ಆ್ಯಪ್ನಗರ

NTA ARPIT 2020 ಪ್ರವೇಶ ಪತ್ರ ಪ್ರಕಟ.. ಡೌನ್‌ಲೋಡ್‌ಗೆ ಲಿಂಕ್‌ ಇಲ್ಲಿದೆ

ARPIT 2020 ಪರೀಕ್ಷೆಗೆ ಅಪ್ಲಿಕೇಶನ್‌ ಸಲ್ಲಿಸಿರುವ ಅಭ್ಯರ್ಥಿಗಳು ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

Vijaya Karnataka Web 5 Feb 2020, 12:16 pm
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜನವರಿ 29, 2020 ರಂದು ARPIT 2020 (Annual Research Programme in Teaching) ಪರೀಕ್ಷೆಗೆ ಅಡ್ಮಿಟ್‌ ಕಾರ್ಡ್ ಅನ್ನು ಅಫೀಶಿಯಲ್ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳಿಗೆ ಪ್ರಕಟಿಸಿದೆ. ಈ ಪರೀಕ್ಷೆಗೆ ಆನ್‌ಲೈನ್‌ ರಿಜಿಸ್ಟ್ರೇಷನ್ ಸಲ್ಲಿಸಿರುವ ಅಭ್ಯರ್ಥಿಗಳು ಎನ್‌ಟಿಎ ವೆಬ್‌ಗೆ ಭೇಟಿ ನೀಡಿ ಪರೀಕ್ಷೆ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Vijaya Karnataka Web NTA ARPIT 2020 admit card
NTA ARPIT 2020 hall ticket


ARPIT 2020 ಆನ್‌ಲೈನ್‌ ರಿಜಿಸ್ಟ್ರೇಷನ್‌ಗೆ ಜನವರಿ 17 ರಿಂದ ಜನವರಿ 27, 2020 ರ ವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿತ್ತು. ಪರೀಕ್ಷೆ ಪ್ರವೇಶ ಪತ್ರವನ್ನು ಜನವರಿ 29 ರ ಬದಲಾಗಿ ಫೆಬ್ರವರಿ 5 ರಂದು ವೆಬ್‌ಸೈಟ್‌ ntaarpit.nic.in ಗೆ ಭೇಟಿ ನೀಡಿ ಡೌನ್‌ಲೋಡ್‌ ಮಾಡಬಹುದು ಎಂದು ತಿಳಿಸಿತ್ತು. ಅಂತೆಯೇ ಇಂದಿನಿಂದ ಅಡ್ಮಿಟ್ ಕಾರ್ಡ್‌ ಪಡೆಯಬಹುದಾಗಿದೆ.

ಎಆರ್‌ಪಿಐಟಿ 2020 ಪರೀಕ್ಷೆಗೆ ಅಪ್ಲಿಕೇಶನ್‌ ಸಲ್ಲಿಸಿರುವ ಅಭ್ಯರ್ಥಿಗಳು ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

KARTET 2020 ಪರೀಕ್ಷಾ ವಿಧಾನ, ದಿನಾಂಕ, ಪಠ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

ARPIT 2020 ಪರೀಕ್ಷೆಯು ಫೆಬ್ರವರಿ 16, 2020 ರಂದು ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಫಲಿತಾಂಶವನ್ನು ಫೆಬ್ರವರಿ 26, 2020 ರಂದು ಪ್ರಕಟಿಸಲಾಗುತ್ತದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ?
- ಅಧಿಕೃತ ವೆಬ್‌ಸೈಟ್‌ ntaarpit.nic.in ಗೆ ಭೇಟಿ ನೀಡಿ.
- 'NTA ARPIT 2020' ಪ್ರವೇಶ ಪತ್ರಕ್ಕೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
- ಓಪನ್‌ ಆದ ಹೊಸ ಪೇಜ್‌ನಲ್ಲಿ ಎರಡು ಆಯ್ಕೆಗಳಿರುತ್ತವೆ.
- ಅಪ್ಲಿಕೇಶನ್‌ ನಂಬರ್ ಜೊತೆಗೆ ಪಾಸ್‌ವರ್ಡ್‌ ಅಥವಾ ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್‌ ಆಗಬೇಕು.
- ಪ್ರವೇಶ ಪತ್ರ ಪ್ರದರ್ಶನವಾಗುತ್ತದೆ. ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರವೇಶ ಪತ್ರ ಡೌನ್‌ಲೋಡ್‌ಗಾಗಿ ಡೈರೆಕ್ಟ್‌ ಲಿಂಕ್ ಕ್ಲಿಕ್ ಮಾಡಿ

ಉನ್ನತ ಶಿಕ್ಷಣ: ಇಲಿನಾಯ್ಸ್ ವಿಶ್ವವಿದ್ಯಾಲಯದ ಜತೆ ಒಡಂಬಡಿಕೆಗೆ ನಿರ್ಧಾರ

ಉನ್ನತ ಶಿಕ್ಷಣ ಬೋಧಕರ ಸ್ಕಿಲ್‌ಗಳನ್ನು ಹೆಚ್ಚಿಸಲು ARPIT ಅಭಿವೃದ್ಧಿಪಡಿಸಲಾಗಿದೆ. ಆದರೆ ಬೋಧಕೇತರ ಅಭ್ಯರ್ಥಿಗಳು ಸಹ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಈ ಪರೀಕ್ಷೆ ತೆಗೆದುಕೊಳ್ಳಬಹುದು. ARPIT (ಆನ್ಯುವಲ್ ರೀಫ್ರೆಶರ್ ಪ್ರೋಗ್ರಾಮ್‌ ಇನ್ ಟೀಚಿಂಗ್) ಪ್ರಮುಖ ಮತ್ತು ಅನನ್ಯವಾದ ಆನ್‌ಲೈನ್‌ ವೃತ್ತಿಪರ ಕೋರ್ಸ್‌ ಆಗಿದ್ದು, SWAYAM ಮೂಲಕ 15 ಲಕ್ಷಕ್ಕೂ ಹೆಚ್ಚು ಉನ್ನತ ಶಿಕ್ಷಣ ಬೋಧಕರ ಕೌಶಲ ಅಭಿವೃದ್ಧಿ ಧ್ಯೇಯ ಹೊಂದಲಾಗಿದೆ. ಎನ್‌ಟಿಎ ಮೊಟ್ಟಮೊದಲಿಗೆ ARPIT ಪರೀಕ್ಷೆಯನ್ನು ಮಾರ್ಚ್ 30, 2019 ರಂದು ನಡೆಸಿತ್ತು. ಈ ಪರೀಕ್ಷೆ ಬರೆದು ಪಾಸ್‌ ಆದವರಿಗೆ ಯುಜಿಸಿ ಇಂದ 'ಸರ್ಟಿಫಿಕೇಟ್‌ ಆಫ್‌ ಅಡ್ವಾನ್ಸ್'‌ ಪ್ರಮಾಣ ಪತ್ರ ನೀಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌