Please enable javascript.C Basavalingaiah,ಸಿ. ಬಸವಲಿಂಗಯ್ಯ - c basavalingaiah bags bv karanth smriti puraskar - Vijay Karnataka

ಸಿ. ಬಸವಲಿಂಗಯ್ಯ

Vijaya Karnataka 5 Mar 2019, 5:00 am
Subscribe

ರಂಗನಿರ್ದೇಶಕ ಸಿ. ಬಸವಲಿಂಗಯ್ಯ ಅವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) 2018ನೇ ಸಾಲಿನ ಪ್ರತಿಷ್ಠಿತ ಬಿ.ವಿ.ಕಾರಂತ ಸ್ಮೃತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

c basavalingaiah bags bv karanth smriti puraskar
ಸಿ. ಬಸವಲಿಂಗಯ್ಯ
ರಂಗನಿರ್ದೇಶಕ ಸಿ. ಬಸವಲಿಂಗಯ್ಯ ಅವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) 2018ನೇ ಸಾಲಿನ ಪ್ರತಿಷ್ಠಿತ ಬಿ.ವಿ.ಕಾರಂತ ಸ್ಮೃತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ನಿರ್ದೇಶನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಈ ಗೌರವ ಸಂದಿದೆ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವ್ಯಾಸಂಗ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ರಂಗಾಯಾಣಕ್ಕೆ ಇವರು ನಿರ್ದೇಶಿಸಿದ ಕುಸುಮಬಾಲೆ,ಟಿಪ್ಪುವಿನ ಕನಸುಗಳು, ಪ್ರಪಂಚ ಪ್ರವಾಹ, ಗಾಂಧಿ ್ಖ/ಖ ಗಾಂಧಿ ನಾಟಕಗಳು ಮುಖ್ಯವಾಗಿವೆ. ಸಮುದಾಯ ತಂಡಕ್ಕಾಗಿ ಅಲ್ಲಮನ ಅದ್ಭುತ, ನ್ಯಾಯ, ಸತಿಯೊಡನೆ ಸಹಗಮನ, ಜೋಗತಿ ಕಲ್ಲು, ಏಕಲವ್ಯ, ತದ್ರೂಪಿ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಹಿಂದಿ, ತೆಲುಗು, ಅಸ್ಸಾಮಿ, ಮಲಯಾಳಂ ಭಾಷೆಗಳಲ್ಲೂ ನಾಟಕಗಳ ನಿರ್ದೇಶನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಾಟಕವನ್ನು ರಂಗಪ್ರಯೋಗಕ್ಕೆ ಅಳವಡಿಸಿದ್ದು ಇವರ ಸಾಧನೆಯ ಪ್ರಮುಖ ಮೈಲುಗಲ್ಲು. ಹೈದರಾಬಾದ್‌ ದೂರದರ್ಶನದಲ್ಲಿ ಇವರ ಹಲವಾರು ನಾಟಕಗಳು ಪ್ರಸಾರವಾಗಿವೆ. ಬಸವಲಿಂಗಯ್ಯ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ (ಎನ್‌.ಎಸ್‌.ಡಿ.)ಪ್ರಾದೇಶಿಕ ಕೇಂದ್ರದ ಸಂಪನ್ಮೂಲ ಸಹಾಯಕ ನಿರ್ದೇಶಕ, ಮೈಸೂರು ರಂಗಾಯಣದ ನಿರ್ದೇಶಕರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್‌, ಅಂಬೇಡ್ಕರ್‌ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ