಸಿ, ಜೀವ ಬೆದರಿಕೆ ಹಾಕಿ ದೌರ್ಜನ್ಯ ಮಾಡಿದ ‘ಡಿ’ ಗ್ರೂಪ್ ಸಿಬ್ಬಂಧಿ, ಹಾಸ್ಟೆಲ್ ವಾರ್ಡನ್ ಮತ್ತು ತಾಲ್ಲೂಕು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಂಡಬೇಕೆಂದು ರಾಜ್ಯ ಆಯುಕ್ತರ ಅನುಪಸ್ಥಿತಿಯಲ್ಲಿ ಜಂಟಿ ನಿರ್ದೇಶಕರಾದ ಜಗದೀಶ್ ಅವರಿಗೆ ಮನವಿ ಸಲ್ಲಿಸಿದ್ದಾನೆ. ಇದೇ ವೇಳೆ ಸೂಕ್ತ ರಕ್ಷಣೆ, ಸೌಲಭ್ಯವನ್ನು ವಿದ್ಯಾರ್ಥಿಗೆ ದೊರಕಿಸಿಕೊಡಬೇಕು ಎಂದು ಎಸ್ಎಫ್ಐ ರಾಜ್ಯ ನಿಯೋಗ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಲು ಆಗ್ರಹಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ ರವರಿಗೂ ದೂರವಾಣಿ ಮೂಲಕ ಈ ಕುರಿತು ಗಮನಕ್ಕೆ ತರಲಾಗಿದೆ ಎಂದು ಎಸ್‌ಎಫ್ಐ ರಾಜ್ಯಾಧ್ಕಕ್ಷ ಅಮರೇಶ ಕಡಗದ ಹೇಳಿದ್ದಾರೆ.

ಪಂಪಾಪತಿ'ಯು ಊಟದ ಸಮಸ್ಯೆಗಳಿಂದ ಆರೋಗ್ಯ ಹದಗೆಡುತ್ತಿದೆ, ದಯವಿಟ್ಟು ಗುಣಮಟ್ಟದ ಆಹಾರ ಕೊಡಲು ತಿಳಿಸಿ ಎಂದು ಹುಬ್ಬಳ್ಳಿಯ ತಾಲ್ಲೂಕು ಅಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಲು ಕೇಳಿಕೊಂಡರೂ ಬಗೆಹರಿಸಲಾರದೆ ಅವರು ವಾರ್ಡನ್ ಜೊತೆ ಸೇರಿ ಹಾಸ್ಟೆಲ್ ನಿಂದ ಹೊರ ಹಾಕಲು ಸಂಚು ರೂಪಿಸಿರುತ್ತಾರೆ. ಸಮಸ್ಯೆಯನ್ನು ಕೇಳಿದ್ದೇ ನೆಪವಾಗಿ ಇಟ್ಟುಕೊಂಡು ತಾಲ್ಲೂಕು ಅಧಿಕಾರಿ ಸುರೇಶ್ ಗುರಣ್ಣ, ವಾರ್ಡನ್ ಮಹೇಶ್ ಹಣಗಿ, ಹಾಸ್ಟೆಲ್ ನ ‘ಡಿ’ ಗ್ರೂಪ್ ಸಿಬ್ಬಂದಿ ಅಲ್ಲಿಸಾಬ್ ನದಾಫ್ ಇವರುಗಳೆಲ್ಲಾ ಸೇರಿ ಅಕ್ರಮ ಕೂಟ ರಚನೆ ಮಾಡಿಕೊಂಡು ನನಗೆ ಜೀವ ಬೆದರಿಕೆ ಹಾಕಿರುತ್ತಾರೆ. ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. 'ತಿನ್ನಕ್ಕಾ ಆಗುತ್ತಾ ಸುಮ್ನೆ ಕೊಟ್ಟಿದ್ದು ತಿಂದು ಇರಬೇಕು, ಅದು ಸರಿಯಿಲ್ಲ ಇದು ಸರಿಯಿಲ್ಲ ಅಂದ್ರೆ, ನೀನು ಊರಿಗೆ ಜೀವಂತವಾಗಿ ಹೋಗೋದು ಕಷ್ಟ ಆಗುತ್ತದೆ " ಎಂದು ಅಧಿಕಾರಿಗಳೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ ರೊಂದಿಗೆ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ

ಡಿಪ್ಲೊಮ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: ಕೊರೊನಾ ಹಿನ್ನೆಲೆ 'ಪೂರ್ಣ ಕ್ಯಾರಿ ಓವರ್‌'ಗೆ ಅವಕಾಶ

ವಿದ್ಯಾರ್ಥಿಯು ವಸತಿ ನಿಲಯ ಬಿಟ್ಟು ಸುಮಾರು 180 ಕಿ.ಮೀ ದೂರದಲ್ಲಿರುವ ಸ್ವಂತ ಊರಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಣವಾಳ ಗ್ರಾಮಕ್ಕೆ ಹೋಗಿದ್ದಾನೆ, ಇದರಿಂದಾಗಿ ಆ ವಿದ್ಯಾರ್ಥಿಯ ಶಿಕ್ಷಣಕ್ಕೆ ತೊಂದರೆ ಆಗಿರುತ್ತದೆ. ವಿದ್ಯಾರ್ಥಿಯು ಜನವರಿ 13 ರಿಂದ ಹಾಸ್ಟೆಲ್‌ಗೆ ಹೋಗದ ಕಾರಣ ಕಾಲೇಜಿಗೆ ಹೋಗಿರುವುದಿಲ್ಲ. ವಿದ್ಯಾರ್ಥಿಯು ಅಧಿಕಾರಿಗಳ ಜೀವಬೆದರಿಕೆಗಳಿಂದ ಶಿಕ್ಷಣ ಮೊಟಕುಗೊಳ್ಳುವ ಆತಂಕದಲ್ಲಿ ಇದ್ದಾನೆ ಮತ್ತು ಹಾಸ್ಟೆಲ್‌ಗೆ ಪುನಃ ಬರಬೇಕೆಂದರೆ ನೀನು ಯಾವುದನ್ನು ಪ್ರಶ್ನೆ ಮಾಡುವುದಿಲ್ಲ ಎಂದು ತಂದೆ ತಾಯಿಯ ಸಹಿಯೊಂದಿಗೆ ಬಾಂಡ್ ಪೇಪರ್ ತರಬೇಕೆಂದು ತಿಳಿಸಿರುತ್ತಾರೆ ಎಂದು ವಿದ್ಯಾರ್ಥಿ ಪಂಪಾಪತಿ ಹಾಸ್ಟೆಲ್‌ ಅಧಿಕಾರಿಗಳ ಮೇಲೆ ಆರೋಪಿಸಿದ್ದಾರೆ.

ಎಂಎಸ್ಸಿ ನರ್ಸಿಂಗ್, ಎಂಪಿಟಿ, ಎಂಫಾರ್ಮಾ ಕೋರ್ಸ್‌ಗಳ ಪ್ರವೇಶಾತಿ ಪರೀಕ್ಷೆಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿ ಬಿ.ಸಿ.ಎಂ, ಎಸ್.ಸಿ/ಎಸ್.ಟಿ, ಅಲ್ಪಸಂಖ್ಯಾತ ಎಲ್ಲಾ ಹಾಸ್ಟೆಲ್‌ಗಳು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು, ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣಕ್ಕೆ ಸಹಾಯವಾಗಲಿ ಎಂದು ಡಾ||ಬಿ.ಆರ್.ಅಂಬೇಡ್ಕರ್ ಹಾಗೂ ಡಿ. ದೇವರಾಜ್ ಅರಸು ರವರ ಪರಿಶ್ರಮದಿಂದ ಸಂವಿಧಾನ ಆಶಯಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ವಸತಿ ಶಾಲೆಗಳನ್ನು ಹಾಗೂ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಸ್ಟೆಲ್ ಗಳನ್ನು ಪ್ರಾರಂಭ ಮಾಡಿದೆ, ತುಂಬಾ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು, ಶಿಕ್ಷಕರು, ಉಪನ್ಯಾಸಕರು, ವಕೀಲರು, ನ್ಯಾಯಾಧೀಶರು, ಪೊಲೀಸ್, ಕೆ.ಎ.ಎಸ್, ಇತ್ಯಾದಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅದಕ್ಕೆಲ್ಲಾ ಕಾರಣ ವಸತಿ ನಿಲಯಗಳು ಅಂದರೆ ಯಾವುದೇ ರೀತಿಯಲ್ಲಿ ತಪ್ಪಾಗಲಾರದು ಆದರೆ ಇಂತಹ ವಸತಿ ನಿಲಯಗಳಲ್ಲಿ ವಾರ್ಡನ್, ತಾಲ್ಲೂಕು, ಜಿಲ್ಲೆ ಹಂತದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬೇಜವಾಬ್ದಾರಿತನ, ದುರಾಡಳಿತ ಕಂಡು ಬರುತ್ತದೆ. ಏಕೆಂದರೆ ರಾಜ್ಯದ ಧಾರವಾಡ ಜಿಲ್ಲೆಯ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕೆಂದರೆ ಇಂತಿಷ್ಟು ಎಂದು ಹಣ ಕೊಡಲೇಬೇಕಾಗಿದೆ ಇವರು ಸರ್ಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ಮೆರಿಟ್‌ ಪದ್ಧತಿಯನ್ನು ಕೈ ಬಿಟ್ಟು ಒಬ್ಬ ವಿದ್ಯಾರ್ಥಿಯನ್ನು ಹಾಸ್ಟೆಲ್‌ಗೆ ಆಯ್ಕೆ ಮಾಡಿಕೊಳ್ಳಲು ಕನಿಷ್ಠ 10 ರಿಂದ 25 ಸಾವಿರದವರೆಗೆ ಹಣ ತೆಗೆದುಕೊಂಡಿರುತ್ತಾರೆ. ಇದಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಕೆಲವರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ ಈ ವಿಷಯವು ಸಂಬಂಧಪಟ್ಟ ತಾಲ್ಲೂಕು ಅಧಿಕಾರಿಗಳ ಗಮನಕ್ಕೆ ಇದ್ದರೂ ಮೌನ ವಹಿಸಿರುವುದನ್ನು ನೋಡಿದರೆ ಅವರು ಕೂಡ ಈ ಅವ್ಯವಹಾರದಲ್ಲಿ ಭಾಗಿದಾರರು ಆಗಿದ್ದಾರೆ ಎಂದು ಬಲವಾದ ಆರೋಪ ಕೇಳಿ ಬಂದಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅಮರೇಶ ಕಡಗದ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌