ಆ್ಯಪ್ನಗರ

ಫಿಫಾ ಕಾರ್ಯನಿರ್ವಾಹಕ ಮಂಡಳಿಗೆ ಪ್ರಫುಲ್‌ ಪಟೇಲ್‌ ಆಯ್ಕೆ

ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವ ಪ್ರಫುಲ್‌ ಮನೋಹರ್‌ ಭಾಯ್‌ ಪಟೇಲ್‌ ಫಿಫಾ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Vijaya Karnataka 11 Apr 2019, 5:00 am
ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವ ಪ್ರಫುಲ್‌ ಮನೋಹರ್‌ ಭಾಯ್‌ ಪಟೇಲ್‌ ಫಿಫಾ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಜಕಾರಣಿ ಮತ್ತು ಉದ್ಯಮಿಯಾಗಿರುವ ಪ್ರಫುಲ್‌ 1985ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಗೋಂಡಿಯಾದ ಮುನ್ಸಿಪಲ್‌ ಕೌನ್ಸಿಲ್‌ ಪ್ರತಿನಿಧಿಯಾಗಿ ಆಯ್ಕೆಯಾಗುವ ಮೂಲಕ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. 1991, 1996 , 1998 ಮತ್ತು 2009ರಲ್ಲಿ ಲೋಕಸಭೆಗೆ ಚುನಾಯಿತರಾದರು. 1991-96ರ ವರೆಗೆ ಅರಣ್ಯ ಮತ್ತು ಪರಿಸರ ಸಚಿವಾಲಯ ಸಮಿತಿ, 1994-96ರವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ, 1995-96ರವರೆಗೆ ಗೃಹ ವ್ಯವಹಾರಗಳ ಸಮಿತಿ, 1996-97ರವರಗೆ ಹಣಕಾಸು ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ನೇಮಕವಾದರು. 2004ರಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಆಯ್ಕೆಯಾದರು. ಇವರು, ಸಿಗೇ ಗ್ರೂಪ್‌ ಎಂಬ ತಂಬಾಕು ಸಂಸ್ಥೆಯೊಂದನ್ನು ಕೂಡ ನಡೆಸುತ್ತಿದ್ದಾರೆ. 2012ರಿಂದ ಪ್ರಫುಲ್‌, ಆಲ್‌ ಇಂಡಿಯಾ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಬಹ್ರೆನ್‌ನಲ್ಲಿ ನಡೆದ ಎಎಫ್‌ಸಿ ಕಾಂಗ್ರೆಸ್‌ನ ಎಸ್‌ಎಎಫ್‌ಎಫ್‌ ರೀಜನ್‌ನ ಏಷ್ಯನ್‌ ಫುಟ್‌ಬಾಲ್‌ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. 2016ರಲ್ಲಿ ಏಷ್ಯನ್‌ ಫುಟ್‌ಬಾಲ್‌ ಕಾನ್‌ಫೆಡರೇಷನ್‌ನ ಹಿರಿಯ ಉಪಾಧ್ಯಕ್ಷರಾಗಿ ನೇಮಕವಾದರು. 2017ರಲ್ಲಿ ನಾಲ್ಕು ವರ್ಷದ ಅವಧಿಗೆ ಫಿಫಾ ಹಣಕಾಸು ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಇವರು ಬಾಂಬೆ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಪ್ರಫುಲ್‌ ಪಟೇಲ್‌ ಅವರು ಫೆಬ್ರವರಿ 17, 1957ರಲ್ಲಿ ಕೋಲ್ಕೊತಾದಲ್ಲಿ ಜನಿಸಿದರು.
Vijaya Karnataka Web member of fifas executive council praful patel profile
ಫಿಫಾ ಕಾರ್ಯನಿರ್ವಾಹಕ ಮಂಡಳಿಗೆ ಪ್ರಫುಲ್‌ ಪಟೇಲ್‌ ಆಯ್ಕೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌