ಆ್ಯಪ್ನಗರ

ಕರ್ನಾಟಕ ಹೊರಭಾಗದ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಯಾವಾಗ?

ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕ ಪ್ರಕಟಗೊಂಡಿದೆ. ಜೂನ್‌ 25 ರಿಂದ ಜುಲೈ 4 ರವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು 8,48,196 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.

Vijaya Karnataka Web 21 May 2020, 2:18 pm
ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕ ಪ್ರಕಟಗೊಂಡಿದೆ. ಜೂನ್‌ 25 ರಿಂದ ಜುಲೈ 4 ರವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು 8,48,196 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.
Vijaya Karnataka Web outside karnataka students sslc exam date 2020
outside karnataka students sslc exam date


ಆದರೆ 10 ನೇ ತರಗತಿ ಪರೀಕ್ಷೆಯ ವೇಳಾಪಟ್ಟಿಯ ನಿರೀಕ್ಷೆ, ಕರ್ನಾಟಕದ ಹೊರಭಾಗದ ವಿದ್ಯಾರ್ಥಿಗಳಿಗೆ ಹಾಗೆ ಉಳಿದಿದೆ. ಕರ್ನಾಟಕದಲ್ಲಿ ಪರೀಕ್ಷೆ ಬರೆಯಲು ರಿಜಿಸ್ಟ್ರೇಷನ್‌ ಪಡೆದಿರುವ ಈ ಸ್ಟೂಡೆಂಟ್‌ಗಳಿಗೆ ಪರೀಕ್ಷೆ ಯಾವಾಗ ಎಂಬುದನ್ನು ರಾಜ್ಯ ಸೆಕೆಂಡರಿ ಎಜುಕೇಷನ್‌ ಎಕ್ಸಾಮಿನೇಷನ್ ಬೋರ್ಡ್‌ ಇನ್ನು ತಿಳಿಸಿಲ್ಲ. ಅಲ್ಲದೇ ಈ ವಿದ್ಯಾರ್ಥಿಗಳಿಗೆ ಯಾವ ರೀತಿ, ಯಾವಾಗ ಪರೀಕ್ಷೆ ನಡೆಸಲು ಕೆಎಸ್‌ಇಇಬಿ ಪ್ಲಾನ್‌ ಮಾಡಿದೆ ಎಂಬುದನ್ನು ಮತ್ತು ಈ ಅಭ್ಯರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರ ಸಹ ನೀಡಬೇಕಿದೆ. ಈ ಕುರಿತು ಮಾತನಾಡಿರುವ ಎಸ್‌ ಸುರೇಶ್‌ ಕುಮಾರ್‌, "ನಮಗೆ ಇನ್ನೂ ಪರೀಕ್ಷೆ ದಿನಕ್ಕೆ 35 ದಿನಗಳು ಬಾಕಿ ಇದೆ. ಅಷ್ಟರೊಳಗೆ ಹಲವು ನಿರ್ಧಾರಗಳನ್ನು ಕೈಗೊಳ್ಳಬಹುದು," ಎಂದಿದ್ದಾರೆ.

ಸೆಕೆಂಡರಿ ಎಜುಕೇಷನ್‌ ಎಕ್ಸಾಮಿನೇಷನ್‌ ಬೋರ್ಡ್‌ಗೆ ಸಹಾಯವಾಗುವಂತೆ ಕ್ರಮಕೈಗೊಳ್ಳಲು, ವಿಶೇಷವಾಗಿ ಕಾಸರಗೋಡು, ಕೋಲಾರ್‌ ಮತ್ತು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಲೆಕ್ಕಹಾಕಿರಿ. ವಿದ್ಯಾರ್ಥಿಗಳ ಸಂಖ್ಯೆ ಗೊತ್ತಾದಲ್ಲಿ ಪರೀಕ್ಷೆಗೆ ರೂಪುರೇಷೆ ಸಿದ್ಧಪಡಿಸಲು ಅನುಕೂಲವಾಗಲಿದೆ ಎಂದು ಸುರೇಶ್‌ ಕುಮಾರ್ ರವರು ಸಂಬಂಧಿಸಿದ ಜಿಲ್ಲೆಗಳ ಸಾರ್ವಜನಿಕ ಕುಂದುಕೊರತೆಗಳ ಉಪನಿರ್ದೇಶಕರುಗಳಿಗೆ ತಿಳಿಸಿದ್ದಾರೆ.

ಕರ್ನಾಟಕ SSLC ಜೂನ್‌-ಜುಲೈ ವಿಷಯವಾರು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಅವರಿಗೆ ಪರೀಕ್ಷೆ ನಡೆಸದೇ ಇದ್ದಲ್ಲಿ ಆ ವಿದ್ಯಾರ್ಥಿಗಳನ್ನು ದೂರ ತಳ್ಳಿದಂತೆ ಆಗುತ್ತದೆ. ಅವರಿಗೆ ಕೊರೊನಾ ಬಗ್ಗೆ ಇನ್ನಷ್ಟು ಭಯ ಹುಟ್ಟಿಸಿದಂತೆ ಆಗುತ್ತದೆ. ಆದರೆ ಪರೀಕ್ಷೆ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಹಲವು ನಿರ್ಬಂಧಗಳಿಂದ ಸಡಿಲಿಕೆ ನೀಡುವ ಕ್ರಮವನ್ನು ಮುಂದೆ ಕೈಗೊಳ್ಳಬಹುದಾದ ನಿರೀಕ್ಷೆ ಇದೆ. ಹಲವು ಸುರಕ್ಷಿತ ಮತ್ತು ಉತ್ತಮ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಸಚಿವರು ತಿಳಿಸಿದ್ದಾರೆ.

ರಾಜ್ಯದ ಹೊರಭಾಗದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವುದಕ್ಕೆ ಬೇಸರ ವ್ಯಕ್ತಪಡಿಸಿರುವ, ಮಾಜಿ ಸಚಿವ ಯು ಟಿ ಕಾದರ್‌ ರವರು, ಹೆಚ್ಚು ಅಸುರಕ್ಷತೆ ಕಾಡುವ ಸಾಧ್ಯತೆ ಇದೆ ಎಂದು ಪರೀಕ್ಷೆ ವೇಳಾಪಟ್ಟಿ ಪ್ರಕಟವಾದಗಲೇ ತಿಳಿಸಿದ್ದಾರೆ.

ಪದವಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಯಾವಾಗ?

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಈ ಮೊದಲು ಮಾರ್ಚ್‌ 27 ರಿಂದ ಏಪ್ರಿಲ್ 09 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಕರ್ನಾಟಕ TET ಗೆ ಹೊಸ ದಿನಾಂಕ ಫಿಕ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌