ಆ್ಯಪ್ನಗರ

ವಿಶ್ವ ಹೆಪಟೈಟಿಸ್ ದಿನ: ಒಂದಿಷ್ಟು ಮಾಹಿತಿ

ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್‌ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್‌ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸಲು ಆಚರಿಸಲಾಗುವ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Vijaya Karnataka 28 Jul 2019, 2:20 pm
ಏನಿದು ಹೆಪಟೈಟಿಸ್‌ : ಯಕೃತ್ತಿನಲ್ಲಿ (ಲಿವರ್‌) ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್‌ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್‌ಗಳಿಂದ ಹೆಪಟೈಟಿಸ್‌ ಅನ್ನು ಹೆಪಟೈಟಿಸ್‌ ಎ,ಬಿ, ಸಿ ಮತ್ತು ಡೆಲ್ಟಾ ಫ್ಯಾಕ್ಟರ್‌ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು.
Vijaya Karnataka Web H B


ದಿನ ಹೇಗೆ ಆರಂಭವಾಯಿತು?

2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್‌ ದಿನ ಆಚರಣೆಯನ್ನು ಜತೆಗೆ ಜುಲೈ 28 ಹೆಪಟೈಟಿಸ್‌ ವೈರಸ್‌ ಕಂಡು ಹಿಡಿದ ಮತ್ತು ಹೆಪಟೈಟಿಸ್‌ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್‌ ಪ್ರಶಸ್ತಿ ವಿಜೇತ ಪ್ರೊಫೆಸರ್‌ ಬರೂಚ ಸಾಮ್ಯುಯಲ್‌ ಬ್ಲೂಮ್‌ಬರ್ಗ್‌ ಅವರ ಜನ್ಮದಿನವಾಗಿದೆ. ಅವರ ಗೌರವಾರ್ಥ ಜುಲೈ 28 ಅನ್ನು ವಿಶ್ವ ಹೆಪಟೈಟಿಸ್‌ ದಿನವಾಗಿ ಆಚರಿಸಲಾಗುತ್ತದೆ.


ಹರಡುವುದು ಹೇಗೆ ?
: ಪಿತ್ತಜನಕಾಂಗವು ಮನುಷ್ಯನ ದೇಹದ ಮುಖ್ಯ ಅಂಗವಾಗಿದ್ದು, ಕಾರ್ಬೋಹೈಡ್ರೇಟ್ಸ್‌, ಪ್ರೋಟಿನ್‌ಗಳನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿನೀಡುತ್ತದೆ. ಕಲುಷಿತ ನೀರು,
ಸ್ವಚ್ಛಗೊಳಿಸದ ಸಿರಿಂಜ್‌ ಉಪಯೋಗ, ತಪಾಸಣೆಗೊಳಪಡಿಸದ ರಕ್ತ ಪಡೆಯುವುದರಿಂದ ಹೆಪಟೈಟಿಸ್‌ ಕಾಯಿಲೆ ಬರುತ್ತದೆ. ಹೆಪಟೈಟಿಸ್‌ ಎ ಮತ್ತು ಇ ಮಾದರಿಯ ವೈರಸ್‌ಗಳು ಕಲುಷಿತ ಆಹಾರ
ಮತ್ತು ನೀರಿನಿಂದ ಹರಡುತ್ತವೆ. ಬಿ.ಸಿ ಮತ್ತು ಡಿ ಮಾದರಿಯ ವೈರಸ್‌ಗಳು ಸೋಂಕು ತಗುಲಿದ ವ್ಯಕ್ತಿಗಳ ದೇಹಗಳ ಸ್ರಾವದಿಂದ ಹರಡುತ್ತದೆ. ಹೆಪಟೈಟಿಸ್‌ ಬಿ
ಮತ್ತು ಸಿ ಸೋಂಕುಗಳು ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಮೂಲ ಕಾರಣವಾಗುತ್ತದೆ.

ಹೆಪಟೈಟಿಸ್‌ ಬಿ:
ಹೆಪಟೈಟಿಸ್‌ ಬಿ ಸೋಂಕು ಪಿತ್ತಜನಕಾಂಗದ ಕ್ಯಾನ್ಸರ್‌ಗೂ ಕಾರಣವಾಗುತ್ತದೆ. ಒಂದು ಬಾರಿ ಲಿವರ್‌ ಕ್ಯಾನ್ಸರ್‌ಗೆ ತುತ್ತಾದ ರೋಗಿಯ ರೋಗ ನಿರೋಧಕ ಶಕ್ತಿ ಕುಂದುತ್ತದೆ. ತೂಕ ಇಳಿಕೆಯಿಂದ ಬಳಲುತ್ತಾರೆ. ಕ್ಯಾನ್ಸರ್‌ ಪಿತ್ತ ಜನಕಾಂಗದಿಂದ ದೇಹದ ಇತರೆ ಭಾಗಗಳಿಗೂ ಹರಡುತ್ತದೆ ಹಾಗೂ ಇದು ಸಾವಿಗೂ ಕಾರಣವಾಗುತ್ತದೆ. ಮಾರಕ ಹೆಪಟೈಟಿಸ್‌ ರೋಗಕ್ಕೆ ಲಸಿಕೆಯೇ
ಪರಿಹಾರ. ಈ ಲಸಿಕೆಯಿಂದಾಗಿ ಹೆಪಟೈಟಿಸ್‌ ಬಿ ಸೋಂಕು, ಸಿರೋಸಿಸ್‌ ಮತ್ತು ಲಿವರ್‌ ಕ್ಯಾನ್ಸರ್‌ ತಡೆಗಟ್ಟಬಹುದು.

ರೋಗ ಲಕ್ಷಣಗಳು : ಆಯಾಸ, ಕೀಲುನೋವು, ಸಣ್ಣಗೆ ಜ್ವರ, ತಲೆಸುತ್ತುವಿಕೆ, ವಾಂತಿ, ಹಸಿವಾಗದಿರುವಿಕೆ, ಹೊಟ್ಟೆ ನೋವು, ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಮುಂತಾದವು ಹೆಪಟೈಟಿಸ್‌ ಲಕ್ಷಣಗಳಾಗಿವೆ.

ತಡೆಗಟ್ಟುವುದು ಹೇಗೆ? : ಸುರಕ್ಷಿತವಾದ ನೀರು ಮತ್ತು ಆಹಾರ ಸೇವನೆ,ರಕ್ತ ಪೂರಣ ಮಾಡುವಾಗ ಮತ್ತು ರಕ್ತದ ಕಣಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಮುಂಜಾಗ್ರತೆ ವಹಿಸುವುದು, ಒಬ್ಬ ವ್ಯಕ್ತಿ ಬಳಸಿದ ಸೂಜಿಯನ್ನು ಮತ್ತೊಬ್ಬ ವ್ಯಕ್ತಿ ಬಳಸದೇ ಇರುವುದು ಹಾಗೂ ಲಸಿಕೆ ಹಾಕಿಸಿಕೊಳ್ಳುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌