ಆ್ಯಪ್ನಗರ

ಎನ್‌ಟಿಎಸ್‌ಇ 2019 ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್‌ ಮಾಡಲು ಲಿಂಕ್ ಇಲ್ಲಿದೆ ನೋಡಿ

ಎನ್‌ಟಿಎಸ್‌ಇ 2019 ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ಡೈರೆಕ್ಟ್ ಲಿಂಕ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಹಿಂದೆ ಮೇ 12,2019ರಂದು ನಿಗದಿಯಾಗಿದ್ದ ಪರೀಕ್ಷೆ ಜೂನ್ 16ರಂದು ನಡೆಯಲಿದೆ.

TIMESOFINDIA.COM 21 May 2019, 4:32 pm
ಹೊಸದಿಲ್ಲಿ: ರಾಷ್ಟ್ರೀಯ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ರಾಷ್ಟ್ರೀಯ ಟ್ಯಾಲೆಂಟ್‌ ಸರ್ಚ್ ಪರೀಕ್ಷೆ (ಎನ್‌ಟಿಎಸ್‌ಇ) 2019ರ ಸ್ಟೇಜ್‌ - II ಪ್ರವೇಶ ಪತ್ರವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಎನ್‌ಟಿಎಸ್‌ಇ ಎರಡನೇ ಹಂತ (ಸ್ಟೇಜ್‌ - II) ಪರೀಕ್ಷೆಗೆ ಅರ್ಜಿ ಸಲ್ಲಿಸಿರುವವರು ಎನ್‌ಸಿಇಆರ್‌ಟಿ ಅಧಿಕೃತ ವೆಬ್‌ಸೈಟ್ ciet.nic.inಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಚೆಕ್ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Vijaya Karnataka Web ntse


ಎನ್‌ಟಿಎಸ್‌ಇ 2019 ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ಈ ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್‌ ಮೂಲಕ ಪಡೆದುಕೊಳ್ಳಬಹುದು. ಅಲ್ಲದೆ, ತಮ್ಮ ರಾಜ್ಯದ ರೋಲ್‌ ನಂಬರ್ ಹಾಗೂ ಜನ್ಮ ದಿನಾಂಕವನ್ನು ಎಂಟರ್‌ ಮಾಡಿ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ.

ಎನ್‌ಟಿಎಸ್‌ಇ 2019 ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್‌ ಇಲ್ಲಿದೆ ನೋಡಿ

ಜೂನ್‌ 16ರಂದು ಎನ್‌ಟಿಎಸ್‌ಇ 2019 ಪರೀಕ್ಷೆ ನಡೆಯಲಿದೆ.ಈ ಹಿಂದೆ ಮೇ 12,2019ರಂದು ಪರೀಕ್ಷೆಯನ್ನು ನಿಗದಿ ಮಾಡಿತ್ತಾದರೂ ಲೋಕಸಭೆ ಚುನಾವಣೆಯ ಕಾರಣದಿಂದ ಮುಂದೂಡಿತ್ತು.

ಎನ್‌ಟಿಎಸ್‌ಇ 2019 ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡುವುದು ಹೇಗೆ
1. ಎನ್‌ಸಿಇಆರ್‌ಟಿ ಅಧಿಕೃತ ವೆಬ್‌ಸೈಟ್ ciet.nic.inಗೆ ಭೇಟಿ ನೀಡಿ

2. ಹೋಂ ಪೇಜ್‌ನಲ್ಲಿ "NTSE 2019 admit card"ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

3.ಈ ಲಿಂಕ್‌ ಲಾಗಿನ್‌ ಆಧಾರದ ಪುಟಕ್ಕೆ ಡೈರೆಕ್ಟ್ ಆಗುತ್ತದೆ

4. ತಮ್ಮ ರಾಜ್ಯದ ರೋಲ್‌ ನಂಬರ್ ಹಾಗೂ ಜನ್ಮ ದಿನಾಂಕದ ಮೂಲಕ ಲಾಗಿನ್‌ ಆಗಬೇಕು

5. ನಿಮ್ಮ ಎನ್‌ಟಿಎಸ್‌ಇ 2019 ಪ್ರವೇಶ ಪತ್ರ ಪುಟದ ಮೇಲೆ ಡಿಸ್‌ಪ್ಲೇ ಆಗುತ್ತದೆ

6.ನಂತರ ನಿಮ್ಮ ಎನ್‌ಟಿಎಸ್‌ಇ 2019 ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌