ದೇಶದ 41 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್ಗಳ ದಾಖಲಾತಿಗೆ ಶೀಘ್ರದಲ್ಲೇ ಪ್ರವೇಶ ಪರೀಕ್ಷೆ ನಡೆಯಲಿದ್ದು, ಡಿಗ್ರಿ ಕೋರ್ಸ್ಗೆ ಸೇರ ಬಯಸುವವರು ಈ ಪರೀಕ್ಷೆ ಬರೆಯಬೇಕಾಗಬಹುದು. ಜೆಎನ್ಯು, ಬನಾರಸ್, ದೆಹಲಿ ವಿಶ್ವವಿದ್ಯಾಲಯಗಳು ಸೇರಿದಂತೆ ಒಟ್ಟು 41 ಕೇಂದ್ರೀಯ ವಿವಿಗಳು ವಿವಿಧ ಪದವಿ ತರಗತಿಗಳ ಪ್ರವೇಶಕ್ಕಾಗಿ ಸೆಂಟ್ರಲ್ ಯುನಿವರ್ಸಿಟೀಸ್ ಕಾಮನ್ ಎಂಟ್ರ್ಯಾನ್ಸ್ ಟೆಸ್ಟ್ (CUCET) ನಡೆಸಲು ಚಿಂತನೆ ನಡೆಸಿವೆ.
ಕೇಂದ್ರೀಯ ವಿವಿಗಳ ಸಿಯುಸಿಇಟಿ'ಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು. ಏಪ್ರಿಲ್ ಕೊನೆ ವಾರದಲ್ಲಿ ಈ ಬಗ್ಗೆ ಶಿಕ್ಷಣ ಸಚಿವಾಲಯವು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
KSET 2021: ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಮುಂದೂಡಿಕೆ
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು 2020 ರ ಡಿಸೆಂಬರ್ನಲ್ಲಿ ವರದಿಯನ್ನು ಸಲ್ಲಿಸಿತ್ತು. ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ಡಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ 'ಗರಿಷ್ಠ ಗುಣಮಟ್ಟದ ಆಪ್ಟಿಟ್ಯೂಡ್ ಟೆಸ್ಟ್' ನಡೆಸಲು ಇರುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಈ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ವರದಿಯ ಶಿಫಾರಸು ಪ್ರಕಾರ, ದೇಶದಾದ್ಯಂತ ಮೊದಲ CUCET ಬರುವ ಜೂನ್ ತಿಂಗಳಲ್ಲಿ ಜರುಗುವ ನಿರೀಕ್ಷೆ ಇದೆ.
ಸಿಯುಸಿಇಟಿ ಅನ್ನು ವರ್ಷಕ್ಕೆ ಕನಿಷ್ಠ 2 ಬಾರಿ ನಡೆಸಲು ಸಮಿತಿ ಶಿಫಾರಸು ನೀಡಿದೆ. ಆದಾಗ್ಯೂ ಪದವಿ ತರಗತಿ ಪ್ರವೇಶಕ್ಕೆ ಸಂಬಂಧಿಸಿದ ಕಾಮನ್ ಎಂಟ್ರ್ಯಾನ್ಸ್ ಟೆಸ್ಟ್ ಅನ್ನು ವರ್ಷಕ್ಕೊಮ್ಮೆ ಮಾತ್ರ ನಡೆಯಲಿದೆ.
ಒಟ್ಟು 41 ಕೇಂದ್ರೀಯ ವಿವಿಗಳ ಪೈಕಿ ಯಾವುದೇ ವಿವಿಯಲ್ಲಿ ಪ್ರವೇಶ ಪಡೆಯಲು ಸಿಇಟಿಗಾಗಿ ಒಂದೇ ಆನ್ಲೈನ್ ಅರ್ಜಿ ಸಲ್ಲಿಸಿದರೆ ಸಾಕು ಎಂದು ಮೂಲಗಳಿಂದ ತಿಳಿದಿದೆ.
ಮಹಾತ್ಮ ಗಾಂಧಿ ಹಿಂದಿ ವಿವಿಯಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನ