ಆ್ಯಪ್ನಗರ

ಲೋಕೋಪಯೋಗಿ ಇಲಾಖೆಯಲ್ಲಿ ನೇಮಕ: ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಲೋಕೋಪಯೋಗಿ ಇಲಾಖೆಯು ಸಹಾಯಕ ಎಂಜಿನಿಯರ್‌ ಗ್ರೇಡ್‌-1 ಮತ್ತು ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ...

Vijaya Karnataka 10 Apr 2019, 5:00 am
ಕರ್ನಾಟಕ ಲೋಕೋಪಯೋಗಿ ಇಲಾಖೆಯು ಸಹಾಯಕ ಎಂಜಿನಿಯರ್‌ ಗ್ರೇಡ್‌-1 ಮತ್ತು ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇಂದು (ಏ.10) ಕೊನೆಯ ದಿನವಾಗಿದೆ.
Vijaya Karnataka Web pwd recruitment 2019 april 10 last date apply now
ಲೋಕೋಪಯೋಗಿ ಇಲಾಖೆಯಲ್ಲಿ ನೇಮಕ: ಇಂದೇ ಅರ್ಜಿ ಸಲ್ಲಿಸಿ


ಇನ್ನೂ ಅರ್ಜಿ ಸಲ್ಲಿಸದೇ ಇರುವ ಆಸಕ್ತರು ಇಂದು ರಾತ್ರಿ 11.45ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು ಎಲೆಕ್ಟ್ರಾನಿಕ್‌ ಅಂಚೆ ಕಚೇರಿಯಲ್ಲಿ ಚಲನ್‌ ಮೂಲಕ ಪಾವತಿಸಬೇಕಾಗಿದ್ದು, ಇದಕ್ಕೆ ಏ. 11ರವರೆಗೆ ಕಾಲಾವಕಾಶವಿರುತ್ತದೆ. ಗ್ರೂಪ್‌-ಬಿ ದರ್ಜೆಯ ಸಹಾಯಕ ಎಂಜಿನಿಯರ್‌ ಗ್ರೇಡ್‌-1ರ 570 ಹುದ್ದೆ ಮತ್ತು 300 ಕಿರಿಯ ಎಂಜಿನಿಯರ್‌ ಹುದ್ದೆ ಸೇರಿ ಒಟ್ಟು 870 ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.

ಅರ್ಹತೆಗಳೇನು? : ಸಹಾಯಕ ಎಂಜಿನಿಯರ್‌ ಹುದ್ದೆಗೆ ಸಿವಿಲ್‌/ ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌/ ಬಿಲ್ಡಿಂಗ್‌ ಆ್ಯಂಡ್‌ ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ/ ಸಿವಿಲ್‌ ಎಂಜಿನಿಯರಿಂಗ್‌ ಆ್ಯಂಡ್‌ ಪ್ಲ್ಯಾನಿಂಗ್‌/ ಸಿವಿಲ್‌ ಟೆಕ್ನಾಲಜಿ ಆ್ಯಂಡ್‌ ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ/ ಕನ್‌ಸ್ಟ್ರಕ್ಷನ್‌ ಎಂಜಿನಿಯರಿಂಗ್‌ ಆ್ಯಂಡ ಮ್ಯಾನೇಜ್‌ಮೆಂಟ್‌/ ಜಿಯೋ ಮೆಕಾನಿಕ್ಸ್‌ ಆ್ಯಂಡ್‌ ಸ್ಟ್ರಕ್ಚರ್ಸ್‌/ ಸ್ಟ್ರಕ್ಚರಲ್‌ ಆ್ಯಂಡ್‌ ಫೌಂಡೇಶನ್‌ ಎಂಜಿನಿಯರಿಂಗ್‌ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಕಿರಿಯ ಎಂಜಿನಿಯರ್‌ ಹುದ್ದೆಗೆ ಸಿವಿಲ್‌ ಎಂಜಿನಿಯರಿಂಗ್‌ ಅಥವಾ ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ ಅಥವಾ ಮೆಟೀರಿಯಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೆಬ್‌: http://kpwd.co.in/

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌