ಆ್ಯಪ್ನಗರ

ಕಾಮೆಡ್‌ಕೆ 2020 ಪ್ರವೇಶ ಪತ್ರ ಪ್ರಕಟ

ದಿ ಕನ್ಸಾರ್ಟಿಯಮ್ ಆಫ್‌ ಮೆಡಿಕಲ್, ಇಂಜಿನಿಯರಿಂಗ್ ಅಂಡ್ ಡೆಂಟಲ್ ಕಾಲೇಜ್‌ ಆಫ್‌ ಕರ್ನಾಟಕ (ComedK), ಕಾಮೆಡ್‌ಕೆ ಪರೀಕ್ಷೆಗೆ ಪ್ರವೇಶ ಪತ್ರ ...

Vijaya Karnataka 11 Aug 2020, 12:32 pm
ದಿ ಕನ್ಸಾರ್ಟಿಯಮ್ ಆಫ್‌ ಮೆಡಿಕಲ್, ಇಂಜಿನಿಯರಿಂಗ್ ಅಂಡ್ ಡೆಂಟಲ್ ಕಾಲೇಜ್‌ ಆಫ್‌ ಕರ್ನಾಟಕ (ComedK), ಕಾಮೆಡ್‌ಕೆ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್‌ ಮಾಡಬಹುದು.
Vijaya Karnataka Web ಕಾಮೆಡ್‌ಕೆ 2020 ಪ್ರವೇಶ ಪತ್ರ ಪ್ರಕಟ


ಪದವಿ ಪೂರ್ವ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್‌ ಕೋರ್ಸ್‌ಗಳಿಗೆ, ಅಂಡರ್ ಗ್ರಾಜುಯೇಟ್ ಎಂಟ್ರ್ಯಾನ್ಸ್‌ ಟೆಸ್ಟ್ (UGET-2020) ಆಗಿರುವ ComedK ಅನ್ನು ಆಗಸ್ಟ್‌ 19, 2020 ರಂದು ನಡೆಸಲಿದೆ. ಪರೀಕ್ಷೆಯನ್ನು ಅಂದು ಎರಡು ಸೆಷನ್‌ಗಳಲ್ಲಿ ನಡೆಸಲಾಗುತ್ತದೆ.

ಮೊದಲ ಸೆಷನ್‌ ಪರೀಕ್ಷೆಯು ಬೆಳಿಗ್ಗೆ 09-00 ರಿಂದ ಮಧ್ಯಾಹ್ನ 12-00 ಗಂಟೆ ವರೆಗೆ ನಡೆಸಲಾಗುತ್ತದೆ. ಎರಡನೇ ಸೆಷನ್‌ ಅನ್ನು ಮಧ್ಯಾಹ್ನ 02-30 ರಿಂದ ಸಂಜೆ 05-30 ರವರೆಗೆ ನಡೆಸಲಾಗುತ್ತದೆ.

ಕಾಮೆಡ್‌ಕೆ 2020 ಪರೀಕ್ಷೆಗೆ ಪ್ರವೇಶ ಪತ್ರ ಪಡೆಯಲು ಅಧಿಕೃತ ವೆಬ್‌ಸೈಟ್‌ comedk.org ಗೆ ಭೇಟಿ ನೀಡಬೇಕು. ಅಭ್ಯರ್ಥಿಗಳ ಲಾಗಿನ್‌ ಐಡಿ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು.

ವಸತಿ ಶಿಕ್ಷಣ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಪುನಾರಂಭ

ಪರೀಕ್ಷೆಗೆ ಹಾಜರಾಗುವ ಮುನ್ನ ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಳ್ಳಲು, ಮತ್ತು ಪಾಲಿಸಲು ಸೂಚಿಸಲಾಗಿದೆ. ಅಭ್ಯರ್ಥಿಗಳಿಗೆ ಇತರೆ ಪ್ರಶ್ನೆಗಳು, ಸಹಾಯ ಅಗತ್ಯವಿದ್ದಲ್ಲಿ ಇ-ಮೇಲ್‌ ವಿಳಾಸ studenthelpdesk@comedk.org ಗೆ ಬರೆಯಬಹುದು.

ಕಾಮೆಡ್‌ಕೆ ಯುಜಿಇಟಿ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಮೇಲೆ ತಿಳಿಸಿದ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ComedK UGET admit card 2020

ಮೇಲಿನ ಲಿಂಕ್‌ ಕ್ಲಿಕ್ ಮಾಡಿದ ನಂತರ ಓಪನ್‌ ಆಗುವ ಪೇಜ್‌ನಲ್ಲಿ, ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ನೀಡಿ, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ದಿ ಕನ್ಸಾರ್ಟಿಯಮ್ ಆಫ್‌ ಮೆಡಿಕಲ್, ಇಂಜಿನಿಯರಿಂಗ್ ಅಂಡ್ ಡೆಂಟಲ್ ಕಾಲೇಜ್‌ ಆಫ್‌ ಕರ್ನಾಟಕ, ಅಂಡರ್ ಗ್ರಾಜುಯೇಟ್ ಎಂಟ್ರ್ಯಾನ್ಸ್‌ ಟೆಸ್ಟ್ ಅನ್ನು ಪದವಿ ಪೂರ್ವ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸಲಾಗುತ್ತದೆ.

ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಡಿಪ್ಲೊಮ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌