ಆ್ಯಪ್ನಗರ

ಆನ್‌ಲೈನ್‌ ಶಿಕ್ಷಣ ಪ್ರಮೋಷನ್‌ಗೆ ಯುಜಿಸಿ'ಯಿಂದ ಸಮಿತಿಗಳ ರಚನೆ

ಕೊರೊನಾ ಸಮಸ್ಯೆಯಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಪರೀಕ್ಷೆಗಳು, ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಆನ್‌ಲೈನ್‌ ಲರ್ನಿಂಗ್ ಪ್ರಮೋಷನ್‌ ಕುರಿತು ಪರಿಶೀಲನೆಗಾಗಿ ಎರಡು ಸಮಿತಿಗಳನ್ನು ರೂಪಿಸಿದೆ.

Vijaya Karnataka Web 14 Apr 2020, 10:41 am
ಕೊರೊನಾ ಸಮಸ್ಯೆಯಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಪರೀಕ್ಷೆಗಳು, ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಆನ್‌ಲೈನ್‌ ಲರ್ನಿಂಗ್ ಪ್ರಮೋಷನ್‌ ಕುರಿತು ಪರಿಶೀಲನೆಗಾಗಿ ಎರಡು ಸಮಿತಿಗಳನ್ನು ರೂಪಿಸಿದೆ.
Vijaya Karnataka Web online learning promotion
online learning promotion


ಯುಜಿಸಿ ಅಧ್ಯಕ್ಷರಾದ ಡಿ ಪಿ ಸಿಂಗ್ ರವರು ಮಾತನಾಡಿ " ವಿದ್ಯಾರ್ಥಿಗಳಿಗೆ ಪರೀಕ್ಷೆ, ಪಾಠ-ಪ್ರವಚನದ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಅವರ ಮುಂದಿನ ಶೈಕ್ಷಣಿಕ ಚಟುವಟಿಕೆಗಳು ಹೇಗಿರಲಿವೆ, ಏನಾಗಲಿವೆ ಎಂದು ಚಿಂತನೆ ಆರಂಭವಾಗಿದೆ. ಅವರ ಹಿತದೃಷ್ಟಿಯಿಂದ ಎರಡು ಸಮಿತಿಗಳನ್ನು ರೂಪಿಸಲಾಗಿದೆ. ಒಂದು ಸಮಿತಿ ಪರೀಕ್ಷೆ ಮತ್ತು ಶೈಕ್ಷಣಿಕ ಕಾಲೆಂಡರ್ ಬಗ್ಗೆ ಯೋಜನೆ ರಚಿಸಲಿದೆ" ಎಂದಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಬಾಕಿ ಉಳಿದಿರುವ ಪಠ್ಯಕ್ರಮವನ್ನು ಮುಗಿಸುವುದು ಹೇಗೆ, ಪರೀಕ್ಷೆಗಳನ್ನು ಕೈಗೊಳ್ಳುವುದು ಹೇಗೆ, ವಿದ್ಯಾರ್ಥಿಗಳನ್ನು ಹಿತದೃಷ್ಟಿಯಿಂದ ವಿವಿಗಳು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಗತ್ಯವಾಗಿ ಚಿಂತಿಸಬೇಕಿದೆ.

"ಸಮಿತಿಗಳ ಸಲಹೆಗಳನ್ನು ಒಂದು ವಾರದೊಳಗೆ ಸ್ವೀಕರಿಸಿ ನಂತರ ವಿವಿಗಳು ಕೈಗೊಳ್ಳಬೇಕಾದ ಕ್ರಮಗಳೇನು, ಅನುಸರಿಸಬೇಕಾದ ಮಾರ್ಗದರ್ಶನಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಡೆಯಿಂದ ನೀಡಲಾಗುತ್ತದೆ," ಎಂದಿದ್ದಾರೆ.

" ಮತ್ತೊಂದು ಕಮಿಟಿ ಬಹಳ ಪ್ರಾಮುಖ್ಯವಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಆನ್‌ಲೈನ್‌ ಎಜುಕೇಷನ್‌ಗೆ ಪ್ರಮೋಟ್‌ ಮಾಡುವ ಕುರಿತದ್ದಾಗಿದೆ. ಈ ಸಮಯದಲ್ಲಿ ಇದು ಅಗತ್ಯ. ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದು. ಆದ್ದರಿಂದ ಆನ್‌ಲೈನ್‌ ಲರ್ನಿಂಗ್ ಮತ್ತು ಇ-ಎಜುಕೇಷನ್ ಉತ್ತಮ ಮಾರ್ಗವಾಗಿದೆ," ಎಂದು ಯುಜಿಸಿ ಅಧ್ಯಕ್ಷರು ಹೇಳಿದ್ದಾರೆ.

ಕೋವಿಡ್-19 ವಿರುದ್ಧ ಹೋರಾಡಲು ವಿವಿಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 'ಆರೋಗ್ಯ ಸೇತು' ಮೊಬೈಲ್‌ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಯುಜಿಸಿ ಚೇರ್‌ಮನ್ ವಿನಂತಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌