ಆ್ಯಪ್ನಗರ

ಕ್ಲ್ಯಾಟ್‌ 2019 ಪರೀಕ್ಷೆ ಫಲಿತಾಂಶ ಪ್ರಕಟ: ವಿವರಗಳಿಗಾಗಿ ಇಲ್ಲಿ ನೋಡಿ

ಕ್ಲ್ಯಾಟ್‌ 2019ರ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಕ್ಲ್ಯಾಟ್ ಅಧಿಕೃತ ವೆಬ್‌ಸೈಟ್‌ clatconsortiumofnlu.ac.inನಲ್ಲಿ ಫಲಿತಾಂಶವನ್ನು ನೋಡಬಹುದು. ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ದೇಶದ 21 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದುಕೊಳ್ಳಬಹುದು. ಅಲ್ಲದೆ, ಕ್ಲ್ಯಾಟ್‌ 2019 ಪರೀಕ್ಷೆಯ ಅಂಕಗಳನ್ನು ಇತರೆ 43 ಶೈಕ್ಷಣಿಕ ಸಂಸ್ಥೆಗಳು ಹಾಗೂ ಎರಡು ಇತರೆ ಸಾರ್ವಜನಿಕ ವಲಯದ ಶಿಕ್ಷಣಗಳಲ್ಲಿಯೂ ಉಪಯುಕ್ತವಾಗಲಿದೆ.

TIMESOFINDIA.COM 15 Jun 2019, 11:17 am
ಹೊಸದಿಲ್ಲಿ: ರಾಷ್ಟ್ರೀಯ ಕಾನೂನು ವಿವಿ (ಎನ್‌ಎಲ್‌ಯು), ಒಡಿಶಾ ಕಾನೂನು ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಲ್ಯಾಟ್‌ 2019) ಫಲಿತಾಂಶವನ್ನು ಶುಕ್ರವಾರ (ಜೂನ್ 15,2019) ಬಿಡುಗಡೆ ಮಾಡಿದೆ. ಕ್ಲ್ಯಾಟ್‌ ಫಲಿತಾಂಶವನ್ನು ಕ್ಲ್ಯಾಟ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
Vijaya Karnataka Web clat 2019


ಕ್ಲ್ಯಾಟ್‌ 2019ರ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಕ್ಲ್ಯಾಟ್ ಅಧಿಕೃತ ವೆಬ್‌ಸೈಟ್‌ clatconsortiumofnlu.ac.inನಲ್ಲಿ ಫಲಿತಾಂಶವನ್ನು ನೋಡಬಹುದು. ಜತೆಗೆ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಕ್ಲ್ಯಾಟ್‌ 2019 ಪರೀಕ್ಷೆ ಮೇ 26, 2019ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಕ್ಲ್ಯಾಟ್‌ 2019 ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ದೇಶದ 21 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದುಕೊಳ್ಳಬಹುದು. ಅಲ್ಲದೆ, ಕ್ಲ್ಯಾಟ್‌ 2019 ಪರೀಕ್ಷೆಯ ಅಂಕಗಳನ್ನು ಇತರೆ 43 ಶೈಕ್ಷಣಿಕ ಸಂಸ್ಥೆಗಳು ಹಾಗೂ ಎರಡು ಇತರೆ ಸಾರ್ವಜನಿಕ ವಲಯದ ಶಿಕ್ಷಣಗಳಲ್ಲಿಯೂ ಉಪಯುಕ್ತವಾಗಲಿದೆ.

ಕ್ಲ್ಯಾಟ್‌ 2019 ಫಲಿತಾಂಶವನ್ನು ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ ನೋಡಿ

ಕ್ಲ್ಯಾಟ್‌ 2019 ಫಲಿತಾಂಶ ನೋಡಲು ವಿವಿಧ ಹಂತಗಳು ಇಲ್ಲಿವೆ

1) ಪರೀಕ್ಷೆಯ ಅಧಿಕೃತ ವೆಬ್‌ಸೈಟ್ - clatconsortiumofnlu.ac.in ಗೆ ಭೇಟಿ ಕೊಡಿ

2) ಹೋಂಪೇಜ್‌ನಲ್ಲಿ CLAT 2019 Results ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಿ

3) ಬಳಿಕ ಅದು ಎನ್‌ಎಲ್‌ಯು ವೆಬ್‌ಸೈಟ್‌ನ ಹೊಸ ಪುಟಕ್ಕೆ ರೀಡೈರೆಕ್ಟ್‌ ಆಗಲಿದೆ.

4) ಕ್ಲ್ಯಾಟ್‌ ರೋಲ್ ನಂಬರ್, ಜನ್ಮ ದಿನಾಂಕ ಎಂಟರ್‌ ಮಾಡಿ ಲಾಗಿನ್ ಆಗಿ

5) ನಿಮ್ಮ ಕ್ಲ್ಯಾಟ್ 2019 ಫಲಿತಾಂಶ ಸ್ಕ್ರೀನ್‌ ಮೇಲೆ ಲಭ್ಯವಾಗಲಿದೆ.

6) ಫಲಿತಾಂಶವನ್ನು ಡೌನ್ಲೋಡ್‌ ಮಾಡಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಬಹುದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌