ಆ್ಯಪ್ನಗರ

ವಿಶೇಷ ಸ್ಥಾನಮಾನ ಬರೀ ಜಮ್ಮು-ಕಾಶ್ಮೀರಕ್ಕಷ್ಟೇ ಸೀಮಿತವಾಗಿತ್ತೆ? ಬೇರಾವ ರಾಜ್ಯಗಳಿಗೆ ಈ ಸೌಲಭ್ಯವಿದೆ?

ವಿಶೇಷ ಸ್ಥಾನಮಾನ ಜಮ್ಮು-ಕಾಶ್ಮೀರಕ್ಕಷ್ಟೇ ಸೀಮಿತವಾಗಿತ್ತೇ?, ದೇಶದ ಯಾವೆಲ್ಲ ರಾಜ್ಯಗಳಿಗೆ ಈ ಸೌಲಭ್ಯ ದೊರಕಿದೆ ಎಂಬ ಮಾಹಿತಿ ಇಲ್ಲಿದೆ.

Vijaya Karnataka Web 8 Aug 2019, 2:10 pm
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್‌ 370 ರದ್ದಿನಿಂದ ದೇಶಾದ್ಯಂತ ಸಡಗರ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಸ್ಥಾನಮಾನ ಜಮ್ಮು-ಕಾಶ್ಮೀರಕ್ಕಷ್ಟೇ ಸೀಮಿತವಾಗಿತ್ತೇ?, ದೇಶದ ಯಾವೆಲ್ಲ ರಾಜ್ಯಗಳಿಗೆ ಈ ಸೌಲಭ್ಯ ದೊರಕಿದೆ ಎಂಬ ಮಾಹಿತಿ ಇಲ್ಲಿದೆ.
Vijaya Karnataka Web Jammu Kashmir Special Status


ಆರ್ಟಿಕಲ್‌ 371 ಜೆ: ಹೈದರಾಬಾದ್‌ ಕರ್ನಾಟಕ
ಹೈದರಾಬಾದ್‌ ಕರ್ನಾಟಕದ ಆರು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ಆರ್ಟಿಕಲ್‌ 371 ವಿಧಿಧಿ ಕಲ್ಪಿಸಿದೆ. ಸ್ಥಳೀಯರಿಗೆ ಶಿಕ್ಷ ಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಈ ವಿಧಿಯು ಹೇಳುತ್ತದೆ. ಆರ್ಟಿಕಲ್‌ 371(ಜೆ) ಅನ್ವಯ ಉದ್ಯೋಗ ಮತ್ತು ಶಿಕ್ಷ ಣದಲ್ಲಿ ಮೀಸಲಾತಿಯು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂಬ ಆರೋಪವೂ ಇದೆ.

ಆರ್ಟಿಕಲ್‌ 371ಡಿ ಮತ್ತು ಇ: ಆಂಧ್ರಪ್ರದೇಶ
1974ರಂದು ಸಂವಿಧಾನಕ್ಕೆ ಸೇರ್ಪಡೆಗೊಂಡ ಈ ವಿಧಿಯು ಉದ್ಯೋಗ ಮತ್ತು ಶಿಕ್ಷ ಣದಲ್ಲಿ ಆಂಧ್ರದ ಜನರಿಗೆ ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸಿದೆ. ಆಂಧ್ರವಾಸಿಗಳಿಗೆ ಉದ್ಯೋಗ ಮತ್ತು ಶಿಕ್ಷ ಣದಲ್ಲಿ ಮೀಸಲು ಖಾತ್ರಿಪಡಿಸುವ ವಿಶೇಷಾಧಿಕಾರವನ್ನು ಈ ವಿಧಿಯು ನೀಡಿದೆ.

ಆರ್ಟಿಕಲ್‌ 371ಎ: ನಾಗಾಲ್ಯಾಂಡ್‌
ನಾಗಾ ಜನರ ಹಿತರಕ್ಷಣೆಗೋಸ್ಕರ ಜಾರಿಗೊಳಿಸಲಾದ ವಿಧಿಧಿಯಿದು. ದೇಶದ ಇತರೆ ರಾಜ್ಯಗಳಲ್ಲಿ ಅನ್ವಯವಾಗುವ ಕಾನೂನುಗಳು ನಾಗಾ ಪಂಗಡದ ಸಾಂಪ್ರದಾಯಿಕ ನಿಯಮಗಳಿಗೆ ಅನ್ವಯವಾಗುವುದಿಲ್ಲ. ಇನ್ನು ನಾಗಾಲ್ಯಾಂಡ್‌ನ ಭೂಮಿ ಮತ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ವರ್ಗಾವಣೆಯ ವಿಚಾರಗಳೂ ಅಲ್ಲಿನ ಜನರಿಗೇ ಮೀಸಲಾಗಿದೆ.

ಆರ್ಟಿಕಲ್‌ 371 ಸಿ: ಮಣಿಪುರ
ಮಣಿಪುರದ ಪರ್ವತ ಪ್ರದೇಶಗಳ ಶ್ರೇಯೋಭಿವೃದ್ಧಿಯಲ್ಲಿ ಈ ವಿಧಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಸ್ಸಾಂನಂತೆಯೇ ಮಣಿಪುರದಲ್ಲೂ ಕೂಡ ಬೆಟ್ಟ ಪ್ರದೇಶಗಳಿಂದ ಆಯ್ಕೆಯಾದ ಸದ್ಯಸರನ್ನೊಳಗೊಂಡ ಶಾಸಕಾಂಗ ಸಮಿತಿಯನ್ನು ರಚಿಸಲಾಗಿದೆ.

ಆರ್ಟಿಕಲ್‌ 371 ಎಫ್‌: ಸಿಕ್ಕಿಂ
1975ರಲ್ಲಿ ಸಿಕ್ಕಿಂ ಭಾರತದ 22ನೇ ರಾಜ್ಯವಾಗಿ ಸೇರ್ಪಡೆಗೊಂಡಾಗ ಅಳವಡಿಸಲಾದ ವಿಧಿಯಿದು. ಈಶಾನ್ಯ ರಾಜ್ಯಗಳಲ್ಲೇ ಅತಿ ಶಾಂತ ರಾಜ್ಯವಾಗಿ ಸಿಕ್ಕಿಂ ಉಳಿದಿರುವುದಕ್ಕೆ ಆರ್ಟಿಕಲ್‌ 371ಎಫ್‌ ಪಾತ್ರ ಮಹತ್ತರದ್ದು.

ಆರ್ಟಿಕಲ್‌ 371 ಎಚ್‌: ಅರುಣಾಚಲಪ್ರದೇಶ
ಅರುಣಾಚಲದಲ್ಲಿ ಚೀನಾ ದೇಶದ ಹಸ್ತಕ್ಷೇಪವನ್ನು ಹತ್ತಿಕ್ಕುವಲ್ಲಿ ಈ ವಿಧಿ ಪ್ರಮುಖ ಪಾತ್ರ ವಹಿಸಿದೆ. ಈ ವಿಧಿಯ ಆಧಾರದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳ ನಿರ್ಣಯವನ್ನು ರದ್ದು ಮಾಡಬಹುದಾಗಿದೆ.

ಆರ್ಟಿಕಲ್‌ 371ಬಿ: ಅಸ್ಸಾಂ
ಈ ವಿಧಿಧಿಯ ಪ್ರಕಾರ ಅಸ್ಸಾಂನ ಬುಡಕಟ್ಟು ಪ್ರದೇಶಗಳಿಂದ ಚುನಾಯಿತರಾದ ರಾಜಕಾರಣಿಗಳನ್ನು ಒಳಗೊಂಡ ಪ್ರತ್ಯೇಕ ಶಾಸಕಾಂಗ ಸಭೆಯ ಸಮಿತಿಯನ್ನು ರಚಿಸಲು ರಾಜ್ಯಪಾಲರಿಗೆ ರಾಷ್ಟ್ರಪತಿಗಳು ಅಧಿಕಾರ ದಯಪಾಲಿಸಿದ್ದಾರೆ.

ಆರ್ಟಿಕಲ್‌ 371 ಐ: ಗೋವಾ
ಆರ್ಟಿಕಲ್‌ 371 ಐ ಅಡಿಯಲ್ಲಿ ಭೂ ಮಾರಾಟ, ಆಸ್ತಿಗಳ ಮಾಲೀಕತ್ವದ ವಿಚಾರದಲ್ಲಿ ಕಾನೂನುಗಳನ್ನು ರೂಪಿಸುವ ವಿಶೇಷಾಧಿಧಿಕಾರ ಗೋವಾ ವಿಧಾನಸಭೆಗೆ ಇದೆ.

ಆರ್ಟಿಕಲ್‌ 371 ಜಿ: ಮಿಜೋರಾಂ
ಈ ವಿಧಿಯು ನಾಗಾಲ್ಯಾಂಡ್‌ಗೆ ಅನ್ವಯವಾಗುವ ಆರ್ಟಿಕಲ್‌ 371ಎಗೆ ಸಾಮ್ಯತೆ ಹೊಂದಿದೆ. ಈ ಭಾಗದಲ್ಲೂ ಹೊರಗಿನ ರಾಜ್ಯಗಳವರಿಗೆ ಜಾಗ ಖರೀದಿಸುವ ಅಧಿಕಾರವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌