ಆ್ಯಪ್ನಗರ

ಎನ್‌ಇಟಿ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಅರ್ಜಿ ದಿನಾಂಕ ವಿಸ್ತರಣೆ; ಲಿಸ್ಟ್‌ ಇಲ್ಲಿದೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಿವಿಧ ಅರ್ಹತಾ ಪರೀಕ್ಷೆಗಳಿಗೆ ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ.

Vijaya Karnataka Web 31 Mar 2020, 11:07 am
ಕೊರೊನಾ ಸೋಂಕು ಹರಡುವಿಕೆಯ ಭೀತಿಯಿಂದ ರಾಷ್ಟ್ರದ್ಯಂತ ಬಂದ್ ಮಾಡಲಾಗಿದೆ. ಈ ಸಂದರ್ಭದಿಂದ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಸಮಸ್ಯೆ ಎದುರಿಸುತ್ತಿರುವ ಕಾರಣದಿಂದ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ.
Vijaya Karnataka Web nta net application date
nta notification 2020


ಯುಜಿಸಿ ಎನ್‌ಇಟಿ ಪರೀಕ್ಷೆಗೆ ರಿಜಿಸ್ಟ್ರೇಷನ್‌ ಪಡೆಯಲು ಈ ಹಿಂದೆ ಏಪ್ರಿಲ್ 16 ಕೊನೆ ದಿನಾಂಕ ನಿಗದಿಪಡಿಸಿತ್ತು. ಪ್ರಸ್ತುತ ದಿನಾಂಕ ವಿಸ್ತರಣೆ ಮಾಡಿದ್ದು, ಅಭ್ಯರ್ಥಿಗಳು ಮೇ ತಿಂಗಳ 15 ರವರಗೆ ಅವಕಾಶ ನೀಡಲಾಗಿದೆ.

ಸಿಎಸ್‌ಐಆರ್ ಎನ್ಇಟಿ ಪರೀಕ್ಷೆಗೆ ಈ ಹಿಂದೆ ಏಪ್ರಿಲ್ 15 ರಿಜಿಸ್ಟ್ರೇಷನ್‌ಗೆ ಕೊನೆ ದಿನವಾಗಿತ್ತು. ಪ್ರಸ್ತುತ ಅಭ್ಯರ್ಥಿಗಳು ಮೇ ತಿಂಗಳ 15 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ಮೆಂಟ್ ಜೆಇಇ 2020, IGNOU ಅಡ್ಮಿಷನ್ ಟೆಸ್ಟ್ ಫಾರ್ ಪಿಹೆಚ್‌.ಡಿ ಅಂಡ್ ಎಂಬಿಎ, ಐಸಿಎಆರ್ ಪರೀಕ್ಷೆ, ಜೆಎನ್‌ಯುಇಇ ಪರೀಕ್ಷೆಗಳಿಗೆ ಏಪ್ರಿಲ್ 30 ರವರೆಗೆ, ಆಲ್‌ ಇಂಡಿಯಾ ಆಯುಷ್ ಪೋಸ್ಟ್‌ ಗ್ರಾಜುಯೇಟ ಎಂಟ್ರ್ಯಾನ್ಸ್‌ ಟೆಸ್ಟ್‌(AIAPGET)-2020 ಪರೀಕ್ಷೆಗೆ ಮೇ 31 ರಿಜಿಸ್ಟ್ರೇಷನ್‌ ಗೆ ಕೊನೆ ದಿನವಾಗಿದೆ.

ಅರ್ಜಿ ದಿನಾಂಕ ವಿಸ್ತರಣೆಯಾದ ಪರೀಕ್ಷೆಗಳ ಪಟ್ಟಿ ಈ ಕೆಳಗಿನಂತೆ ಸಹ ಚೆಕ್‌ ಮಾಡಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌