ಆ್ಯಪ್ನಗರ

K-CET ಪರೀಕ್ಷೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ: ಡಾ.ಅಶ್ವತ್ಥನಾರಾಯಣ ಸ್ಪಷ್ಟನೆ

ಡಾ ಅಶ್ವತ್ಥನಾರಾಯಣ ರವರು ಕೆಸಿಇಟಿ ಪರೀಕ್ಷೆ ದಿನಾಂಕದ ಕುರಿತು ಸ್ಪಷ್ಟನೆ ನೀಡಲು ಟ್ವೀಟ್‌ ಮಾಡಿರುವ ಅವರು...

Vijaya Karnataka Web 10 Jul 2020, 3:22 pm
ಕರ್ನಾಟಕ ಕಾಮನ್ ಎಂಟ್ರ್ಯಾನ್ಸ್‌ ಟೆಸ್ಟ್‌ (K-CET 2020) ಪರೀಕ್ಷೆಗೆ ಮೇ 13 ರಂದು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಇಂದು ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ.
Vijaya Karnataka Web kcet 2020 exam time table
kcet 2020 exam time table


ಡಾ ಅಶ್ವತ್ಥನಾರಾಯಣ ರವರು ಕೆಸಿಇಟಿ ಪರೀಕ್ಷೆ ದಿನಾಂಕದ ಕುರಿತು ಸ್ಪಷ್ಟನೆ ನೀಡಲು ಟ್ವೀಟ್‌ ಮಾಡಿರುವ ಅವರು, "K-CET 2020 ಪರೀಕ್ಷೆಗಳು ನಿಗದಿಯಂತೆ ಇದೇ ತಿಂಗಳ ಜುಲೈ 30 ಮತ್ತು 31 ರಂದು ನಡೆಯಲಿವೆ" ಎಂದು ಮಾಹಿತಿ ನೀಡಿದ್ದಾರೆ.

ಅಂದಹಾಗೆ K-CET 2020 ಪರಿಷ್ಕೃತ ವೇಳಾಪಟ್ಟಿ ಈ ಕೆಳಗಿನಂತಿದೆ.

30-07-2020- ಜೀವಶಾಸ್ತ್ರ ( ಬೆಳಿಗ್ಗೆ 10-30 ರಿಂದ 11-50 ರ ವರೆಗೆ)

30-07-2020 - ಗಣಿತ (02-30 ರಿಂದ 03-50 ವರೆಗೆ)

31-07-2020- ಭೌತಶಾಸ್ತ್ರ ( ಬೆಳಿಗ್ಗೆ 10-30 ರಿಂದ 11-50 ರ ವರೆಗೆ)

31-07-2020- ರಸಾಯನ ಶಾಸ್ತ್ರ (02-30 ರಿಂದ 03-50 ವರೆಗೆ)

ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು ಕೇಂದ್ರದಲ್ಲಿ ಮಾತ್ರ)

01-08-2020- ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 12-30 ರವರೆಗೆ.

ಕನ್ನಡ ಭಾಷಾ ಪರೀಕ್ಷೆಯನ್ನು 50 ಅಂಕಗಳಿಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ. ಇತರೆ ವಿಷಯಗಳ ಪರೀಕ್ಷೆಗಳನ್ನು 60 ಅಂಕಗಳಿಗೆ ನಡೆಸಲಾಗುತ್ತದೆ.

ICSE, ISC 2020 ಫಲಿತಾಂಶ ಪ್ರಕಟ: ಚೆಕ್‌ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌