ಆ್ಯಪ್ನಗರ

National Reading Day 2021: ಸಿಬಿಎಸ್‌ಇ ಇಂದ ಓದಿನ ದಿನ, ವಾರ, ತಿಂಗಳು ಆಚರಣೆಗೆ ಕರೆ

'ರಾಷ್ಟ್ರೀಯ ಓದಿನ ದಿನ'ವನ್ನು (National Reading Day 2021) ದೇಶದಾದ್ಯಂತ ಜೂನ್ 19, 2021 ರಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹರಾದ ದಿವಂಗತ...

Vijaya Karnataka Web 18 Jun 2021, 6:04 pm

ಹೈಲೈಟ್ಸ್‌:

  • ರಾಷ್ಟ್ರೀಯ ಓದಿನ ದಿನ ದೇಶದಾದ್ಯಂತ ಜೂನ್ 19 ರಂದು ಆಚರಣೆ.
  • ಪಿ.ಎನ್‌.ಪಣಿಕ್ಕರ್ ರವರ ಸವಿನೆನಪಿಗಾಗಿ ಆಚರಣೆ.
  • ವಿದ್ಯಾರ್ಥಿಗಳಿಗೆ ಚಟುವಟಿಕೆ ನೀಡಿ ಆಚರಣೆಗೆ ಸಿಬಿಎಸ್‌ಇ ಸೂಚನೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web national reading day 2021
national reading day 2021
'ರಾಷ್ಟ್ರೀಯ ಓದಿನ ದಿನ'ವನ್ನು (National Reading Day 2021) ದೇಶದಾದ್ಯಂತ ಜೂನ್ 19, 2021 ರಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹರಾದ ದಿವಂಗತ ಪಿ.ಎನ್.ಪಣಿಕ್ಕರ್ ರವರೆ ಸವಿನೆನಪಿಗಾಗಿ ಆಚರಣೆ ಮಾಡಲಾಗುತ್ತದೆ. ಓದಿನ ಪ್ರಾಮುಖ್ಯತೆ ಬಗ್ಗೆ ಹೆಚ್ಚು ತಿಳಿಸಿದ ಪಣಿಕ್ಕರ್ ರವರು, ಕೇರಳ ಸಾಂಸ್ಕೃತಿಕ ಚಳುವಳಿಯ ಪ್ರಮುಖ ಜವಾಬ್ದಾರಿಯ ಹೊರೆ ಹೊತ್ತಿದ್ದರು. ಓದಿನ ಸಾಮರ್ಥ್ಯಗಳ ಸುಧಾರಣೆ ಮತ್ತು ಪ್ರಚಾರಕ್ಕಾಗಿ ಪ್ರಸ್ತುತ ಸಿಬಿಎಸ್‌ಇ'ಯು ಶಾಲೆಗಳಿಗೆ ರಾಷ್ಟ್ರೀಯ ಓದಿನ ದಿನ ಆಚರಣೆಗೆ ಆದೇಶ ನೀಡಿದೆ. ವಾರಗಟ್ಟಲೇ, ತಿಂಗಳುಗಟ್ಟಲೇ ಆಚರಣೆ ಮಾಡಿ ಎಂದಿದೆ.

ಸಿಬಿಎಸ್‌ಇ'ಯು ವಿವಿಧ ಶಾಲೆಗಳಿಗೆ ಕಳುಹಿಸಲಾದ ಅಫೀಶಿಯಲ್ ನೋಟಿಸ್‌ನಲ್ಲಿ, 'ಜೂನ್ 19 ರಂದು ನ್ಯಾಷನಲ್ ರೀಡಿಂಗ್ ಡೇ ಆಚರಣೆ ಮಾಡಿ, ಹಾಗೆಯೇ ರೀಡಿಂಗ್ ವೀಕ್, ರೀಡಿಂಗ್ ಮಂಥ್‌ ಎಂದು ಆಚರಣೆ ಮಾಡಿ. ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಚಟುವಟಿಕೆಗಳನ್ನು ನೀಡಿ' ಎಂದಿದೆ.
ಜೂನ್‌ 11 ರ ಸುತ್ತೋಲೆಯಲ್ಲಿ '2022 ರ ವೇಳೆಗೆ ದೇಶದ ಎಲ್ಲ ನಾಗರಿಕರಲ್ಲಿ 'ಓದು ಮತ್ತು ಬೆಳವಣಿಗೆ' ಎಂಬ ಸಂದೇಶವನ್ನು ಪ್ರಸಾರ ಮಾಡುವ ಪ್ರಧಾನಮಂತ್ರಿ ರವರ ದೃಷ್ಟಿಕೋನವನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಶಾಲೆಗಳಿಗೆ 'ನ್ಯಾಷನಲ್ ರೀಡಿಂಗ್ ಡೇ, ರೀಡಿಂಗ್ ವೀಕ್, ರೀಡಿಂಗ್ ಮಂಥ್ ಅನ್ನು ಆನ್‌ಲೈನ್‌ ಚಟುವಟಿಕೆಗಳ ಮೂಲಕ ಆಚರಣೆ ಮಾಡಿ ಎಂದು ಕೇಳಿದೆ.

ವಿಶೇಷ ಶಾಲೆಗಳಲ್ಲಿ 1-10ನೇ ತರಗತಿವರೆಗೆ ಅಡ್ಮಿಷನ್‌ ಪ್ರಕ್ರಿಯೆ ಆರಂಭ

'26ನೇ ನ್ಯಾಷನಲ್ ರೀಡಿಂಗ್ ಡೇ ಪ್ರಯುಕ್ತ' ಶಾಲೆಗಳು pnpanickerfoundation.org ವೆಬ್‌ಸೈಟ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ಎಂದು ಸಿಬಿಎಸ್‌ಇ ಹೇಳಿದೆ.

ಜೂನ್ 19 ರಾಷ್ಟ್ರೀಯ ಓದಿನ ದಿನ ಆಚರಣೆ ಮಾಡುವುದು ಏಕೆ?
ಪುಥುವಯಿಲ್ ನಾರಾಯಣ ಪಣಿಕ್ಕರ್ ಅಥವಾ ಪಿ.ಎನ್‌.ಪಣಿಕ್ಕರ್ ರವರ ಸಾವಿನ ಸವಿನೆನಪಿಗಾಗಿ 'ರಾಷ್ಟ್ರೀಯ ಓದಿನ ದಿನ' ಆಚರಣೆ ಮಾಡಲಾಗುತ್ತದೆ. ಇವರನ್ನು ಭಾರತೀಯ ಗ್ರಂಥಾಲಯ ಚಳುವಳಿ ಪಿತಾಮಹರೆಂದು ಕರೆಯಲಾಗುತ್ತದೆ. ಅವರು ಕೇರಳದ ಸಾಕ್ಷರತೆ ದರ ಶೇಕಡ.100 ತಲುಪುವಲ್ಲಿ ಮತ್ತು ಗ್ರಂಥಾಲಯಗಳ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಷ್ಟ್ರೀಯ ಓದಿನ ದಿನವನ್ನು 1996 ರಲ್ಲಿ ಕೇರಳದಲ್ಲಿ, ಪಣಿಕ್ಕರ್ ರವರ ಸ್ಮರಣಾರ್ಥ ಆಚರಣೆ ಮಾಡಲಾಯಿತು. 2017 ರಲ್ಲಿ ಪಿಎಂ ನರೇಂದ್ರ ಮೋದಿರವರು 22ನೇ ನ್ಯಾಷನಲ್ ರೀಡಿಂಗ್ ಮಂಥ್ ಅನ್ನು ಉದ್ಘಾಟನೆ ಮಾಡಿದರು. ಕೇರಳ ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ 'Read and Grow' ಎಂಬ ಕರೆಯನ್ನು ನೀಡಲಾಗಿದೆ.

ಕರ್ನಾಟಕ ದ್ವಿತೀಯ ಪಿಯು ಫಲಿತಾಂಶಕ್ಕೆ ಮಧ್ಯಂತರ ತಡೆಯಾಜ್ಞೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌